ಅಫ್ಘಾನಿಸ್ತಾನದಲ್ಲಿ ಅಸುನೀಗುತ್ತಿವೆ ಕಂದಮ್ಮಗಳು.. ದಯನೀಯ ಸ್ಥಿತಿ ತಲುಪಿದ ಅಲ್ಪಸಂಖ್ಯಾತರ ಪಾಡು

ಅಫ್ಘಾನಿಸ್ತಾನದಲ್ಲಿ ಅಸುನೀಗುತ್ತಿವೆ ಕಂದಮ್ಮಗಳು.. ದಯನೀಯ ಸ್ಥಿತಿ ತಲುಪಿದ ಅಲ್ಪಸಂಖ್ಯಾತರ ಪಾಡು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್​ಗಳ ಅಟ್ಟಹಾಸ ಮುಗಿಲು ಮುಟ್ಟಿದೆ. ಜನರು ತಿನ್ನಲು ಅನ್ನ ಇಲ್ಲದೆ ನರಳುತ್ತಿದ್ದಾರೆ. ಅಫ್ಘಾನ್ ತಾಯಂದಿರು ತಮ್ಮ ಕರುಳ ಕುಡಿಯನ್ನ ತಂತಿಯ ಮೇಲೆ ಎಸೆಯುತ್ತಿದ್ದಾರೆ. ಪೊಲೀಸ್​ ಅಧಿಕಾರಿಗಳು, ಪತ್ರಕರ್ತರು ತಾಲಿಬಾನ್ ರಕ್ಕಸರ ಕ್ರೌರ್ಯಕ್ಕೆ ಬಲಿಯಾಗುತ್ತಿದ್ದಾರೆ.

ಬಂದೂಕು ಸಿಡಿಯುತ್ತಿದೆ.. ನೆತ್ತರು ಹರಿಯುತ್ತಿದೆ.. ತಾಲಿಬಾನ್​ ಕ್ರೌರ್ಯ ಮುಂದುವರೆದಿದೆ. ಅಮಾಯಕರು ಬೀದಿ ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ರಕ್ತಪಾತ ತಪ್ಪುತ್ತಿಲ್ಲ.. ಸಾವುಗಳು ನಿಲ್ಲುತ್ತಿಲ್ಲ. ಅಫ್ಘಾನಿಸ್ತಾನದ ಆರ್ತನಾದ ಮುಗಿಲು ಮುಟ್ಟಿದೆ. ಜಗತ್ತಿನ ಕಣ್ಣಿಗೆ ಕಾಣದ ಅದೆಷ್ಟೋ ಅನಾಚಾರಗಳು ತಾಲಿಬಾನ್​ ರಕ್ಕಸರ ಬಂದೂಕಿಗೆ ಬಲಿಯಾಗಿದೆ. ಇದು ಅಫ್ಘಾನ್ ಪರಿಸ್ಥಿತಿ.. ಇದು ಅಫ್ಘಾನ್ ದೇಶದ ಸದ್ಯದ ಸ್ಥಿತಿ ಗತಿ..

blank

“ಕಣ್ಣಾ ಮುಚ್ಚೆ ಕಾಡೆ ಗೂಡೆ ಆಟ ನಮ್ಮ ಬಾಳು, ಯಾರ್ಯಾರ ಹಣೆಲೀ ಏನೇನ್ ಬರ್ದಿದೆ ಬಲ್ಲವರ್ಯಾರು ಹೇಳು..? ಇರೋದೊಂದೆ ತಾಯಿ ಮಡಿಲು, ತೊರೆದರೆ ಹೇಗೆ ಹೆತ್ತ ಕರುಳು. ಕೇಳೋರ್ಯಾರು ನನ್ನ ಅಳಲು”. ಎಸ್​..ಅಫ್ಘಾನ್​ ಅಮ್ಮಂದಿರ ಅಳಲು. ಇನ್ನೂ ಕೂಡ ಪ್ರಪಂಚ ಏನೆಂದು ಗೊತ್ತಿಲ್ಲದ ಪುಟ್ಟ ಕಂದಮ್ಮಗಳು ಮನದ ನೋವು ಇದು.

ಅಫ್ಘಾನಿಸ್ತಾನದ ತಾಯಂದಿರಲ್ಲಿ ಕಣ್ಣೀರು ಭೋರ್ಗರೆದು ಬರುತ್ತಿದೆ. ಕರುಳ ಕುಡಿಯನ್ನೇ ಗಡಿಯಾಚೆಗೆ ಎಸೆದಿದ್ದಾರೆ. ಹೆತ್ತೊಡಲು ನೋವಿನ ಸಾಗರದಲ್ಲಿ ಮುಳುಗಿದೆ. ಅಲೆ ಅಲೆಯಾಗಿ ಅಪ್ಪಳಿಸುತ್ತಿರುವ ನೋವನ್ನ ತಡೆಯಲಾಗದೆ ತಾಯಂದಿರು ಕ್ಷಣ ಕಣ್ಷವೂ ಒದ್ದಾಡುತ್ತಿದ್ದಾರೆ. ಅಫ್ಘಾನ್ ಅಮ್ಮಂದಿರ ಒಡಲಲ್ಲಿ ನೋವಿನ ಅಲೆ ಎದ್ದಿದ್ದು, ನೋವಿನಲ್ಲೇ ಚೀರಾಡುತ್ತಿದ್ದಾರೆ. ಅಲ್ಲಿಯ ಒಂದೊಂದೇ ಹೃದಯವಿದ್ರಾವಕ ಘಟನೆಗಳು ಎಂತಹ ಕಟುಕರ ಕಣ್ಣಲ್ಲೂ ಕರುಣೆಯ ನದಿ ಹರಿಯುವಂತಿದೆ.

ಅಫ್ಘಾನಿಸ್ತಾನದಲ್ಲಿ ಅಸುನೀಗುತ್ತಿವೆ ಕಂದಮ್ಮಗಳು
ತಂತಿಬೇಲಿ ಮೇಲೆ ಮಕ್ಕಳನ್ನ ಎಸೆದ ತಾಯಂದಿರು
ತಂತಿಯಲ್ಲಿ ಸಿಕ್ಕಿಹಾಕಿಕೊಂಡ ಮಕ್ಕಳ ಕಥೆ ಏನು?

ತಾಲಿಬಾನ್​ ರಕ್ಕಸರಿಂದ ಅಫ್ಘಾನಿಸ್ಥಾನದಲ್ಲಿ ಬದುಕೋದೆ ಒಂದು ಸಾಹಸಮಯವಾಗಿದೆ. ಯಾವ ಕ್ಷಣದಲ್ಲಾದ್ರು, ತಾಲಿಬಾನ್​ಗಳ ಬಂದೂಕಿನಲ್ಲಿರುವ ಗುಂಡು ದೇಹ ಹೊಕ್ಕಬಹುದು ಅನ್ನೋ ಭಯದಲ್ಲಿ ಜನರು ಬದುಕುತ್ತಿದ್ದಾರೆ. ಇದ್ರ ನಡುವೆ ಕೆಲ ತಾಯಂದಿರು ತಮ್ಮ ಮಕ್ಕಳಾದ್ರು ಬದುಕಲಿ ಎಂದು ಕಾಬೂಲ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳ ಬಳಿಯ ಮುಳ್ಳು ತಂತಿಗಳ ಮೇಲೆ ಎಸೆದಿದ್ದರು. ತಾವು ಎಸೆದಿರುವ ಮಕ್ಕಳು ಆ ಕಡೆಯಲ್ಲಿ ಸೇಫ್​ ಆಗಿದ್ದಾರೆಂದು ಭಾವಿಸಿದ್ರು.

blank

ಅಫ್ಘಾನ್ ತಾಯಂದಿರು ಮಕ್ಕಳನ್ನ ಎಸೆದ ನಂತರ, ಆ ಕಂದಮ್ಮಗಳ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇನ್ನೂ ಸಿಕ್ಕಿಲ್ಲ.. ಆ ಮಕ್ಕಳ ಏನಾದವು..? ಅವರು ಯಾರ ಕೈ ಸೇರಿದವು..? ಆ ಕಂದಮ್ಮಗಳ ಭವಿಷ್ಯವೇನು..? ಇದ್ರ ಬಗ್ಗೆ ಯಾರೊಬ್ಬರಿಗೂ ಸರಿಯಾದ ಮಾಹಿತಿ ಇಲ್ಲ. ಕೆಲವು ಮಕ್ಕಳು ಸೈನಿಕರ ಕೈ ಸೇರಿದೆಯಾದ್ರು..ಎಲ್ಲಾ ಮಕ್ಕಳ ಬಗ್ಗೆ ಇನ್​ಫರ್​ಮೇಷನ್ ಸಂಪೂರ್ಣವಾಗಿ ದೊರೆತಿಲ್ಲ. ತಾಯಂದಿರು ಎಸೆದಿರುವ ಮಕ್ಕಳು ತಂತಿಯಲ್ಲಿ ಸಿಲುಕಿ, ಪ್ರಾಣಕ್ಕೆ ಕುತ್ತು ಬಂದಿರುವ ಕುರಿತು ವರದಿಯಾಗಿದೆ. ಇದ್ರಿಂದ ಕರುಳು ಕುಡಿಗಳ ಎಸೆದಿರುವ ತಾಯಂದಿರಿಗೆ ಮತ್ತೊಮ್ಮೆ ಬರಸಿಡಿಲು ಬಡಿದಂತಾಗಿದೆ.

ಇಷ್ಟೇ ಅಲ್ಲ, ಕೆಲವರು ದೇಶವನ್ನ ಬಿಡೋಕೆ ಹೊರಟ ಸಂದರ್ಭದಲ್ಲಿ ಹತ್ತಾರು ಮಕ್ಕಳು ಅಸುನೀಗಿದ್ದಾರೆ. ಕಾಬೂಲ್​ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಇತ್ತೀಚಿಗೆ ಹೆಜ್ಜೆ ಹೆಜ್ಜೆಗೂ ಜನ ಕಾಣಿಸಿಕೊಂಡಿದ್ರು. ಈ ವೇಳೇ ಉಂಟಾದ ಕಾಲ್ತುಳಿತದಿಂದ ಕೂಡ ಮಕ್ಕಳು ಸಾವನಪ್ಪಿದ್ದಾರೆ ಎನ್ನಲಾಗಿದೆ.

ದಯನೀಯ ಸ್ಥಿತಿ ತಲುಪಿದ ಅಫ್ಘಾನ್ ಅಲ್ಪಸಂಖ್ಯಾತರ ಪಾಡು
ಅಲ್ಪಸಂಖ್ಯಾತ ಸಮುದಾಯಗಳ ಮೇಲೆ ಉಗ್ರರ ಕೆಂಗಣ್ಣು
ತಾಲಿಬಾನ್​ಗಳಿಂದ 9 ಮಂದಿ ಅಲ್ಪಸಂಖ್ಯಾತರ ಕಗ್ಗೊಲೆ

ಅಫ್ಘಾನಿಸ್ತಾನದಲ್ಲಿ ಬಹುಸಂಖ್ಯಾತರಾಗಿರುವ ಮುಸ್ಲಿಮರ ಪರಿಸ್ಥಿತಿ ಘನಘೋರವಾಗಿದ್ಮೇಲೆ,ಅಲ್ಲಿರುವ ಅಲ್ಲಿರುವ ಅಲ್ಪಸಂಖ್ಯಾತರ ಪರಿಸ್ಥಿತಿ ಹೇಗಿದೆ ಅನ್ನೋದನ್ನ ಕಲ್ಪಿಸಲು ಕೂಡ ಅಸಾಧ್ಯವಾಗಿದೆ. ಅಫ್ಘಾನಿಸ್ತಾನದಲ್ಲಿರುವ ಜನಾಂಗೀಯ ಅಲ್ಪಸಂಖ್ಯಾತರ ಮೇಲೆ ಉಗ್ರರು ಹದ್ದಿನ ಕಣ್ಣಿಟ್ಟಿದ್ದು, ಅಲ್ಪಸಂಖ್ಯಾತರ ಕಗ್ಗೊಲೆ ನಡೆಯುತ್ತಿದೆ. ಜನಾಂಗೀಯ ಅಲ್ಪಸಂಖ್ಯಾತರ ತಲಾಶ್ ಮಾಡುತ್ತಿರುವ ಉಗ್ರರು, ಅಂತವರನ್ನ ಗುರುತಿಸಿ ಹತ್ಯೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅಫ್ಘಾನಿಸ್ಥಾನದಲ್ಲಿ ಅಧಿಪತ್ಯ ಸ್ಥಾಪಿಸುತ್ತಾ ಬಂದಿರುವ ಉಗ್ರರು, ಕಳೆದೊಂದು ತಿಂಗಳಿನಿಂದ ಇಲ್ಲಿಯವರೆಗೆ ಅಲ್ಪಸಂಖ್ಯಾತ ಸಮುದಾಯದ 9 ಮಂದಿಯನ್ನ ಭೀಕರವಾಗಿ ಹತ್ಯೆ ಮಾಡಿದ್ದಾರೆ. ಜನಾಂಗೀಯ ಅಲ್ಪಸಂಖ್ಯಾತರನ್ನು ಗುರುತಿಸಿ ಕಿರುಕುಳ ನೀಡುತ್ತಿರುವ ತಾಲಿಬಾನ್​ಗಳು, ಪ್ರತಿರೋಧ ತೋರಿವರನ್ನು ನಿರ್ದಾಕ್ಷ್ಯಣ್ಯವಾಗಿ ಕೊಂದು ಹಾಕುತ್ತಿದ್ದಾರೆ. ಮುಖ್ಯ ರಸ್ತೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿರುವ ಉಗ್ರರು, ಅಲ್ಪ ಸಂಖ್ಯಾತರ ಚಲನವಲನಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಅಲ್ಪಸಂಖ್ಯಾತ ಸಮುದಾಯ ಮತ್ತಷ್ಟು ದಹನೀಯ ಸ್ಥಿತಿ ತಲುಪಿದ್ದು, ಜನರು ಭಯದಲ್ಲೇ ಬದುಕುತ್ತಿದ್ದಾರೆ.

blank

ತಾಲಿಬಾನ್​ ಕ್ರೂರಿಗಳಿಂದ ಪೊಲೀಸ್ ಸಿಬ್ಬಂದಿಯ ಹತ್ಯೆ

ಹೌದು..ಹಾಸ್ಯ ನಟರು, ಪತ್ರಕರ್ತರು, ತಮ್ಮ ವಿರೋಧಿ ಪಡೆಗಳನ್ನ ಹತ್ಯೆಮಾಡುತ್ತಿದ್ದ ತಾಲಿಬಾನ್​ಗಳು ಇದೀಗ ಪೊಲೀಸರನ್ನ ಕೂಡ ಹತ್ಯೆ ಮಾಡುತ್ತಿದ್ದಾರೆ. ಬಾದ್ಘಿಸ್‌ ಪ್ರಾಂತ್ಯದಲ್ಲಿ ದಕ್ಷ ಪೊಲೀಸ್ ಅಧಿಕಾರಿ ಎಂದು ಹೆಸರು ಪಡೆದಿದ್ದ ಹಾಜಿ ಮುಲ್ಲಾರನ್ನ ತಾಲಿಬಾನ್​ ರಕ್ಕಸರು ಹತ್ಯೆ ಮಾಡಿದ ದೃಶ್ಯ ಇದು. ತಾಲಿಬಾನ್​ಗಳ ವಿರುದ್ಧ ಸಮರ ಸಾರಿದ್ದ ಹಾಜಿ ಮುಲ್ಲಾ ಈಗಾಗಲೇ ತಾಲಿಬಾನ್​ ವಿರುದ್ದ ಕ್ರಮಗಳನ್ನ ಕೈಗೊಂಡಿದ್ರು. ಇದ್ರಿಂದ ಕುಪಿತಗೊಂಡಿದ್ದ ಈ ಹೇಡಿಗಳು ಇವರನ್ನ ಕಳೆದ ಹಲವು ದಿನಗಳಿಂದ ಹುಡುಕುತ್ತಿದ್ದರು. ಹಾಜಿ ಮುಲ್ಲಾ ತಾಲಿಬಾನ್​ಗಳ ಕೈಗೆ ಸಿಗುತ್ತಿದ್ದಂಗೆ ಅವರನ್ನ ಅತ್ಯಂತ ಕ್ರೂರವಾಗಿ ಚಿತ್ರ ಹಿಂಸೆ ನೀಡಿ ಹತ್ಯೆ ಮಾಡಿದ್ದಾರೆ. ಈ ಮೂಲಕ ತಮ್ಮ ರಕ್ತ ಸಿಕ್ತ ಅಧ್ಯಾಯವನ್ನ ಮುಂದುವರೆಸಿದ್ದಾರೆ.

ತಾಲಿಬಾನ್​ ಕ್ರೌರ್ಯದ ಬೆನ್ನಲ್ಲೆ ಆಹಾರಕ್ಕೆ ಹಾಹಾಕಾರ
ಹಸಿವಿನಿಂದ ನರಳುತ್ತಿರುವ 14 ಮಿಲಿಯನ್‌ ಜನರು
8 ದಿನಗಳಿಂದ ಬ್ಯಾಂಕ್ ಬಂದ್,ಎಟಿಎಂ ಖಾಲಿ ಖಾಲಿ

ಅಫ್ಘಾನ್ ತಾಲಿಬಾನ್ ತೆಕ್ಕೆಗೆ ಜಾರಿದ್ಮೇಲೆ ಅಫ್ಘಾನ್ ಚಿತ್ರಣವೇ ಸಂಪೂರ್ಣವಾಗಿ ಬದಲಾಗಿ ಬಿಟ್ಟಿದೆ. ಆಹಾರಕ್ಕೆ ಹಾಹಾಕಾರ ಎದ್ದಿದೆ. ಜನರು ತಿನ್ನಲು ಅನ್ನವಿಲ್ಲದ ನರಳುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ಸುಮಾರು 14 ಮಿಲಿಯನ್‌ ಜನರು ಹಸಿವಿನಿಂದ ನರಳುತ್ತಿದ್ದಾರೆ ಎಂದು ಯುಎನ್‌ ಆಹಾರ ಸಂಸ್ಥೆ ಹೇಳಿದೆ.

ಕೊರೊನಾ ವೈರಸ್ ಅಫ್ಘಾನಿಸ್ತಾನದ ಆರ್ಥಿಕತೆಯನ್ನ ಪಾತಾಳಕ್ಕೆ ಕುಸಿಯುವಂತೆ ಮಾಡಿತ್ತು. ಅಫ್ಘಾನಿಸ್ತಾನದ ಆರ್ಥಿಕತೆಯ ಮೇಲೆ ಸವಾರಿ ಮಾಡಿರುವ ಕೊರೊನಾ ಅಫ್ಘಾನಿಸ್ತಾನದ ಆರ್ಥಿಕ ಹಾಗೂ ಸಾಮಾಜಿಕ ಸ್ಥಿತಿಗೆ ಹೊಡೆತ ಕೊಟ್ಟಿತ್ತು. ಈ ನಡುವೆ ತಾಲಿಬಾನ್​ ಕ್ರೌರ್ಯವು ಆಹಾರದ ಕೊರತೆ ಉಂಟಾಗಲು ಕಾರಣವಾಗಿದೆ.
ಮೇರಿ ಎಲೆನ್‌-ವಿಶ್ವ ಆಹಾರ ಕಾರ್ಯಕ್ರಮದ ನಿರ್ದೇಶಕರು

ಅಫ್ಘಾನಿಸ್ತಾನದಲ್ಲಿ ಈಗಾಗಲೇ ನಗದು ಕೊರತೆ ಎದುರಾಗಿದೆ. ಬ್ಯಾಂಕ್​ಗಳು ಬಾಗಿಲು ಹಾಕಿ ಎಂಟು ದಿನಗಳು ಕಳೆದಿವೆ. ಇದ್ರಿಂದ ಅಫ್ಘಾನಿಸ್ತಾನದ ಹಲವು ಕಡೆ ಎಟಿಎಂಗಳು ಖಾಲಿಯಾಗಿವೆ. ತಾಲಿಬಾನ್​ಗಳ ಭಯದ ನಡುವೆಯೂ ಎಟಿಎಂಗೆ ಬಂದಿರುವ ಜನರು ದುಡ್ಡು ಇಲ್ಲದೆ ಬರೀಗೈಯಲ್ಲಿ ಮನೆಗೆ ಮರಳುವಂತಾಗಿದೆ. ಅಲ್ಲದೇ ದಿನನಿತ್ಯದ ಅಗತ್ಯ ವಸ್ತುಗನ್ನ ಖರೀದಿ ಮಾಡಲು ದುಡ್ಡು ಇಲ್ಲದಂತಾಗಿದೆ.

ಇವೆಲ್ಲವೂ ಅಫ್ಘಾನಿಸ್ತಾನದಲ್ಲಿ ಹೊರ ಬಂದ ಸತ್ಯಗಳಷ್ಟೇ.. ಇನ್ನೂ ತಾಲಿಬಾನ್​ಗಳ ಬಂದೂಕಿನ ಘರ್ಜನೆಗೆ ಅದೆಷ್ಟು ಸತ್ಯಗಳು ಮರೆಯಲ್ಲಿಯೇ ಮರೆಯಾಗಿದ್ಯೋ ಗೊತ್ತಿಲ್ಲ.. ಒಟ್ಟಿನಲ್ಲಿ ಯಾರದ್ದೋ ಅಧಿಕಾರದ ದುರಾಸೆಗೆ, ಇನ್ಯಾರದ್ದೋ ಕ್ರೂರತನಕ್ಕೆ ಅಲ್ಲಿ ಪುಟ್ಟ ಕಂದಮ್ಮಗಳು, ಅಮಾಯಕ ಜನರು ಬಲಿಪಶುವಾಗ್ತಿರೋದು ಮಾತ್ರ ನಿಜಕ್ಕೂ ದೊಡ್ಡ ದುರಂತ.

ತಾಲಿಬಾನ್​ಗಳ ಪೈಶಾಚಿಕ ಕೃತ್ಯಗಳಿಂದ ಅಫ್ಘಾನಿಸ್ತಾದಲ್ಲಿ ಇದೀಗ ತಿನ್ನುವ ಆಹಾರಕ್ಕೂ ಕೊರತೆ ಎದುರಾಗಿದೆ. ಜನರು ಕೈಯಲ್ಲಿ ದುಡ್ಡಿಲ್ಲದೆ, ತಿನ್ನಲು ಅನ್ನವಿಲ್ಲದೆ ಕಂಗಲಾಗಿ ಹೋಗಿದ್ದಾರೆ. ತಾಲಿಬಾನ್​ಗಳ ವಿರುದ್ಧ ಅಫ್ಘಾನ್​ ಜನರ ಸಹನೆಯ ಕಟ್ಟೆಯೊಡೆದು ಹೋಗಿದ್ದು, ಪ್ರತಿರೋಧದ ಅಲೆ ಎದ್ದಿದೆ. ಅಫ್ಘಾನ್​ ನಲ್ಲಿ ಮುಂದೇನಾಗುತ್ತೋ ಕಾದು ನೋಡಬೇಕಾಗಿದೆ.

Source: newsfirstlive.com Source link