ಇನ್ನೂ ಬಗೆಹರಿಯದ ಆದಾಯ ತೆರಿಗೆ ಪೋರ್ಟಲ್‌ ಸಮಸ್ಯೆ; ಇನ್ಫೋಸಿಸ್​​​ ಸಿಇಓಗೆ ಕೇಂದ್ರದಿಂದ ಸಮನ್ಸ್​

ಇನ್ನೂ ಬಗೆಹರಿಯದ ಆದಾಯ ತೆರಿಗೆ ಪೋರ್ಟಲ್‌ ಸಮಸ್ಯೆ; ಇನ್ಫೋಸಿಸ್​​​ ಸಿಇಓಗೆ ಕೇಂದ್ರದಿಂದ ಸಮನ್ಸ್​

ಆದಾಯ ತೆರಿಗೆ ಇಲಾಖೆ ಹೊಸ ವೆಬ್​ ​ಪೋರ್ಟಲ್​​ನಲ್ಲಿ ಕಾಣಿಸಿಕೊಳ್ಳುತ್ತಿರುವ ದೋಷವನ್ನು ಯಾವಾಗ ಸರಿಪಡಿಸಿ ಎಂದು ಇನ್ಫೋಸಿಸ್​​​​​ ಸಿಇಒ ಸಲೀಲ್ ಪರೇಕ್​​ರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಮನ್ಸ್ ಜಾರಿ ಮಾಡಿದೆ. ಕೇಂದ್ರ ಹಣಕಾಸು ಸಚಿವಾಲಯ ಸಲೀಲ್​​ ಪರೇಕ್​​​ ಅವರನ್ನು ಕರೆಸಿ ಹೊಸ ಆದಾಯ ತೆರಿಗೆ ವೆಬ್​​​ ಪೋರ್ಟಲ್​​​ನಲ್ಲಿ ಎದುರಾಗುತ್ತಿರುವ ನಿರಂತರ ತೊಂದರೆಗಳನ್ನು ವಿವರಿಸಿದೆ.

ಕಳೆದ ಜೂನ್​​ ತಿಂಗಳಿನಲ್ಲಿಯೇ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಈ ಕುರಿತಾಗಿ ಇನ್ಫೋಸಿಸ್​​ಗೆ ಪತ್ರ ಬರೆದಿದ್ದರು. ಈಗ ಕೇಂದ್ರ ಹಣಕಾಸು ಇಲಾಖೆ ಅಧಿಕೃತವಾಗಿ ಸಮನ್ಸ್​ ನೀಡಿರುವ ಕಾರಣ ಪರೇಕ್​​​ ಸೋಮವಾರ ಸಚಿವಾಲಯದ ಮುಂದೆ ಹಾಜರಾಗುವ ನಿರೀಕ್ಷೆಯಿದೆ.

ಹೊಸ ಇ-ಫೈಲಿಂಗ್ ಪೋರ್ಟಲ್ ಪ್ರಾರಂಭಿಸಿ ಮೂರು ತಿಂಗಳಾಗಿದೆ. ಹೀಗಾದರೂ ಇನ್ನೂ ಯಾಕೆ ಪೋರ್ಟಲ್​​ನಲ್ಲಿ ಸಮಸ್ಯೆಗಳನ್ನು ಕಾಣಿಸಿಕೊಳ್ಳುತ್ತಿವೆ ಎಂದು ವಿವರಣೆ ನೀಡಿ ಎಂದು ಸಮನ್ಸ್​ನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ: ಕಾಬೂಲ್​​ನಿಂದ ಭಾರತಕ್ಕೆ ಬಂದ ಮಗುವಿಗೆ ಮುತ್ತಿಟ್ಟು ಮುದ್ದಾಡಿದ ಪುಟ್ಟ ಬಾಲಕಿ; ವಿಡಿಯೋ ವೈರಲ್​​

Source: newsfirstlive.com Source link