ರೌಡಿಶೀಟರ್ ಬಬ್ಲಿ ಕೊಲೆಗೆ ಕಾರಣವಾಗಿದ್ದು ‘ಚೌಕಾಬಾರ’.. ಆರೋಪಿಗಳು ಬಿಚ್ಚಿಟ್ಟ ಸತ್ಯ ಇದು

ರೌಡಿಶೀಟರ್ ಬಬ್ಲಿ ಕೊಲೆಗೆ ಕಾರಣವಾಗಿದ್ದು ‘ಚೌಕಾಬಾರ’.. ಆರೋಪಿಗಳು ಬಿಚ್ಚಿಟ್ಟ ಸತ್ಯ ಇದು

ಬೆಂಗಳೂರು: ರೌಡಿಶೀಟರ್ ಬಬ್ಲಿ ಪ್ರಕರಣ ನಡೆದು ತಿಂಗಳುಗಳೇ ಕಳೆದಿವೆ. ಇದೀಗ ಆರೋಪಿಗಳ ವಿಚಾರಣೆ ವೇಳೆ ಬಬ್ಲಿಯನ್ನ ಕೊಚ್ಚಿ ಕೊಂದ ಕಾರಣವನ್ನ ಬಾಯ್ಬಿಟ್ಟಿದ್ದಾರೆ.. ಒಂದೇ ಒಂದು ಚೌಕಾಭಾರದಿಂದ ಬಬ್ಲಿ ಹೆಣವಾಗಿ ಹೋಗಿದ್ದ ಅನ್ನೋ ಸಂಗತಿ ಪೊಲೀಸರಿಗೆ ಗೊತ್ತಾಗಿದೆ.

ಕಳೆದ ಜುಲೈ 19ನೇ ತಾರೀಕು.. ಪತ್ನಿಯನ್ನ ಬ್ಯಾಂಕ್‌ ಬಳಿ ಬಿಡೋಕೆ ಸ್ಕೂಟಿಯಲ್ಲಿ ಮಗು ಜೊತೆ ಬಂದಿದ್ದ ರೌಡಿಶೀಟರ್‌ ಬಬ್ಲಿಯನ್ನ ಬ್ಯಾಂಕೊಳಗೆ ಅಟ್ಟಾಡಿಸಿ ದುಷ್ಕರ್ಮಿಗಳು ಕೊಂದಿದ್ರು. ಅಟ್ಟಾಡಿಸಿ ಬ್ಯಾಂಕ್‌ನೊಳಗೆ ಹೋಗಿದ್ದು, ಕೊಲೆ ಮಾಡಿ ಮಚ್ಚು ಝಳಪಿಸ್ತಾ ಹೊರ ಬಂದಿದ್ದು.. ಕೋರಮಂಗಲದ ಯೂನಿಯನ್‌ ಬ್ಯಾಂಕ್‌ನಲ್ಲಿ ರಕ್ತಪಿಪಾಸುಗಳ ಈ ಅಟ್ಟಹಾಸ ಆವತ್ತು ಸಿಸಿಟಿವಿಯಲ್ಲಿ ಸೆರೆಯಾಗಿತ್ತು.

blank

ಆದ್ರೀಗ ಈ ರೀತಿ ಬರ್ಬರವಾಗಿ ಬಬ್ಲಿಯನ್ನ ಹೊಡೆದು ಹಾಕೋಕೆ ಯಾವ ರೀತಿ ಪ್ಲ್ಯಾನ್‌ ಮಾಡಿದ್ರು ಅನ್ನೋದು ಬಯಲಾಗಿದೆ.
ಜುಲೈ 19 ರಂದು ಬೆಳಗ್ಗೆಯಿಂದ್ಲೇ ಬಬ್ಲಿ ಮನೆ ಬಳಿಯೇ ಕಾದು ಕುಳಿತಿದ್ದ ಆರೋಪಿಗಳಾದ ಪ್ರಕಾಶ್ @ ನೇನಿ. ಬಬ್ಲಿ ಪತ್ನಿ ಹಾಗೂ ಮಗುವಿನೊಂದಿಗೆ ಶಾಲೆಯತ್ತ ತೆರಳಿದ್ದ. ತಕ್ಷಣ ಈ ಮಾಹಿತಿಯನ್ನ ತನ್ನ ಗ್ಯಾಂಗ್ ಲೀಡರ್ ರವಿ @ ಚಿನ್ನಪ್ಪ ಗಾರ್ಡನ್‌ಗೆ ಮಾಹಿತಿ ರವಾನಿಸಿದ್ದ ಪ್ರಕಾಶ್‌. ಬಬ್ಲಿ ಮನೆಯಿಂದ ಹೊರಡ್ತಿದ್ದಂತೆ ಆರೋಪಿಗಳಾದ ಸಾಲೋಮನ್‌ ಮತ್ತು ಉದಯ್ ಆತನನ್ನ ಫಾಲೋ ಮಾಡೋಕೆ ಶುರು ಮಾಡಿದ್ರು. ಹೆಜ್ಜೆ ಹೆಜ್ಜೆಗೂ ಫಾಲೋ ಮಾಡ್ತಿದ್ರೂ ಬಬ್ಲಿಗೆ ಸಣ್ಣ ಸುಳಿವು ಕೂಡ ಸಿಕ್ಕಿರೋದಿಲ್ಲ. ಶಾಲೆಯಲ್ಲಿ ಕೆಲಸ ಮುಗಿಸಿ ಅಲ್ಲಿಂದ ಪತ್ನಿ ಹಾಗೂ ಮಗುವನ್ನ ಕರ್ಕೊಂಡು ಕೋರಮಂಗಲದ ಯೂನಿಯನ್‌ ಬ್ಯಾಂಕ್‌ಗೆ ತೆರಳಿದ್ದ ಬಬ್ಲಿ. ಆಗ ಯಾರೋ ತನ್ನನ್ನ ಫಾಲೋ ಮಾಡ್ತಿರೋದನ್ನ ಅಂದಾಜಿಸಿದ್ದ. ಆದ್ರೆ ಬಬ್ಲಿ ಅಲರ್ಟ್ ಆಗುವ ಮುನ್ನವೇ ಹಂತಕರು ಮೇಲೆ ಅಟ್ಯಾಕ್‌ ಮಾಡಿದ್ರು.

blank

ಅಂದ್ಹಾಗೆ ಆರೋಪಿಗಳನ್ನ ವಿಚಾರಣೆ ನಡೆಸಿದಾಗ ಕೊಲೆಗೆ ಕಾರಣ ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ. ಬಬ್ಲಿ ಮತ್ತು ಗ್ಯಾಂಗ್ ಚೌಕಾಭಾರ ಆಡುವ ಅಭ್ಯಾಸ ಇಟ್ಟುಕೊಂಡಿತ್ತು. ಬಬ್ಲಿ ತನ್ನ ಅಪೊಸಿಟ್ ಗ್ಯಾಂಗ್ ಜೊತೆ ಚೌಕಾಭಾರ ಆಡೋವಾಗ ಹಣ ಸುಲಿಗೆ ಮಾಡಿದ್ದನಂತೆ. ಇದೇ ಕೋಪಕ್ಕೆ ಎಲ್ಲಾ 10 ಎದುರಾಳಿ ತಂಡಗಳು ಈ ರೀತಿ ಮರ್ಡರ್‌ಗೆ ಸ್ಕೆಚ್‌ ಹಾಕಿ ಎಕ್ಸಿಕ್ಯೂಟ್‌ ಮಾಡಿದ್ವು ಅನ್ನೋ ಮಾಹಿತಿ ಪೊಲೀಸರ ತನಿಖೆ ವೇಳೆ ಬಯಲಾಗಿದೆ.

ಇದನ್ನೂ ಓದಿ: ‘ಸೈಲೆಂಟ್ ಸುನಿ-ವಿಲ್ಸನ್ ಗಾರ್ಡನ್ ನಾಗ’ನ ಕಾಳಗಕ್ಕೆ ಬಲಿಯಾದ್ರಾ ‘ಬಬ್ಲಿ ಮತ್ತು ಮದನ್’​..?

Source: newsfirstlive.com Source link