ಓಣಂ ಪ್ರಯುಕ್ತ ಕೇರಳ ವಿದ್ಯಾರ್ಥಿಗಳ ಭರ್ಜರಿ ಡ್ಯಾನ್ಸ್.. ಕಣ್ಮರೆಯಾಗಿತ್ತು ಕೋವಿಡ್ ರೂಲ್ಸ್

ಓಣಂ ಪ್ರಯುಕ್ತ ಕೇರಳ ವಿದ್ಯಾರ್ಥಿಗಳ ಭರ್ಜರಿ ಡ್ಯಾನ್ಸ್.. ಕಣ್ಮರೆಯಾಗಿತ್ತು ಕೋವಿಡ್ ರೂಲ್ಸ್

ಉಡುಪಿ: ಓಣಂ ಪ್ರಯುಕ್ತ ಕಾಲೇಜು ವಿದ್ಯಾರ್ಥಿಗಳಿಂದ ಭರ್ಜರಿ ಡ್ಯಾನ್ಸ್ ನಡೆದ ವಿಡಿಯೋ ವೈರಲ್ ಆಗುತ್ತಿದೆ. ಉಡುಪಿ ಜಿಲ್ಲೆಯ ಕೋಟಾದ ಇಸಿಆರ್ ಕಾಲೇಜ್​‌ನಲ್ಲಿ ಕೇರಳದ ವಿದ್ಯಾರ್ಥಿಗಳು ಹಬ್ಬದ ಪ್ರಯುಕ್ತ ಕುಣಿದು ಕುಪ್ಪಳಿಸಿದ್ದಾರೆ.

ಇದನ್ನೂ ಓದಿ: #BIGDAY ನಾಳೆಯಿಂದ ರಾಜಾದ್ಯಂತ ಶಾಲೆ-ಕಾಲೇಜು ಓಪನ್; ಹೇಗಿದೆ ತಯಾರಿ?!

ಆದರೆ ಓಣಂ ಆಚರಣೆ ನೆಪದಲ್ಲಿ ಕೊರೊನಾ ನಿಯಮ ಮರೆತು ಉಪನ್ಯಾಸಕರು, ವಿದ್ಯಾರ್ಥಿಗಳು ಕುಣಿದದ್ದು ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ಕೇರಳದ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿದ್ದಾರೆ. ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಪಾಡಬೇಕು ಎಂಬ ನಿಯಮಕ್ಕೆ ಇಲ್ಲಿ ವಿದ್ಯಾರ್ಥಿಗಳಾಗಲೀ ಉಪನ್ಯಾಸಕರಾಗಲೀ ಕ್ಯಾರೇ ಎನ್ನಲಿಲ್ಲ ಎಂಬ ಆರೋಪ ಕೇಳಿಬಂದಿದೆ. ಹೀಗಾಗಿ ವಿದ್ಯಾರ್ಥಿಗಳ ಓಣಂ ಡ್ಯಾನ್ಸ್ ನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಇದನ್ನೂ ಓದಿ: ಜಿಮ್​​ನಲ್ಲಿ ಒಟ್ಟಿಗೇ ವರ್ಕೌಟ್​ ಮಾಡಿದ ರಶ್ಮಿಕಾ ಮಂದಣ್ಣ, ದೇವರಕೊಂಡ

Source: newsfirstlive.com Source link