ಹಳ್ಳಿಗರು ಹೇಳುವ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಬರುತ್ತೆ ಕೋವಿಡ್ ಲಸಿಕೆ

– ಯಾದಗಿರಿಯಲ್ಲಿಗ ವಾಕ್ಸಿನ್ ಎಕ್ಸ್ ಪ್ರೆಸ್ ಓಡಾಟ

ಯಾದಗಿರಿ: ಜಿಲ್ಲೆಯಲ್ಲಿ ವ್ಯಾಕ್ಸಿನ್ ಪಡೆದುಕೊಂಡವರ ಪ್ರಮಾಣ ಕಡಿಮೆ ಇರುವುದನ್ನು ಕಂಡು ಜಿಲ್ಲಾಡಳಿತಕ್ಕೆ ಫುಲ್ ಟೆನ್ಷನ್ ಆಗಿತ್ತು. ಹಾಗಾಗಿ ಇದೀಗ ಹಳ್ಳಿಗರು ಹೇಳುವ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಲಸಿಕೆ ತೆಗೆದುಕೊಂಡು ಹೋಗಿ ಲಸಿಕೆ ಹಾಕುವ ನೂತನ ಕಾರ್ಯಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ಗ್ರಾಮೀಣ ಭಾಗದ ಜನ ಜಮೀನು ಕೆಲಸದ ನೆಪ ಹೇಳಿ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದರು. ಇದನ್ನು ಗಂಭೀರವಾಗಿ ತೆಗೆದುಕೊಂಡಿರುವ ಯಾದಗಿರಿ ಜಿಲ್ಲಾಡಳಿತ ಒಂದು ಮಾಸ್ಟರ್ ಪ್ಲಾನ್ ರೂಪಿಸಿದೆ. ಹಳ್ಳಿಗರು ಹೇಳುವ ಸಮಯಕ್ಕೆ, ಹೇಳಿದ ಸ್ಥಳಕ್ಕೆ ಲಸಿಕೆ ತೆಗೆದುಕೊಂಡು ಹೋಗಲು ಮುಂದಾಗಿದೆ. ಇದನ್ನೂ ಓದಿ: ಕೋವಿಡ್ ಲಸಿಕೆ ಬಗ್ಗೆ ಯಾದಗಿರಿ ಜನರಲ್ಲಿ ಮೂಢನಂಬಿಕೆ

ಇಡೀ ರಾಜ್ಯದಲ್ಲಿ ಇಂತಹ ಸಾಹಸಕ್ಕೆ ಕೈಹಾಕಿದ್ದು ಯಾದಗಿರಿ ಜಿಲ್ಲಾಡಳಿತವೇ ಮೊದಲು. ಈ ಕಾರ್ಯಕ್ಕೆ ಕೇರ್ ಫೌಂಡೇಶನ್ ಎನ್‍ಜಿಓ ಸಂಸ್ಥೆ ಸಾಥ್ ನೀಡಿದ್ದು, ಜಿಲ್ಲೆಗೆ ಸುಮಾರು 10 ಕ್ಕೂ ಹೆಚ್ಚು ಕೋವಿಡ್ ಲಸಿಕಾ ಎಕ್ಸ್ ಪ್ರೆಸ್ ವಾಹನಗಳನ್ನು ನೀಡಿದೆ. ಈ ವಾಹನಗಳಲ್ಲಿ ಒಬ್ಬರು ಸ್ಟಾಫ್ ನರ್ಸ್ ಹಾಗೂ ಒಬ್ಬರು ಕಂಪ್ಯೂಟರ್ ಆಪರೇಟರ್ ಇದ್ದು, ಹಳ್ಳಿಗಳಿಗೆ ಈ ವಾಹನಗಳಲ್ಲಿ ತೆರಳಿ ಲಸಿಕೆ ಹಾಕುವ ಕಾರ್ಯ ನಡೆಯುತ್ತಿದೆ.

blank

ಹೊಲ, ಗದ್ದೆಗಳಿಗೆ ತೆರಳುವ ಜನರ ಬಳಿ ಈ ವಾಹನದಲ್ಲಿ ತೆರಳಿ ಅವರಿಗೆ ವ್ಯಾಕ್ಸಿನ್ ಕುರಿತು ಜಾಗೃತಿ ಮೂಡಿಸಿ ಲಸಿಕೆ ಹಾಕಲಾಗುತ್ತಿದೆ. ಇದರಿಂದಾಗಿ ಲಸಿಕೆ ಪ್ರಮಾಣದಲ್ಲಿಯೂ ಸಹ ಏರಿಕೆಯಾಗುತ್ತಿದ್ದು ಜಿಲ್ಲಾಡಳಿತ ಸಂತಸಗೊಂಡಿದೆ. ಇದನ್ನೂ ಓದಿ: ಸರ್ಕಾರಿ ವೈದ್ಯೆ ಈಗ ಮಿಸೆಸ್ ಇಂಡಿಯಾ ಕರ್ನಾಟಕ ರನ್ನರ್‌ಅಪ್‌

Source: publictv.in Source link