ಶೀಘ್ರವೇ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲಿದ್ದೇವೆ- ತಾಲಿಬಾನಿಗಳ ಘೋಷಣೆ

ಶೀಘ್ರವೇ ಅಫ್ಘಾನಿಸ್ತಾನದಲ್ಲಿ ಸರ್ಕಾರ ರಚಿಸಲಿದ್ದೇವೆ- ತಾಲಿಬಾನಿಗಳ ಘೋಷಣೆ

ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡ ಬೆನ್ನಲ್ಲೇ ಇದೀಗ ಮತ್ತೊಂದು ಹೆಜ್ಜೆ ಮುಂದಿಟ್ಟಿದ್ದು ಶೀಘ್ರವೇ ಸರ್ಕಾರ ರಚಿಸುವುದಾಗಿ ಘೋಷಿಸಿದ್ದಾರೆ. ತಾಲಿಬಾನ್​ನ ವಕ್ಕಾರ ಜಬೀಹುಲ್ಲಾ ಮುಜಾಹಿದ್ ಈ ಕುರಿತು ಹೇಳಿಕೆ ನೀಡಿದ್ದು ಸರ್ಕಾರ ಸಚಿಸುವ ಕುರಿತು ಅಫ್ಘಾನ್ ರಾಜಕೀಯ ನಾಯಕರ ಜೊತೆಗೆ ಮಾತುಕತೆ ನಡೆಯುತ್ತಿದೆ. ಶೀಘ್ರವೇ ಹೊಸ ಸರ್ಕಾರವನ್ನು ಘೋಷಿಸಲಿದ್ದೇವೆ ಎಂದಿದ್ದಾರೆ.

ಇನ್ನು ಕಾಬೂಲ್​ಗೆ ಬಂದಿಳಿದಿರುವ ತಾಲಿಬಾನ್​ನ ಉಪ ಸಂಸ್ಥಾಪಕ ಮುಲ್ಲಾ ಅಬ್ದುಲ್ ಗನಿ ಬರಾದರ್ ಅಫ್ಘನ್ ರಾಜಕೀಯ ನಾಯಕರ ಜೊತೆ ಈಗಾಗಲೇ ಸರ್ಕಾರ ರಚಿಸುವ ಕುರಿತು ಮಾತುಕತೆ ಆರಂಭಿಸಿದ್ದಾರೆ ಎಂಬ ಮಾಹಿತಿ ಇದೆ. ಶನಿವಾರ ತಾಲಿಬಾನಿಗಳು ರಾಜಕೀಯ ನಾಯಕರಾದ ಮಾಜಿ ಅಧ್ಯಕ್ಷ ಹಮಿದ್ ಕರ್ಜೈ, ಅಬ್ದುಲ್ಲಾ ಅಬ್ದುಲ್ಲಾ ಹಾಗೂ ಹೆಚ್​ಸಿಎನ್​ಆರ್​​ನ ಮುಖ್ಯಸ್ಥರನ್ನ ಭೇಟಿಯಾಗಿದ್ದಾರೆ ಎನ್ನಲಾಗಿದೆ.

Source: newsfirstlive.com Source link