ಅಫ್ಘಾನ್​ನಲ್ಲಿ ಯುದ್ಧದ ಪರಿಸ್ಥಿತಿ; 20 ಮಕ್ಕಳನ್ನ ಒತ್ತೆಯಾಳಾಗಿಟ್ಟುಕೊಂಡ ತಾಲಿಬಾನಿಗಳು

ಅಫ್ಘಾನ್​ನಲ್ಲಿ ಯುದ್ಧದ ಪರಿಸ್ಥಿತಿ; 20 ಮಕ್ಕಳನ್ನ ಒತ್ತೆಯಾಳಾಗಿಟ್ಟುಕೊಂಡ ತಾಲಿಬಾನಿಗಳು

ಕಾಬೂಲ್: ಅಫ್ಘಾನಿಸ್ತಾನವನ್ನ ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಅಲ್ಲಿನ ನಾರ್ದರ್ನ್ ಅಲಯನ್ಸ್ ತಾಲಿಬಾನಿಗಳ ವಿರುದ್ಧ ಸಮರ ಸಾರಿದೆ. ಪಂಜ್​ಶಿರ್ ಸೇರಿದಂತೆ 3 ಜಿಲ್ಲೆಗಳು ಈಗ ನಾರ್ದರ್ನ್ ಅಲಯನ್ಸ್ ಪಾಲಾಗಿವೆ ಎನ್ನುವ ಮಾಹಿತಿ ಇದೆ.

ಈ ಮಧ್ಯೆ ಕಾಶ್ನಾಬಾದ್ ಮತ್ತು ಬಾಘ್ಲಾನ್​ನ 20 ಮಕ್ಕಳನ್ನ ತಾಲಿಬಾನಿಗಳು ತಮ್ಮ ವಶಕ್ಕೆ ಪಡೆದು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಕಾಬೂಲ್ ಏರ್​​ಪೋರ್ಟ್​ನಲ್ಲಿ ಕಾಲ್ತುಳಿತ; ಇಂದು 7 ಮಂದಿ ಆಫ್ಘಾನರು ಸಾವು

ಒಂದೆಡೆ ತಾಲಿಬಾನಿಗಳ ವಿರುದ್ಧ ನಾರ್ದರ್ನ್ ಅಲಯನ್ಸ್ ಯುದ್ಧ ಸಾರಿದೆ.. ಈ ಮಧ್ಯೆ ತಮ್ಮ ಜಿಲ್ಲೆಗಳನ್ನು ನಾರ್ದರ್ನ್ ಅಲಯನ್ಸ್ ವಶಪಡಿಸಿಕೊಳ್ಳದಂತೆ ತಡೆಯಲು ತಾಲಿಬಾನಿಗಳು ಮಕ್ಕಳನ್ನು ಒತ್ತೆಯಾಳುಗಳನ್ನಾಗಿ ಇರಿಸಿಕೊಂಡಿದ್ದಾರೆ ಎನ್ನಲಾಗಿದೆ. ಇನ್ನು ನಾರ್ದರ್ನ್ ಅಲಯನ್ಸ್​ಗೆ ತಾಲಿಬಾನಿಗಳು 4 ಗಂಟೆಗಳ ಗಡುವು ನೀಡಿದ್ದು ಮಾತುಕತೆಗೆ ಆಹ್ವಾನಿಸಿದ್ದಾರೆ ಎಂದು ಹೇಳಲಾಗಿದೆ.

ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳು ಬಹುತೇಕ ದೇಶವನ್ನೇ ವಶಕ್ಕೆ ಪಡೆದುಕೊಂಡಿದ್ದು ಸರ್ಕಾರ ರಚಿಸಲು ಮುಂದಾಗಿದ್ದಾರೆ. ಈ ಮಧ್ಯೆ ತಾಲಿಬಾನಿಗಳಿಂದ ತಮ್ಮ ಪ್ರಾಣಕ್ಕೆ ಸಂಚಕಾರವಿದೆಯೆಂದು ಹಲವು ಪ್ರಜೆಗಳು ವಿದೇಶಗಳತ್ತ ಕಾಲ್ಕೀಳುತ್ತಿದ್ದಾರೆ.

Source: newsfirstlive.com Source link