ಸೋಮವಾರದಿಂದ ತಮಿಳುನಾಡಿಗೆ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭ

ಬೆಂಗಳೂರು: ಸೋಮವಾರದಿಂದ  ತಮಿಳುನಾಡಿಗೆ ಕೆಎಸ್ಆರ್‌ಟಿಸಿ ಬಸ್ ಸಂಚಾರ ಆರಂಭವಾಗಲಿದೆ.

ಕೊರೊನಾ ಎರಡನೇ ಅಲೆಯ ಅಬ್ಬರಕ್ಕೆ ನೆರೆಯ ತಮಿಳುನಾಡಿಗೆ ಸಂಚಾರ ಮಾಡುತ್ತಿದ್ದ ಕೆಎಸ್ಆರ್‌ಟಿಸಿ ಬಸ್ ಗಳು ಸ್ತಬ್ಧವಾಗಿ 4 ತಿಂಗಳೇ ಕಳೆದಿತ್ತು. ಏಪ್ರಿಲ್ 27 ರಂದು ಲಾಕ್‍ಡೌನ್ ಘೋಷಣೆ ಮಾಡಿದ ಸಮಯದಲ್ಲಿ ಕೆಎಸ್ಆರ್‌ಟಿಸಿ ಬಸ್ ಸೇವೆಯೂ ಬಂದ್ ಆಗಿತ್ತು. ಇದನ್ನೂ ಓದಿ: ಮೋದಿ ಭೇಟಿಗಾಗಿ ಕಾಲ್ನಡಿಗೆ ಯಾತ್ರೆ ಕೈಗೊಂಡ ಕಾಶ್ಮೀರ ಯುವಕ

ಕ್ರಮೇಣ ಹಂತಹಂತವಾಗಿ ಅನ್ಲಾಕ್ ಪ್ರಕ್ರಿಯೆ ಶುರುವಾಗಿದ್ದರೂ ನೆರೆಯ ತಮಿಳುನಾಡಿಗೆ ಬಸ್ ಸೇವೆ ಶುರುವಾಗಿರಲಿಲ್ಲ. ಕಳೆದ 4 ತಿಂಗಳಿಂದ ಎರಡನೇ ಅಲೆಯ ಅಬ್ಬರ ಜೋರಾಗಿಯೇ ಇದ್ದ ಕಾರಣ ತಮಿಳುನಾಡಿನಲ್ಲಿ ಟಫ್ ರೂಲ್ಸ್ ಜಾರಿಯಲ್ಲೇ ಇತ್ತು.

ನಾಳೆಯಿಂದ ತಮಿಳುನಾಡಿನಲ್ಲಿ ಅನೇಕ ಸೇವೆಗಳಿಗೆ ಅಲ್ಲಿನ ಸರ್ಕಾರ ಗ್ರೀನ್ ಸಿಗ್ನಲ್ ನೀಡಿದ ಹಿನ್ನೆಲೆಯಲ್ಲಿ ರಾಜ್ಯ ಸಾರಿಗೆ ಸಂಸ್ಥೆ ಬಸ್ ಸೇವೆ ಒದಗಿಸಲು ಮುಂದಾಗಿದೆ. ನಾಳೆಯಿಂದ ತಮಿಳುನಾಡಿನ ಹೊಸೂರು, ವೆಲ್ಲೂರು, ಕಂಚೀಪುರಂ, ಮಧುರೈ, ಊಟಿ, ಚೆನ್ನೈ ಸೇರಿದಂತೆ ಅನೇಕ ಪ್ರಮುಖ ಕೇಂದ್ರಗಳಿಗೆ  ಕೆಎಸ್ಆರ್‌ಟಿಸಿ  ಬಸ್ ಸೇವೆ ಆರಂಭವಾಗಲಿದೆ. ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮೊದಲೇ ನಾವು ಆಡುವುದಿಲ್ಲ ಎಂದ ಸ್ಟಾರ್ ಆಟಗಾರರು

Source: publictv.in Source link