ನಮ್ಮಲ್ಲೂ ಅಯೋಗ್ಯ ಸ್ವಾಮೀಜಿಗಳು ಇದ್ದಾರೆ- ಯತ್ನಾಳ್ ಕಿಡಿ

ವಿಜಯಪುರ: ಇಸ್ಲಾಂ ಧರ್ಮ ಯಾರನ್ನು ಸಹೋದರತ್ವ ದಿಂದ ನೋಡಿಲ್ಲ. ನಮ್ಮಲ್ಲಿ ಕೆಲ ಅಯೋಗ್ಯ ಸ್ವಾಮೀಜಿಗಳು ಇದ್ದಾರೆ ಎಂದು ಕೆಲ ಸ್ವಾಮೀಜಿಗಳ ವಿರುದ್ಧ ವಿಜಯಪುರದಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಾಗ್ದಾಳಿ ನಡೆಸಿದರು.

ಪ್ರವಚನದಲ್ಲಿ ಹಿಂದೂ, ಮುಸ್ಲಿಂ ಭಾಯಿಭಾಯಿ ಎನ್ನುತ್ತಾರೆ. ಮಾನವ ಧರ್ಮಕ್ಕೆ ಜಯವಾಗಲಿ ಎನ್ನುತ್ತಾರೆ. ಆದರೆ ಇವತ್ತು ಯಾಕೆ ಮಾತನಾಡುತ್ತಿಲ್ಲ ಎಂದು ಸ್ವಾಮಿಗಳ ವಿರುದ್ಧ ಚಾಟಿ ಬೀಸಿದ್ದಾರೆ. ಇದನ್ನೂ ಓದಿ:  ಗುಂಡು ಹೊಡೆಯೋದಾದ್ರೆ ಹೊಡಿರಿ, ವಿಜೃಂಭಣೆಯಿಂದ ಗಣೇಶೋತ್ಸವ ಆಚರಣೆ: ಸರ್ಕಾರಕ್ಕೆ ಸೆಡ್ಡು ಹೊಡೆದ ಯತ್ನಾಳ್

ಇಷ್ಟೊಂದು ಹೋರಾಟ ಮಾಡೋರು ತಾಲಿಬಾನಿಗಳ ಬಗ್ಗೆ ಯಾಕೆ ಮಾತನಾಡಲ್ಲ. ಮೊನ್ನೆ ಯಡ್ಡಿಯೂರಪ್ಪಗಾಗಿ ಮಾತನಾಡುವವರು, ಇವತ್ತು ತಾಲಿಬಾನಿಗಳ ಬಗ್ಗೆ ಏಕೆ ಮಾತನಾಡುತ್ತಿಲ್ಲ. ಇಲ್ಲಿವರೆಗೆ ಒಬ್ಬರಾದರೂ ಮುಸ್ಲಿಂರ, ತಾಲಿಬಾನಿಗಳ ವಿರುದ್ಧ ಹೇಳಿಕೆ ಕೊಟ್ಟಿದ್ದಾರಾ ಎಂದು ಪ್ರಶ್ನಿಸಿದ್ದಾರೆ.

Source: publictv.in Source link