ಭಾರತಕ್ಕೆ ಬಂದ ಅಫ್ಘಾನ್​ ಭಾರತೀಯರು.. ಮನ ಕಲುಕುತ್ತವೆ ಕರುಣಾಜನಕ ಕತೆಗಳು

ಭಾರತಕ್ಕೆ ಬಂದ ಅಫ್ಘಾನ್​ ಭಾರತೀಯರು.. ಮನ ಕಲುಕುತ್ತವೆ ಕರುಣಾಜನಕ ಕತೆಗಳು

ಅಫ್ಘಾನ್​ನಲ್ಲಿ ತಾಲಿಬಾನ್​​ಗಳ ರಕ್ಕಸ ರೂಪ ದಿನದಿಂದ ದಿನಕ್ಕೆ ಕೆರಳುತ್ತ ಇರೋದನ್ನು ನೋಡಿದ್ದೀವಿ. ಅಲ್ಲಿನ ಪರಿಸ್ಥಿತಿ ಕೈ-ಮೀರಿ ಹೋಗಿದೆ. ಅಫ್ಘಾನ್ ಪರಿಸ್ಥಿತಿ ನಿಜಕ್ಕೂ ಘನಘೋರವಾಗಿದೆ. ಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಹೆಣ್ಮಕ್ಕಳು ನಾಪತ್ತೆಯಾಗುತ್ತಿದ್ದಾರೆ. ಬದುಕಿದ್ರೆ ಸಾಕು ಈ ಬಡಜೀವ ಅಂದ್ಕೊಂಡ ಜನರು, ಹುಟಿದ್ದ ಊರನ್ನ ಬಿಟ್ಟು ಬರೀ ಕೈನಲ್ಲೇ ಅನ್ಯ ದೇಶಕ್ಕೆ ಹಾರಲು ಉತ್ಸುಕರಾಗಿದ್ದಾರೆ. ಯಾವಾಗ ಅಫ್ಘಾನಲ್ಲಿ ತಾಲಿಬಾನ್​ಗಳು ಮತ್ತೆ ಅಧಿಪತ್ಯ ಸ್ಥಾಪಿಸಲು ಶುರುವಾಯ್ತೋ ತಾಲಿಬಾನ್​ಗಳ ಅಟ್ಟಹಾಸ ಕೂಡ ಹೆಚ್ಚಾಗಿದೆ. ತಾಲಿಬಾನ್​ಗಳ ಪೈಶಾಚಿಕ ಕೃತ್ಯಗಳು ಅಲ್ಲಿಯ ಜನರನ್ನ ಜರ್ಜರಿತರನ್ನಾಗಿಸಿದೆ.

ಇನ್ನು ಅಫ್ಘಾನಿಸ್ತಾನದಲ್ಲಿ ಉಂಟಾಗಿರುವ ಅರಾಜಕತೆಯಿಂದ ಅಲ್ಲಿರುವ ಭಾರತೀಯರ ರಕ್ಷಣೆ ದೊಡ್ಡ ಸವಾಲಾ​​ಗಿ ಪರಿಣಮಿಸಿದೆ. ಈಗಾಗಲೇ ಅಮೆರಿಕ ಸೇನೆಯ ಸಹಕಾರದಿಂದ 2 ಬ್ಯಾಚ್​​ನಲ್ಲಿ ಭಾರತೀಯರನ್ನ ಸುರಕ್ಷಿತವಾಗಿ ಸ್ಥಳಕ್ಕೆ ಕರೆದುಕೊಂಡು ಬರಲಾಗಿದೆ. ಜೊತೆಗೆ ಇನ್ನುಳಿದವರನ್ನ ವಾಪಸ್ ಕರೆದುಕೊಂಡು ಬರುವ ಎಲ್ಲಾ ತಯಾರಿಗಳು ನಡೆಯುತ್ತಿವೆ.

blank

ಇಂದು ಕೂಡ ಆಫ್ಘಾನ್​​ನಲ್ಲಿ ಸಿಲುಕಿರುವ ಕೆಲ ಭಾರತೀಯರನ್ನ ತಾಯ್ನಾಡಿಗೆ ಕರೆತರಲಾಗಿದೆ. ಇಂದು ಇಂಡಿಯನ್ ಏರ್​ಫೋರ್ಸ್​ 107 ಭಾರತೀಯರನ್ನ ಸೇರಿ ಒಟ್ಟು 168 ಮಂದಿಯನ್ನ ಕರೆದುಕೊಂಡು ಬಂದಿದೆ. ಇಂದು ಬೆಳಗ್ಗೆ ದೆಹಲಿಯ ಸೇನಾ ವಾಯುನೆಲೆಗೆ ಬಂದು ಲ್ಯಾಂಡ್ ಆಗಿದ್ದಾರೆ ಅಂತಾ ವಿದೇಶಾಂಗ ಇಲಾಖೆ ತಿಳಿಸಿದೆ.

ಕಣ್ಣಿರು ತುಂಬಿಕೊಂಡೆ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದಾರೆ. ಬಳಿಕ ಅವರು ಹೇಳಿದ ಅಫ್ಘಾನ್​ ಎಂಬ ಕೂಪದ ಕತೆಗಳು ಯಾರನ್ನಾದ್ರು ಅರೆ ಕ್ಷಣ ಕಣ್ಣಾಲಿಗಳು ತೇವಗೊಳ್ಳುವಂತೆ ಮಾಡುತ್ತವೆ.

ವಿಮಾನ ನಿಲ್ದಾಣಕ್ಕೆ ಬಂದಿಳಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅಫ್ಘಾನ್​ನ ಭಾರತೀಯ ಮೂಲದ ಸಂಸದ ನರೇಂದ್ರ ಸಿಂಗ್​ ಕಣ್ಣೀರಾಗಿದ್ದು, ನಾವು 20 ವರ್ಷಗಳಿಂದ ಕಟ್ಟಿ ಬೆಳೆಸಿದ ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ನಿರ್ನಾಮ ಮಾಡಿದ್ದಾರೆ. ಈಗ ಅಲ್ಲಿ ಏನು ಉಳಿದಿಲ್ಲ, ನಾವು ಅಲ್ಲಿ ಸಾವಿನೊಂದಿಗೆ ಹೋರಾಡಿದ್ದೇವೆ, ನಮ್ಮನ್ನು ರಕ್ಷಿಸಿದ ಭಾರತಕ್ಕೆ ನಾವು ಚಿರಋಣಿಯಾಗಿದ್ದೇವೆ ಎಂದು ಭಾವುಕರಾಗಿದ್ರು.

ಆಫ್ಘಾನ್​ ಸಿಖ್ ನಾಗರಿಕರೊಬ್ಬರು ಮಾತನಾಡಿ, ನಮ್ಮ ದೇಶದ ಪರಿಸ್ಥಿತಿ ಹದಗೆಡುತ್ತಿದೆ. ಹಾಗಾಗಿ ನಾನು ನನ್ನ ಮಗಳು ಮತ್ತು ಇಬ್ಬರು ಮೊಮ್ಮಕ್ಕಳೊಂದಿಗೆ ಇಲ್ಲಿಗೆ ಬಂದೆ. ನಮ್ಮ ಭಾರತೀಯ ಸಹೋದರ, ಸಹೋದರಿಯರು ನಮ್ಮ ರಕ್ಷಣೆಗೆ ಬಂದರು. ತಾಲಿಬಾನಿಗಳು ನನ್ನ ಮನೆಯನ್ನು ಸುಟ್ಟು ಹಾಕಿದರು.. ಎಂದು ಕರಾಳ ಕ್ಷಣಗಳನ್ನು ನೆನೆದಿದ್ದಾರೆ.

ಇಷ್ಟೇ ಅಲ್ಲದೆ ಸೇನಾ ವಾಯುನೆಲೆಯಲ್ಲಿ ಮನಕುಲುಕುವ ಘಟನೆಯೊಂದು ಈಸಂದರ್ಭದಲ್ಲಿ ನಡೆದಿದೆ. ಅಫ್ಘಾನ್​ನಿಂದ ಬಂದಿಳಿಯುತ್ತಿದ್ದಂತೆ ಚಿಕ್ಕ ಮಗುವೊಂದು ಇನ್ನೊಂದು ಮಗುವಿಗೆ ಅಪ್ಪುಗೆ ನೀಡಿ ಸಂಭ್ರಮಿಸುತ್ತಿರುವ ರೀತಿ ನೋಡಿದರೆ, ಪಂಜರದಿಂದ ಮುಕ್ತವಾದ ಪಕ್ಷಿ ಬಾನಲ್ಲಿ ಎಷ್ಟು ಖುಷಿಯಾಗಿರತ್ತೋ ಅಷ್ಟೆ ಖುಷಿ ಆ ಮುಗ್ದ ಕಂದಮ್ಮನ ಮುಖದಲ್ಲಿತ್ತು..

Source: newsfirstlive.com Source link