2023ರ ವಿಧಾನಸಭಾ ಚುನಾವಣೆಗೆ ಕೃಷಿಯೇ ದಳಪತಿಗಳ ಅಸ್ತ್ರ..?

2023ರ ವಿಧಾನಸಭಾ ಚುನಾವಣೆಗೆ ಕೃಷಿಯೇ ದಳಪತಿಗಳ ಅಸ್ತ್ರ..?

ಪಕ್ಷ ಸಂಘಟನೆಗಿಂತಲೂ ದಳಪತಿಗಳು ಕೃಷಿ ಚಟುವಟಿಕೆಯಲ್ಲಿ ತೊಡಗಿರುವುದು ಯಾಕೆ? ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಹೌದು, ದಿನದ 24 ಗಂಟೆಯೂ ಕೃಷಿ ಧ್ಯಾನದಲ್ಲಿ ಮುಳುಗಿದ್ದಾರೆ ಮಾಜಿ ಮುಖ್ಯಮಂತ್ರಿ ಎಚ್​.ಡಿ ಕುಮಾರಸ್ವಾಮಿ. ರಾಜಕೀಯಕ್ಕಿಂತಲೂ ಕೃಷಿಗೆ ಹೆಚ್ಚು ಆದ್ಯತೆ ನೀಡುತ್ತಿರುವ ಮಾಜಿ ಸಿಎಂ, ಬಿಡದಿಯ ತೋಟದಲ್ಲಿ ಸಂಪೂರ್ಣವಾಗಿ ಉಳುಮೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಖುದ್ದು ತಾವೇ ನಿಂತು 20 ಎಕರೆಗೂ ಹೆಚ್ಚು ಭೂಮಿಯಲ್ಲಿ ಕೃಷಿ ಚಟುವಟಿಕೆ ನಡೆಸುತ್ತಿರುವ ಕುಮಾರಸ್ವಾಮಿ, ರಾಗಿ, ಜೋಳ, ಟೊಮ್ಯಾಟೋ, ಬದನೆ ಕಾಯಿ, ಮೆಣಸಿನಕಾಯಿ ಬೆಳೆಯುತ್ತಿದ್ದಾರೆ.

blank

ಅಷ್ಟೇ ಅಲ್ಲದೇ ತೆಂಗು, ಅಡಕೆ ಬೆಳೆಯುತ್ತಿರುವ ಕುಮಾರಸ್ವಾಮಿ, ಹಲವು ಬೆಳೆಗಳನ್ನ ಮಾರುಕಟ್ಟೆಯಲ್ಲಿ ಮಾರಾಟ ಮಾಡುತ್ತಿದ್ದಾರೆ. ಉಪಕಸುಬುಗಳಾದ ಹಸು, ಕುರಿ, ಮೇಕೆ, ಕೋಳಿ ಸಾಕಣೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಕುಮಾರಸ್ವಾಮಿಯ ಈ ನಡೆ ಹಿಂದೆ‌ ರಾಜಕೀಯ ಲೆಕ್ಕಾಚಾರ ಇದ್ಯಾ? ವಿರೋಧಿಗಳ ಟೀಕೆಗಳಿಗೆ ಉತ್ತರ ಕೊಡೋದರ ಜೊತೆಗೆ ಚುನಾವಣಾ ಅಸ್ತ್ರವನ್ನಾಗಿ ಬಳಸಿಕೊಳ್ಳಲು ರೈತರಾದ್ರಾ ಎಂಬ ಚರ್ಚೆ ಶುರುವಾಗಿದೆ.

blank

ನಕಲಿ‌ ಮಣ್ಣಿನ ಮಕ್ಕಳು, ನಕಲಿ ರೈತರೆಂದು ವಿರೋಧಿಗಳಿಂದ ಟೀಕೆ ವ್ಯಕ್ತವಾಗುತ್ತಿದೆ. ನೇಗಿಲು ಹಿಡಿದು ಉಳುಮೆ ಮಾಡದವರು ಮಣ್ಣಿನ ಮಕ್ಕಳು ಹೇಗೆ ಎಂಬ ಟೀಕೆಗಳು ಕೇಳಿ ಬರುತ್ತಿವೆ. ರಾಜಕೀಯ ವಿರೋಧಿಗಳ ಟೀಕೆಗಳಿಗೆ ಉತ್ತರ ನೀಡಲು‌ ಸ್ವತಃ ಉಳುವ ಯೋಗಿಯಾಗಿದ್ದಾರಂತೆ ಹೆಚ್‌‌ಡಿಕೆ.

ಇದನ್ನೂ ಓದಿ: ‘ಮಾದರಿ ತೋಟ’ ನಿರ್ಮಾಣಕ್ಕಾಗಿ ಪ್ಲಾನ್​; ಟ್ರ್ಯಾಕ್ಟರ್ ಓಡಿಸಿದ ಕುಮಾರಸ್ವಾಮಿ

ಸಿಎಂ ಆಗಿದ್ದಾಗ ಇಸ್ರೇಲ್ ಕೃಷಿ ಪದ್ಧತಿಗೆ ಒತ್ತು ನೀಡಿದ್ದರೂ ನಂತರ ಕಡೆಗಣನೆ ಎಂಬ ಬೇಸರ ಕುಮಾರಸ್ವಾಮಿ ಅವರದ್ದು. ಹಾಗಾಗಿ 2023ರ ವಿಧಾನಸಭಾ ಚುನಾವಣೆಗೆ ಕೃಷಿಯನ್ನು ಅಸ್ತ್ರವನ್ನಾಗಿ ಬಳಸಿಕೊಳ್ಳುವ ಲೆಕ್ಕಾಚಾರ. ತಾವೇ ಪ್ರಗತಿಪರ ರೈತನಾಗಿ ಏನೆಲ್ಲಾ ಮಾಡಿದೆ ಎಂಬುದನ್ನ ರೈತರ ಮುಂದೆ ಬಿಂಬಿಸುವುದು ಹೆಚ್​ಡಿಕೆ ಗುರಿ ಎನ್ನಲಾಗಿದೆ.

ಕೃಷಿ ಜೊತೆಗೆ ಉಪಕಸುಬು ಮಾಡುವ ಮೂಲಕ ತಾನೂ ಒಬ್ಬ ರೈತನೆಂಬುದನ್ನ ಜನರ ಮುಂದೆ ತೋರಿಸುವುದು. ಅಧಿಕಾರಕ್ಕೆ ಬಂದ್ರೆ ಕೃಷಿಗೆ ಹೆಚ್ಚು ಆದ್ಯತೆ ಎಂಬುದನ್ನ ಬಿಂಬಿಸುವುದು. ಈ‌ ಮೂಲಕ ರೈತರ ಮತಗಳನ್ನು ಪಕ್ಷದತ್ತ ಹೆಚ್ಚಿನ ಸಂಖ್ಯೆಯಲ್ಲಿ ಸೆಳೆಯುವ ‌ಲೆಕ್ಕಾಚಾರವಾಗಿದೆಯಂತೆ.

ಇದನ್ನೂ ಓದಿ: ನಾನು ಸಹಾ ರೈತನ ಮಗ ಎಂದ ನಟ ನಿಖಿಲ್ ಕುಮಾರಸ್ವಾಮಿ

Source: newsfirstlive.com Source link