ಒಟ್ಟಿಗೆ ವೀಕೆಂಡ್​​ ಮಸ್ತಿ​ ಮಾಡುತ್ತಿರುವ​​ ಮಲೈಕಾ ಆರೋರಾ, ಅರ್ಜುನ್​​ ಕಪೂರ್ ಫೋಟೋ ವೈರಲ್​​​​

ಒಟ್ಟಿಗೆ ವೀಕೆಂಡ್​​ ಮಸ್ತಿ​ ಮಾಡುತ್ತಿರುವ​​ ಮಲೈಕಾ ಆರೋರಾ, ಅರ್ಜುನ್​​ ಕಪೂರ್ ಫೋಟೋ ವೈರಲ್​​​​

ಬಾಲಿವುಡ್​​ ಖ್ಯಾತ ನಟಿ ಮಲೈಕಾ ಅರೋರಾಗೆ ಈಗ 47 ವರ್ಷ ವಯಸ್ಸು. ಈಕೆ ಪ್ರೀತಿಯಲ್ಲಿ ಮುಳುಗಿ ತೇಲುತ್ತಿರುವ ನಟ ಅರ್ಜುನ್​ ಕಪೂರ್​ಗೆ 35ರ ಪ್ರಾಯ. ಮಲೈಕಾಗೆ ಮದುವೆ ಆಗಿ ಒಂದು ಮಗು ಇದೆ. ನಿರ್ಮಾಪಕ ಅರ್ಬಾಜ್​ ಖಾನ್​​ಗೆ ಡಿವೋರ್ಸ್​ ನೀಡಿದ ಮಲೈಕಾ ಮತ್ತು ಅರ್ಜುನ್​ ಕಪೂರ್​​ ಜತೆ ಪ್ರೀತಿಯಲ್ಲಿದ್ದಾರೆ. ಯಾವ ಆಲೋಚನೆಯೂ ಇಲ್ಲದೇ ಸುತ್ತಾಟ ನಡೆಸುತ್ತಿದ್ದಾರೆ. ಇವರು ಎಲ್ಲಿಗೆ ಹೋದರೂ ಅದನ್ನು ಮಲೈಕಾ ಆರೋರಾ ಸೋಷಿಯಲ್​​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಾರೆ.

blank

ಡಿವೋರ್ಸ್​ ಬಳಿಕ ಅಂತೂ ಮಲೈಕಾ ತನ್ನ ಬಾಯ್​​ ಫ್ರೆಂಡ್​​ ಅರ್ಜುನ್​ ಕಪೂರ್ ಜತೆ ಹಾಯಾಗಿ ದಿನ ಕಳೆಯುತ್ತಿದ್ದಾರೆ. ತಮ್ಮ ಲವ್​​ ಬಗ್ಗೆ ಸೋಷಿಯಲ್​​ ಮೀಡಿಯಾದಲ್ಲಿ ಓಪನ್​ ಆಗಿ ಪೋಸ್ಟ್​ ಮಾಡುತ್ತಾರೆ. ಈಗ ವೀಕೆಂಡ್​​ ಮೋಜು ಮಸ್ತಿಯಲ್ಲಿ ತೊಡಗಿರುವ ಅರ್ಜುನ್​​ ಮತ್ತು ಮಲೈಕಾ ತಮ್ಮ ಫೋಟೋಗಳನ್ನು ತಮ್ಮ ಅಧಿಕೃತ ಇನ್​ಸ್ಟಾಗ್ರಾಂ​ನಲ್ಲಿ ಹಂಚಿಕೊಂಡಿದ್ದಾರೆ.

ಇದನ್ನೂ ಓದಿ: ‘ಬಿಗ್​​ ಬಾಸ್​​ ಮನೆಯಲ್ಲಿ ಕ್ಯಾಮೆರಾ ಎದುರೇ ನಗ್ನರಾಗಿ ‘ಅದನ್ನ’ ಮಾಡಿದ್ದಾರೆ’ ಸತ್ಯ ಬಿಚ್ಚಿಟ್ಟ ಸ್ಪರ್ಧಿ

ಮಲೈಕಾ ಮೊಬೈಲ್​​ ನೋಡುತ್ತಾ ಕುಳಿತ ಫೋಟೋ ಶೇರ್​​ ಮಾಡಿರುವ ಅರ್ಜುನ್​​, ಕೆಳಗಡೆ ಕ್ಯಾಪ್ಷನ್ ಶನಿವಾರ ಎಂದು ಬರೆದುಕೊಂಡಿದ್ದಾರೆ. ಅಲ್ಲದೇ ಮಲೈಕಾಗೆ ಟ್ಯಾಗ್​ ಮಾಡಿ ಖುಷಿ ಹಂಚಿಕೊಂಡಿದ್ದಾರೆ. ಇನ್ನೂ ಮಲೈಕಾ ಅರೋರಾ ಕೂಡ ಬೆಸ್ಟ್​ ಫೋಟೋ ಎವರ್ ಎಂದು ಅರ್ಜುನ್​​ ಕಪೂರ್​​ ಫೋಟೋ ಪೋಸ್ಟ್​ ಮಾಡಿದ್ದಾರೆ.

blank

Source: newsfirstlive.com Source link