ಜೆಡಿಎಸ್​​ ‘ಆಟಕ್ಕುಂಟು ಲೆಕ್ಕಕಿಲ್ಲ’ ಎಂದವರಿಗೆ ಟಾಂಗ್​​​ ಕೊಟ್ಟ ಎಚ್​​.ಡಿ. ದೇವೇಗೌಡ

ಜೆಡಿಎಸ್​​ ‘ಆಟಕ್ಕುಂಟು ಲೆಕ್ಕಕಿಲ್ಲ’ ಎಂದವರಿಗೆ ಟಾಂಗ್​​​ ಕೊಟ್ಟ ಎಚ್​​.ಡಿ. ದೇವೇಗೌಡ

ಬೆಂಗಳೂರು: ಈ ಬಾರಿಯ ಅಧಿವೇಶನದಲ್ಲಿ ಜನರ ಯಾವುದೇ ಸಮಸ್ಯೆಗಳ ಕುರಿತು ಚರ್ಚೆ ಮಾಡದೆ, ಕೇವಲ ಕಾಲ ಹರಣ ಮಾಡಿ ಸಮಯ ವ್ಯರ್ಥ ಮಾಡಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಕೇಂದ್ರ ಸರ್ಕಾರದ ವಿರುದ್ಧ ಕಿಡಿ ಕಾರಿದ್ದಾರೆ..

ನಗರದ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಆಯೋಜಿಸಿ ಮಾತನಾಡಿದ ಅವರು,ಜೆಡಿಎಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅಂತಾ ಕೆಲವರು ಟೀಕೆ ಮಾಡ್ತಾರೆ, ಮುಂದಿನ ಚುನಾವಣೆಯಲ್ಲಿ ಹೆಸರಿಗೂ ಇರೋದಿಲ್ಲ ಅಂತ ಹೇಳ್ತಾರೆ. ಮುಂದಿನ ಚುನಾವಣೆಯಲ್ಲಿ ಹೋರಾಟ ಮಾಡಿ ಅಸ್ತಿತ್ವ ಉಳಿಸಿಕೊಂಡೇ ಅಧಿಕಾರಕ್ಕೆ ಬರುತ್ತೇವೆ ಎಂದು ಎಂದು ಟೀಕಾಕಾರರಿಗೆ ಎಚ್ಚರಿಕೆ ನೀಡಿದ್ದಾರೆ. ನಮಗೆ ಯಾರ ಮೇಲೂ ದ್ವೇಷ ಇಲ್ಲ, ಪ್ರಾದೇಶಿಕ ಪಕ್ಷವಾಗಿ ಸಮಸ್ಯೆಗಳನ್ನು ಬಗೆಹರಿಸಬೇಕು ಅಷ್ಟೇ ಎಂದಿದ್ದಾರೆ..

ಇದನ್ನೂ ಓದಿ: ಕೋವಿಡ್ ನಿಯಮ ಉಲ್ಲಂಘನೆ; ಕೇಂದ್ರ ಸಚಿವನ ವಿರುದ್ಧ ಬರೋಬ್ಬರಿ 42 FIR

ನಾನು ಪಕ್ಷದ ಹಿರಿಯ ಮುಖಂಡನಾಗಿ ಕೈಲಾದ ಮಟ್ಟಿಗೆ ಹೋರಾಟದಲ್ಲಿ ಭಾಗಿಯಾಗುತ್ತೇನೆ. ನನಗೆ ಪಾದಯಾತ್ರೆ ಮಾಡುವುದು ಕಷ್ಟ . ಅದನ್ನು ಬಿಟ್ಟು ಉಳಿದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ ಎಂದು ಹೇಳಿದ್ದಾರೆ.

ಇನ್ನು ಕಾಂಗ್ರೆಸ್- ಬಿಜೆಪಿ ನಡುವೆ ನೆಹರು, ವಾಜಪೇಯಿ ಹೆಸರಿನಲ್ಲಿ ಕೆಸರೆರಚಾಟ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಯಾರೇ ಆಗಲಿ ಹಾಗೆಲ್ಲಾ ಮಾತಾಡಬಾರದು, ಹಾಗೆ ಮಾತಾಡೋದ್ರಿಂದ ಅವರ ಪಕ್ಷದ ವರ್ಚಸ್ಸು ಹೆಚ್ಚಾಗೋದಿಲ್ಲ. ಎಂದು ಎರಡು ರಾಷ್ಟ್ರೀಯ ಪಕ್ಷಗಳಿಗೆ ದೇವೆಗೌಡ ಕಿವಿಮಾತು ಹೇಳಿದ್ದಾರೆ..

Source: newsfirstlive.com Source link