10 ಶಾಲೆಗಳಿಗೆ ಭಾರತೀಯ ಹಾಕಿ ಟೀಂ ಆಟಗಾರರ ಹೆಸರಿಟ್ಟ ಪಂಜಾಬ್​ ಸರ್ಕಾರ

10 ಶಾಲೆಗಳಿಗೆ ಭಾರತೀಯ ಹಾಕಿ ಟೀಂ ಆಟಗಾರರ ಹೆಸರಿಟ್ಟ ಪಂಜಾಬ್​ ಸರ್ಕಾರ

ಚಂಡೀಘಡ: ಪಂಜಾಬ್ ಶಾಲಾ ಶಿಕ್ಷಣ ಸಚಿವ ವಿಜರ್ ಇಂದೆರ್ ಸಿಂಗ್ಲಾ ತಮ್ಮ ರಾಜ್ಯದ 10 ಶಾಲೆಗಳಿಗೆ ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಭಾರತೀಯ ಹಾಕಿ ಟೀಂನ ಆಟಗಾರರ ಹೆಸರುಗಳನ್ನ ಮರುನಾಮಕರಣ ಮಾಡಿದ್ದಾರೆ.

ಇದನ್ನೂ ಓದಿ: ಪುರುಷರ ಹಾಕಿಯಲ್ಲಿ ಭಾರತಕ್ಕೆ ಕಂಚಿನ ಪದಕ -41 ವರ್ಷಗಳ ಬಳಿಕ ಒಲಿಂಪಿಕ್ಸ್​ನಲ್ಲಿ ಟೀಂ ಇಂಡಿಯಾ ಸಾಧನೆ

ಶಾಲೆಗಳ ಹೆಸರನ್ನ ಮರುನೇಮಕ ಮಾಡಲು ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅನುಮತಿ ನೀಡಿದ್ದಾರೆ. ಮಿಥಾಪುರ್ ಹಾಗೂ ಜಲಂಧರ್​ನ ಸರ್ಕಾರಿ ಹಿರಿಯ ಪ್ರೌಢ ಶಾಲೆಗಳಿಗೆ ಕ್ಯಾಪ್ಟನ್ ಮನ್​ಪ್ರೀತ್ ಸಿಂಗ್ ಹೆಸರಿಡಲಾಗಿದೆ. ಮಿಥಾಪುರ್​ನ ಶಾಲೆಯನ್ನು ಇನ್ನುಮುಂದೆ ಕ್ಯಾಪ್ಟನ್ ಮನ್​ಪ್ರೀತ್ ಸಿಂಗ್ ಸರ್ಕಾರಿ ಹಿರಿಯ ಪ್ರೌಢಶಾಲೆ ಎಂದು ಕರೆಯಲಾಗುವುದು ಎಂದಿದ್ದಾರೆ.

blank

ಇನ್ನು ಅಮೃತ್​ಸರ್​ನ ಜಿಎಸ್ಎಸ್​ಎಸ್​ ಶಾಲೆಗೆ ಉಪನಾಯಕ ಹರ್ಮನ್​ಪ್ರೀತ್ ಸಿಂಗ್ ಹೆಸರು ಇಡಲಾಗುವುದು ಎಂದಿದ್ದಾರೆ. ಹೀಗೆ ಒಟ್ಟು 10 ಶಾಲೆಗಳ ಹೆಸರುಗಳನ್ನು ಒಲಿಂಪಿಕ್ಸ್​ನಲ್ಲಿ ಪದಕ ಗೆದ್ದ ಹಾಕಿ ಟೀಂ ಆಟಗಾರರ ಹೆಸರಿಡಲಾಗುವುದು ಎಂದಿದ್ದಾರೆ.

Source: newsfirstlive.com Source link