ಟಣ್ ಟಣ್ ಟಣ್.. ರಾಜ್ಯಾದ್ಯಂತ ಇಂದಿನಿಂದ ಶಾಲೆ ಆರಂಭ -ಹೇಗಿದೆ ಗೊತ್ತಾ ಮಾರ್ಗಸೂಚಿ?

ಟಣ್ ಟಣ್ ಟಣ್.. ರಾಜ್ಯಾದ್ಯಂತ ಇಂದಿನಿಂದ ಶಾಲೆ ಆರಂಭ -ಹೇಗಿದೆ ಗೊತ್ತಾ ಮಾರ್ಗಸೂಚಿ?

ಬರೋಬ್ಬರಿ ಒಂದೂವರೆ ವರ್ಷಗಳಿಂದ ಶಾಲೆ-ಕಾಲೇಜುಗಳ ಮುಖವನ್ನೇ ನೋಡದ ವಿದ್ಯಾರ್ಥಿಗಳಿಗೆ ಇಂದು ಶುಭ ದಿನ. ಇಂದಿನಿಂದ ರಾಜ್ಯಾದ್ಯಂತ 9 ರಿಂದ 12ನೇ ತರಗತಿಗಳು ಆರಂಭವಾಗಲಿದ್ದು, ಶಿಕ್ಷಣ ಇಲಾಖೆಯೂ ಸಕಲ ಸಿದ್ಧತೆ ನಡೆಸಿದೆ. ಇಷ್ಟು ದಿನ ಕೇವಲ ಆನ್​​ಲೈನ್ ಕ್ಲಾಸ್​ನಲ್ಲಿ ಮುಳುಗಿದ್ದ ವಿದ್ಯಾರ್ಥಿಗಳು, ಆಫ್​​ಲೈನ್ ಕ್ಲಾಸ್​ನತ್ತ ಮುಖ ಮಾಡಲಿದ್ದಾರೆ.

ಟಣ್ ಟಣ್ ಟಣ್.. ಇಂದಿನಿಂದ ರಾಜ್ಯಾದ್ಯಂತ ಶಾಲೆಗಳಲ್ಲಿ ಈ ಶಬ್ದ ಮೊಳಗಲಿದೆ. ಬರೋಬ್ಬರಿ ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ್ದ ಜ್ಞಾನದೇಗುಲಗಳು ಇಂದು ತೆರೆಯಲಿವೆ. ಮೊದಲ ಹಂತದಲ್ಲಿ 9 ಮತ್ತು 12ನೇ ತರಗತಿಗಳು ಪ್ರಾರಂಭವಾಗಲಿದೆ. ಶಾಲಾ -ಕಾಲೇಜುಗಳ ಭೌತಿಕ ತರಗತಿ ಆರಂಭಕ್ಕೆ, ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ನಡೆಸಿದೆ.

blank

ಇನ್ನು, ಇವತ್ತು ಬೆಂಗಳೂರಿನ ಶಾಲೆ ಮತ್ತು ಪಿಯು ಕಾಲೇಜು ಒಂದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ. ಸಿಎಂಗೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಾಥ್ ನೀಡಲಿದ್ದಾರೆ. ಕೋವಿಡ್ ಸುರಕ್ಷತಾ ಕ್ರಮಗಳನ್ನು ಅನುಸರಿಸಿ, ಶಾಲೆಗಳನ್ನ ತೆರೆಯಲು ಶಿಕ್ಷಣ ಇಲಾಖೆ ಸಹ ಸಿದ್ಧತೆ ನಡೆಸಿದೆ.

ಇನ್ನು, ತುಮಕೂರಿನ ಹೆಗ್ಗೆರೆಯ ಸಿದ್ದಾರ್ಥ ಪ್ರೌಢಶಾಲೆಗೆ ನಿನ್ನೆ ಶಿಕ್ಷಣ ಸಚಿವ ಬಿ.ಸಿ.ನಾಗೇಶ್, ಭೇಟಿ ನೀಡಿದ್ದರು. ಈ ವೇಳೆ ಮುಂಜಾಗ್ರತಾ ಸುರಕ್ಷತಾ ಕ್ರಮಗಳು, ಮೂಲ ಸೌಕರ್ಯಗಳ ತಯಾರಿ ಬಗ್ಗೆ ಶಿಕ್ಷಣ ಸಚಿವರು ಪರಿಶೀಲನೆ ನಡೆಸಿದರು. ಶಾಲೆಯ ಸಿಬ್ಬಂದಿ ಸಹ 9-10ನೇ ತರಗತಿಗಳ ಕೊಠಡಿಗಳನ್ನ ಶುಚಿಗೊಳಿಸಿ, ಸ್ಯಾನಿಟೈಸ್ ಮಾಡಿದ್ದಾರೆ.

blank

ಇತ್ತ, ಶಾಲೆ ಆರಂಭಕ್ಕೆ ಬಳ್ಳಾರಿ ಜಿಲ್ಲಾಡಳಿತವೂ ಸಕಲ ಸಿದ್ಧತೆ ಮಾಡಿಕೊಂಡಿದೆ. ಜಿಲ್ಲೆಯಾದ್ಯಂತ ಇರೋ ಶಾಲೆಗಳಲ್ಲಿ, ಕೊಠಡಿಗಳನ್ನ ಸಂಪೂರ್ಣವಾಗಿ ಸ್ಯಾನಿಟೈಸ್​ ಮಾಡಲಾಗ್ತಿದೆ. ದಾವಣಗೆರೆ ಜಿಲ್ಲೆಯಲ್ಲೂ ಇಂದಿನಿಂದ 448 ಶಾಲೆಗಳಲ್ಲಿ ತರಗತಿಗಳು ಆರಂಭವಾಗಲಿವೆ. ಈ ಹಿನ್ನೆಲೆ ಗ್ರಾಮ ಪಂಚಾಯಿತಿ ಹಾಗೂ ಪಾಲಿಕೆ ಸಹಾಯದಿಂದ ಶಾಲೆಗಳಿಗೆ ಸ್ಯಾನಿಟೈಸ್ ಮಾಡಲಾಯ್ತು. ಈ ವೇಳೆ ಜಿಲ್ಲೆಯಲ್ಲಿನ ಶಾಲೆಗಳಿಗೆ ಇವತ್ತು ಡಿಡಿಪಿಐ ಭೇಟಿ ನೀಡಿ, ಪರಿಶೀಲನೆ ನಡೆಸಿದ್ರು. ಕಲಬುರಗಿಯಲ್ಲೂ ಎಲ್ಲಾ ಶಾಲೆಗಳನ್ನ ಸ್ಯಾನಿಟೈಸ್ ಮಾಡಲಾಯ್ತು.
ಇನ್ನು, ರಾಜ್ಯಾದ್ಯಂತ ಶಾಲೆ ಆರಂಭಕ್ಕೆ ಸರ್ಕಾರ ಈ ಹಿಂದೆಯೇ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಪಾಲಿಸುವುದು ಕಡ್ಡಾಯ.

blank

ಶಾಲೆ ಆರಂಭಕ್ಕೆ ಮಾರ್ಗಸೂಚಿ

  • ಮಾರ್ಗಸೂಚಿ-1 -ಶಾಲೆಗೆ ಹಾಜರಾಗೋ ಮಕ್ಕಳಿಗೆ ಪೋಷಕರ ಅನುಮತಿ ಪತ್ರ ಕಡ್ಡಾಯ.
  • ಮಾರ್ಗಸೂಚಿ-2 -9, 10ನೇ ತರಗತಿ ವಿದ್ಯಾರ್ಥಿಗಳು ಮನೆಯಿಂದಲೇ ಉಪಹಾರ ತರಬೇಕು.
  • ಮಾರ್ಗಸೂಚಿ-3 -ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಕುಡಿಯಲು ಬಿಸಿನೀರಿನ ವ್ಯವಸ್ಥೆ ಮಾಡಬೇಕು.
  • ಮಾರ್ಗಸೂಚಿ-4 -ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಗೆ ಹಾಜರಾಗುವುದು ಕಡ್ಡಾಯವಲ್ಲ.
  • ಮಾರ್ಗಸೂಚಿ-5 -ಭೌತಿಕ ತರಗತಿಗಳಿಗೆ ಹಾಜರಾಗದ ವಿದ್ಯಾರ್ಥಿಗಳಿಗೆ ಆನ್​ಲೈನ್ ಶಿಕ್ಷಣ ನೀಡಬೇಕು.
  • ಮಾರ್ಗಸೂಚಿ-6 -ಸೋಮವಾರದಿಂದ ಶುಕ್ರವಾರದವರೆಗೆ ಬೆ.10ರಿಂದ ಮಧ್ಯಾಹ್ನ1.30ರ ವರೆಗೆ ತರಗತಿ.
  • ಮಾರ್ಗಸೂಚಿ-7 -ಶನಿವಾರದಂದು ಬೆಳಿಗ್ಗೆ 10 ರಿಂದ ಮಧ್ಯಾಹ್ನ 12.50ರ ವರೆಗೆ ತರಗತಿ ನಡೆಯಲಿವೆ.
  • ಮಾರ್ಗಸೂಚಿ-8 -ದೈಹಿಕ ಅಂತರ ಕಾಪಾಡಿಕೊಳ್ಳಲು ವಿದ್ಯಾರ್ಥಿಗಳನ್ನು ತಂಡಗಳಾಗಿ ವಿಭಜನೆ.
  • ಮಾರ್ಗಸೂಚಿ-9 -ಪ್ರತಿ ಕೊಠಡಿಯಲ್ಲಿ 15 ರಿಂದ 20 ವಿದ್ಯಾರ್ಥಿಗಳ ಒಂದು ತಂಡಕ್ಕೆ ಅವಕಾಶ ನೀಡಲಾಗುತ್ತೆ.

ಒಟ್ನಲ್ಲಿ, ಕೊರೊನಾ ಸುರಕ್ಷತಾ ಕ್ರಮಗಳೊಂದಿಗೆ, ರಾಜ್ಯಾದ್ಯಂತ ಶಾಲಾ-ಕಾಲೇಜುಗಳು ಆರಂಭವಾಗಲಿವೆ. ಮುಂಜಾಗ್ರತಾ ಕ್ರಮಗಳನ್ನಿಟ್ಟುಕೊಂಡು ಶಾಲೆ ಆರಂಭಿಸ್ತಿರೋ ಶಿಕ್ಷಣ ಸಚಿವರಿಗೆ ಇದೊಂದು ದೊಡ್ಡ ಸವಾಲಾಗಿದೆ. ಶಾಲೆ ಆರಂಭವೇನಾದ್ರೂ ಸಕ್ಸಸ್ ಆದ್ರೆ, ಇನ್ನುಳಿದ ತರಗತಿಗಳ ಆರಂಭಕ್ಕೂ ಮುನ್ನುಡಿ ಸಿಕ್ಕಂತಾಗುತ್ತೆ.

blank

Source: newsfirstlive.com Source link