ತಂತ್ರಜ್ಞಾನದ ನೆರವಿನಿಂದ ಭಾರತದ ಮಳೆ ಕದಿಯಲು ಹೊರಟ ಚೀನಾ? ಇದು ಹೇಗೆ ಸಾಧ್ಯ?

ತಂತ್ರಜ್ಞಾನದ ನೆರವಿನಿಂದ ಭಾರತದ ಮಳೆ ಕದಿಯಲು ಹೊರಟ ಚೀನಾ? ಇದು ಹೇಗೆ ಸಾಧ್ಯ?

ಕಾಲಕಾಲಕ್ಕೆ ಮಳೆಯಾಗಲೀ ಅನ್ನುವ ಆಶೀರ್ವಚನ ದೇಶದಲ್ಲಿ ಕೇಳ್ತಾ ಇರ್ತಿವಿ. ಸಹಜವಾಗಿ ಮಳೆ ಒಂದು ಮಾಸದಲ್ಲಿ ಧರೆಗಿಳಿಯುತ್ತವೆ. ಆದ್ರೆ ಕೆಲವೊಮ್ಮೆ ಅಕಾಲಿಕವಾದದ್ದು ಇದೆ. ಏನೇ ಆದ್ರೂ ಮಳೆ ಅನ್ನೋದು ಸಹ ಪ್ರಾಕೃತಿಕ ಸಂಪತ್ತು. ಈ ಪ್ರಾಕೃತಿಕ ಸಂಪತ್ತನ್ನೆ ಲೂಟಿ ಮಾಡಲು ಪ್ಲಾನ್ ಮಾಡಿದರೆ ? ಹೌದು ಹೀಗೊಂದು ಪ್ಲಾನ್ ನಡಿತಾ ಇದೆ. ಭಾರತದ ಮಳೆಯನ್ನು ಚೀನಾ ಕದಿಯಲು ಪ್ರಯತ್ನಿಸುತ್ತಿದೆ. ಮಳೆಯನ್ನು ಕದಿಯಬಹುದಾ ? ಹೇಳ್ತಿವಿ ನೋಡಿ.

ಭಾರತಕ್ಕೆ ಜೂನ್ ತಿಂಗಳಿನಿಂದ ಆಷಾಡ ಮಾಸ ಶುರುವಾಗುತ್ತದೆ. ಅಂದ್ರೆ ಮಳೆಗಾಲ. ಈ ಅವಧಿಯಲ್ಲಿ ಇಡಿ ದೇಶಕ್ಕೆ ಮಳೆ ಅಗಿ ಪ್ರಕೃತಿ ಶಾಂತಗೊಳ್ಳುತ್ತದೆ. ಈ ಮಾಸ ರೈತರಿಗೆ ಬಹಳ ಮುಖ್ಯವಾದ ಮಾಸ. ರೈತರು ತಮ್ಮ ಹೊಲವನ್ನು ನಾಟಿ ಮಾಡಿ, ಬೆಳೆಗೆ ಬೇಕಾದ ಅಂಶಗಳನ್ನೆಲ್ಲ ಒದಗಿಸಿ., ಹಸಿರಾಗಿಸುತ್ತಾರೆ. ಈ ಅವಧಿಯಲ್ಲಿ ದೇಶದ ತುಂಬೆಲ್ಲ ಸಾಕಷ್ಟು ಬದಲಾವಣೆಗಳೂ ಕಾಣಸಿಗುತ್ತವೆ. ಆದರೆ ವರುಣ ದೇವನನ್ನು ನಂಬುವ ಹಾಗಿಲ್ಲ. ಇವನು ಮುನಿದರೆ ಅತಿವೃಷ್ಟಿ ಅಥವಾ ಅನಾವೃಷ್ಟಿ ಅಂದ್ರೆ ಅತಿಯಾಗಿ ಮಳೆ ಸುರಿದು ಪ್ರವಾಹ ಭೀತಿ ಉಂಟಾಗಿಸಿವುದು. ಮಳೆಯ ಸುಳಿವೇ ಕಾಣದೆ ಬರದ ಪರಿಸ್ಥಿತಿಗೆ ತಂದಿಟ್ಟು ಬಿಡುತ್ತದೆ. ಆದರೆ ಮಳೆ ಒಂದು ದೇಶಕ್ಕೆ ಬಹಳ ಮುಖ್ಯವಾಗಿರುವುದರಲ್ಲಿ ಸಂಶಯವೇ ಇಲ್ಲ.

ಇನ್ನು ತಂತ್ರಜ್ಞಾನದ ಜಗತ್ತನ್ನು ಒಮ್ಮೆ ನೋಡಿ ಬಿಡೋಣ. ಕಾಲ ಕಳೆದಂತೆ ವಿಶ್ವ ತಂತ್ರಜ್ಞಾನ ಎನ್ನುವ ಹೊಸ ಜಗತ್ತಿಗೆ ಹತ್ತಿರವಾಗ್ತ ಇರೋದು ನಿಜ. ಯಾವ ವಿಷಯವನ್ನು ಪರಿಗಣಿಸಿದರು. ಅದರಲ್ಲಿ ವಿಶೇಷ ಟೆಕ್ನಾಲಜಿಯ ಬಲೆಗೆ ನಾವು ಸಿಲುಕಿದ್ದೇವೆ. ನಮ್ಮ ಪ್ರತಿಯೊಂದು ಹೆಜ್ಜೆಯೂ ಸಹ ಅಪ್ ಡೇಟ್ ಆಗುವ ಹಾದಿಯಲ್ಲೆ ಕಾರ್ಯ ನಿರ್ವಹಿಸುತ್ತಿರುತ್ತದೆ. ಹಾಗೆ ಇದೇ ಟೆಕ್ನಾಲಜಿ ಮಾರಕವೂ ಹೌದು ಅನ್ನೋದನ್ನು ನಾವು ಮರೆಯುವ ಹಾಗಿಲ್ಲ. ಕಾಲ ಬದಲಾಗಿದೆ!.. ಕೆಲವರು ಹೇಳ್ತಾರೆ… ಏನ್ ಕಾಲ ಬದಲಾದ್ರೆ ಏನು ?

ಕಾಲಕಾಲಕ್ಕೆ ಮಳೆ ಆಗೋದೇನು ನಿಂತಿಲ್ಲ ಅಂತ.. ಆದ್ರೆ ತಂತ್ರಜ್ಞಾನದ ಶಕ್ತಿಯಿಂದ ಈಗ ಮಳೆಯನ್ನು ಕಂಟ್ರೋಲ್ ಮಾಡಬಹುದು. ಎಲ್ಲಿ ಮಳೆ ಆಗುತ್ತಿಲ್ಲವೋ ಅಲ್ಲಿ ವೆದರ್ ಮಾಡಿಫಿಕೇಷನ್ ಮಾಡಿ ಮಳೆಯನ್ನು ಸಹ ತರಿಸಬಹುದು. ಇದು ಒಳ್ಳೆಯ ಕೆಲಸಕ್ಕಾದರೇ ಸರಿ. ಆದರೆ ಇಲ್ಲಿ ದುಷ್ಟರ ದುರಾಲೋಚನೆ ಇದ್ರೆ ? ಹೌದು.. ಈಗ ನಮ್ಮ ದೇಶದಲ್ಲಿ ಆಗಬೇಕಾದ ಮಳೆಯನ್ನು ಚೀನಾ ಕದಿಯಲು ಮುಂದಾಗಿದೆ. ಅದು ಹೇಗೆ ?ಏನು ? ಅನ್ನೋದನ್ನು ಹೇಳ್ತಾ ಹೋಗ್ತಿವಿ ನೋಡಿ.

ಚೀನಾ ತನ್ನ ಸ್ವಾರ್ಥಕ್ಕೆ ಏನು ಬೇಕಾದರೂ ಮಾಡಲು ಸಿದ್ಧ ಅನ್ನೋದು ಈಗಾಗಲೇ ವಿಶ್ವಕ್ಕೆ ಪರಿಚಯವಾಗಿದೆ. ಎಲ್ಲಿ ತನಗೆ ಲಾಭ ಇದಿಯೋ ಅಲ್ಲಿಗೆ ತನ್ನ ದಾಪುಗಾಲು ಇಡೋದು ಚೀನಾ ಮುಂಚಿನಿಂದ ತೋರಿರುವ ಗುಣ. ಇನ್ನು ತನಗೆ ಏನಾದರೂ ಕೆಲಸ ಆಗಬೇಕಾದರೇ ಅದು ಇನ್ನೊಬ್ಬರಿಗೆ ತೊಂದರೆ ಆಗುತ್ತೆ ಅನ್ನುವ ಆಲೋಚನೆಯನ್ನು ಮಾಡೋದಿಲ್ಲ ಚೀನಾ. ಹೀಗೆ ಚೀನಾದ ಮುಂದಿನ ಪ್ಲಾನ್ ಭಾರತಕ್ಕಾಗಿ ಒಟ್ಟಾಗಿರುವ ಮೇಘಗಳ ರಾಶಿಯನ್ನು ತನ್ನತ್ತ ಸೆಳೆದುಕೊಂಡು, ಭಾರತದ ಪಾಲಾಗಬೇಕಾದ ಮಳೆಯನ್ನು ಚೀನಾದಲ್ಲಿ ಸುರಿಸುವುದು ಆಗಿದೆಯಾ? ಅನ್ನೋದು ಸದ್ಯದ ಗುಮಾನಿ.. ಎಷ್ಟೇ ಅಂದ್ರೂ ಚೀನಾ ವಿಷಯದಲ್ಲಿ ಇಂದಿನ ಗುಮಾನಿಯೇ.. ನಾಳಿನ ಸತ್ಯ ಅಲ್ವಾ?!

ಚೀನಾದ ಒಟ್ಟು ಪ್ಲಾನ್ ಏನು ಅನ್ನೋದನ್ನು ನಿಮಗೆ ತಿಳಿಸಿಕೊಡ್ತಿವಿ. ಅದಕ್ಕೂ ಮುಂಚೆ ಮಳೆಯನ್ನು ಕದಿಯುವುದು ಅಂದ್ರೆ ಏನು ? ಹವಾಮಾನವನ್ನು ರೂಪಾಂತರಿ ಮಾಡುವುದು ಹೇಗೆ ? ಎಲ್ಲವನ್ನು ಹೇಳ್ತಿವಿ ಕೇಳಿ. ವೆದರ್ ಮಾಡಿಫಿಕೇಷನ್.. ಇದು ವಾತವಾರಣವನ್ನು ನಿಯಂತ್ರಣ ಮಾಡುವ ವಿಶೇಷ ತಂತ್ರಜ್ಞಾನ. ಇಲ್ಲಿ ಕೆಲವು ಕೆಮಿಕಲ್ಸ್ ಗಳನ್ನು ಬಳಸಿ ಮೋಡವನ್ನು ಕಸಿ ಮಾಡೋದು. ಮಳೆಯನ್ನು ತಡೆ ಹಿಡಿಯೋದು. ಬರ ಪ್ರದೇಶದಲ್ಲಿ ಮಳೆ ಆಗುವ ಹಾಗೆ ಮಾಡೋದು.. ಹೀಗೆ ಸಂಪೂರ್ಣ ವಾತಾವರಣವನ್ನು ಕಂಟ್ರೋಲ್ ಮಾಡುವ ಟೆಕ್ನಾಲಜಿ. ಈ ತಂತ್ರಜ್ಞಾನ ಬಳಸಿ ಸಾಕಷ್ಟು ಉಪಯೋಗವನ್ನು ಪಡೆದಿರೋದು ಇದೆ. ಹಾಗೆ ಇದು ಪ್ರಕೃತಿ ವಿಕೋಪಕ್ಕೆ ಹಲವು ಬಾರಿ ಕಾರಣ ಆಗಿರೋದು ಇದೆ.

ಕ್ಲೌಡ್ ಸೀಡಿಂಗ್ ತಂತ್ರಜ್ಞಾನ ಬಳಸಿ ಚೀನಾ ಮಳೆಯ ಕಳ್ಳತನ
ಸಹಜಕ್ಕಿಂತ ಹೆಚ್ಚು ಮಳೆ ಆಗಲು ಚೀನಾ ನಡೆಸುತ್ತಿರುವ ಪ್ಲಾನ್

ಈಗ ಕ್ಲೌಡ್ ಸೀಡಿಂಗ್ ಅನ್ನೋದು ಇಂದು ಹೊಸ ತಂತ್ರಜ್ಞಾನವೇನೂ ಅಲ್ಲ.. ಆದ್ರೆ ಚೀನಾ ಈ ತಂತ್ರಜ್ಞಾನವನ್ನು ಇಟ್ಟುಕೊಂಡು ಸ್ವಾರ್ಥದ ಮಾರ್ಗವನ್ನು ಹುಡುಕಿರೋದು ಭಾರತಕ್ಕೆ ಆಗ ಬೇಕಾದ ಮಳೆಯನ್ನು ತನ್ನಾದಾಗಿಸಲು ಪ್ರಯತ್ನಗಳನ್ನು ನಡೆಸುತ್ತದೆ. ಭಾರತದ ಸುತ್ತ ಸಮುದ್ರ ಇರುವುದರಿಂದ, ಸೂರ್ಯನ ಶಾಕ ಶಕ್ತಿಯಿಂದ ಮೋಡಗಳೂ ಕಸಿಯಾಗುವುದು ಸುಲಭ. ಅದು ಇಡಿ ರಾಷ್ಟ್ರಕ್ಕೆ ಬೇಕಾದಷ್ಟು ಮೋಡಗಳನ್ನು ಕಲೆ ಹಾಕಿರುತ್ತದೆ. ಆದ್ರೆ ಚೀನಾ ಈ ಪ್ರಾಕೃತಿಕ ಸಂಪತ್ತನ್ನು ತನ್ನತ್ತ ಸೆಳೆದುಕೊಂಡು ಸಹಜಕ್ಕಿಂತ ಹೆಚ್ಚು ಮಳೆ ಚೀನಾ ನಗರಗಳಿಗೆ ಬೀಳಲು ಪ್ಲಾನ್ ರೂಪಿಸುತ್ತಿದೆಯಾ? ಅನ್ನೋ ಪ್ರಶ್ನೆ ಇಂದು ಬಲವಾಗಿದೆ.

ಚೀನಾದಲ್ಲಿ ಮಳೆ ಬಿತ್ತನೆಯಿಂದ ಭಾರತಕ್ಕೇನು ಸಮಸ್ಯೆ?
ಇದ್ರಿಂದ ಭಾರತದ ಮಳೆ ಕದ್ದಹಾಗೆ ಹೇಗಾಗುತ್ತೆ?
ಬೆಚ್ಚಿ ಬೀಳಿಸುವ ಸತ್ಯವಾದರೂ ಏನು ಗೊತ್ತಾ?

ಮಳೆ ಬಿತ್ತನೆ ಅನ್ನೋದು ಸಾಮಾನ್ಯ ಯೋಜನೆ. ಅದನ್ನು ನಮ್ಮ ದೇಶದಲ್ಲೂ ಮಾಡಿದ್ದಾರೆ. ಹಾಗೆ ಚೀನಾ ಕೂಡ ಮಾಡುತ್ತಿರಬಹುದು ಅನ್ನೋದು ಸಹಜ ಕುತೂಹಲ. ಆದರೆ ಜಾನಸ್ ಪಾಸ್ಟಾರ್ ಎನ್ನುವ ತಜ್ಞರು ಒಂದು ಮ್ಯಾಗ್ಸೀನ್ ನಲ್ಲಿ ಭಾರತಕ್ಕಾಗ ಬಹುದಾದ ತೊಂದರೆಯನ್ನು ಸಂಪೂರ್ಣವಾಗಿ ವಿವರಿಸಿದ್ದಾರೆ. ಅವರು ಹೇಳೊ ಪ್ರಕಾರ ಆಕಾಶಕ್ಕೆ ಐಯೋಡಿನ್ ರಾಕೇಟ್ ಗಳನ್ನು ಹಾರಿಸಿದರೇ ಅಲ್ಲಿ ಕೇವಲ ಮೋಡಗಳ ಬಿತ್ತನೇ ಮಾತ್ರವಲ್ಲದೆ ಸಿಂಪಡಿಸಿದ ಜಾಗದ ಸುತ್ತಮುತ್ತಲಿನ ರಾಷ್ಟ್ರಗಳಲ್ಲಿ ಬರಗಾಲವನ್ನು ತರಿಸುತ್ತದೆ. ಅಂದ್ರೆ ಸದ್ಯ ಚೀನಾ ಈ ಕೆಲಸವನ್ನು ಮಾಡಿದರೇ ಭಾರತ ಬರಗಾಲವನ್ನು ಅನುಭವಿಸುವುದು ಖಂಡಿತ.

ಯಾಕಂದ್ರೆ ಚೀನಾ ತನ್ನ ವಕ್ರದೃಷ್ಟಿ ಬೀರಿರೋದು ಭಾರತದ ಗಟಿ ಗುಂಟ ಇರೋ ಟಿಬೆಟ್​​​​ ಪ್ರಾಂತ್ಯದ ಮೇಲೆ. ಇಷ್ಟೆ ಅಲ್ಲದೆ ಚೀನಾ ಟಿಬೆಟ್ ಪ್ಲಾಟ್ಯೂವಿನಲ್ಲಿ ಇಂತಹ ಸಾವಿರಾರು ಚಾರ್ಮರ್ಸ್ ಗಳನ್ನು ಅಳವಡಿಸುತ್ತಿದ್ದಾರೆ. ಇದು ಆಕಾಶದಲ್ಲಿರುವ ಮಳೆಯ ಹನಿಗಳನ್ನು ತನ್ನತ್ತ ಸೆಳೆದುಕೊಂಡು ಬಿಡುತ್ತೆ. ಆಗ ಭಾರತದ ಪಾಲಾಗಿ ಬರಗಾಲ ಮಾತ್ರ ಉಳಿಯೋದು. ಇದರಿಂದ ಭಾರತಕ್ಕೆ ಇದು ಎಚ್ಚರಿಕೆಯ ಗಂಟೆಯಾಗಿರೋದಂತು ಸುಳ್ಳಲ್ಲ.

ವೆದರ್ ಮಾಡಿಫೀಕೇಷನ್ ಪ್ರೋಗ್ರಾಂ ವಿಸ್ತರಿಸಿದ ಚೀನಾ
2025 ರೊಳಗೆ ಚೀನಾದ ಶೇಕಡ 60ರಷ್ಟು ಭಾಗ ಮಳೆ ನಾಡು

2020 ರಲ್ಲಿ ಚೀನಾ ಬೀಜಿಂಗ್ ನಿಂದ ಆಕಾಶಕ್ಕೆ ಸಿಲ್ವರ್ ಐಯೋಡೈಡ್ ತುಂಬಿದ 16 ರಾಕೆಟ್ ಗಳನ್ನು ಹಾರಿಸಿತ್ತು. ಇದರಿಂದ ಚೀನಾದ ಪ್ರಮುಖ ನಗರಗಳಲ್ಲಿ 2 ಪಟ್ಟು ಹೆಚ್ಚು ಮಳೆ ಉಂಟಾಗಿತ್ತು. ಆದ್ರೆ ಈಗ 5.5 ಮಿಲಿಯನ್ square ಕಿಲೋ ಮಿಟರ್ ಅಷ್ಟು ಜಾಗಕ್ಕೆ ಸಿಲ್ವರ್ ಐಯೋಡೈಡ್ ರಾಕೆಟ್ ಗಳನ್ನು ಹರಡಿಸುವ ಯೋಚನೆಯಲ್ಲಿದೆ ಚೀನಾ. ಅಂದ್ರೆ ಭಾರತದ ಪ್ರದೇಶಕ್ಕಿಂತ 1.5 ರಷ್ಟು ಹೆಚ್ಚು ಅಳತೆಯ ಜಾಗದಲ್ಲಿರುವ ಮೋಡಗಳನ್ನು ತನ್ನತ್ತ ಹರಿದು ಬರುವಂತೆ ಮಾಡುವುದು ಚೀನಾದ ಬಳಿ ಇರುವ ಪ್ಲಾನ್. ಈ ಪ್ಲಾನ್ ಪ್ರಕಾರ 2025 ರಷ್ಟರಲ್ಲಿ ಚೀನಾ ದೇಶದ ಶೇ.60 ರಷ್ಟು ಭಾಗ ಹೆಚ್ಚು ಮಳೆಯಿಂದ ಹಸಿರಾಗುವುದು ಸಂಶಯದ ಮಾತಲ್ಲ.

2016ರಲ್ಲಿ ಚೀನಾ ಬಳಿ ಈ ರೀತಿ ಆರ್ಟಿಫಿಶಿಯಲ್ ಮಳೆಯ ಬಗ್ಗೆ ಯೋಜನೆಗಳಿದ್ದವು. ಆ ಪ್ರಾಜೆಕ್ಟ್ ಗೆ ಸ್ಕೈ ರಿವರ್ ಎನ್ನುವ ಹೆಸರಿನಿಂದ ಸಂಶೋಧನೆ ಮಾಡುತ್ತಿದ್ದರು. ಮೊದಮೊದಲಿಗೆ 1.6 ಮಿಲಿಯನ್ square ಕಿಲೋ ಮಿಟರ್ ಎನ್ನುತ್ತಿದ್ದ ಚೀನಾ ಈಗ ಪ್ರಾಜೆಕ್ಟ್ ವಿಸ್ತರಿ 5 ಮಿಲಿಯನ್​ ಸ್ಕ್ವೇರ್ ಕಿಲೋ ಮೀಟರ್ ಅಂತ ಹೇಳುತ್ತಿದೆ. ಈ ಪ್ರಾಜೆಕ್ಟ್ ಅನ್ನು ಕೈಗೆತ್ತಿಕೊಂಡರೇ., ಚೀನಾಗೆ ಸಹಜ ಮಳೆಗಿಂತ ಶೇ.7 ರಷ್ಟು ಹೆಚ್ಚು ಮಳೆಯಾಗೋದಂತು ನಿಜ. ಆದರೆ ಭಾರತದ ಕಥೆ ಏನು ?

ಭಾರತ ಕೂಡ ಇಂಥ ಪ್ರಯೋಗ ಮಾಡುತ್ತಿಲ್ಲವೇ?
ಚೀನಾದ ಏಟಿಗೆ-ಭಾರತ ಎದುರೇಟು ಕೊಡಬಹುದಾ?

ಮೋಡ ಬಿತ್ತನೆ, ಸೀಡ್ ಕ್ಲೌಡಿಂಗ್ ಗೆ ಇತಿಹಾಸವೇ ಇದೆ. ಅದು ಭಾರತಕ್ಕೆ ಬಂದಿದ್ದು 1952 ರಲ್ಲಿ. ಅಂದು ಭಾರತ ವಾರ್ಮ ಕ್ಲೌಡ್ ಮಾಡಿಫಿಕೇಷನ್ ನೆರೆವೇರಿಸಿತ್ತು. ಸಿಲ್ವರ್ ಐಯೋಡಿನ್ ಸೇರಿ ಹೌಡ್ರೋಜನ್ ಬಲೂನ್ ಗಳನ್ನು ಆಕಾಶಕ್ಕೆ ಕಳುಹಿಸಿ ಈ ಸಂಶೋಧನೆ ಮಾಡಿದ್ದರು. ಇದರಿಂದ ಸಾಕಷ್ಟು ಮಳೆ ಭಾರತದ ಪಾಲಾಗಿತ್ತು. ಅದಾದ ಬಳಿಕ ಟಾಟಾ ಸಂಸ್ಥೆ ಜೊತೆ ಸೇರಿ ಹಿಮ ಪ್ರಾಂತ್ಯಗಳಲ್ಲಿ ಸಿಲ್ವರ್ ಐಡಿನ್ ಜನರೇಟರ್ ಗಳನ್ನು ಇರಿಸಿದಾಗ ದಕ್ಷಿಣ ಭಾರತದ ಪಶ್ಚಿಮ ಘಟ್ಟಗಳಲ್ಲಿ ಮಳೆ ಸುರಿದಿತ್ತು. ಇದಾಗಿ ಅದೆಷ್ಟೋ ವರ್ಷಗಳು ಭಾರತದಲ್ಲಿ ಸಂಶೋಧನೆಗಳು ನಡೆಯಲಿಲ್ಲ. ಆದ್ರೆ 2018 ರಲ್ಲಿ ಐಐಟಿ ಪುಣೇ ಸಂಶೋಧಕರಿಗೆ ಈ ವಿಚಾರವಾಗಿ ಭಾರತ ಸರ್ಕಾರ ಹಣ ಹೂಡಿಕೆ ಮಾಡಿದೆ.

ಪ್ರಯೋಗದಲ್ಲಿ ಭಾರತ ಯಶಸ್ವಿಯಾದರೇ., ಚೀನಾ ಮಾಡುತ್ತಿರುವ ಕುತಂತ್ರಕ್ಕೆ, ಪ್ರತಿ ತಂತ್ರವನ್ನು ರೂಪಿಸಬಹುದು. ಇಲ್ಲಿವೇ ಏಟಿಗೆ ಎದುರೇಟು ಎನ್ನುವ ರೀತಿಯಲ್ಲಿ, ಅವರ ಮೋಡಗಳನ್ನು ನಮ್ಮತ್ತಕ್ಕೆ ಸೆಳೆದುಕೊಂಡು ಬಿಡಬಹುದು. ಆದರೆ ಸಧ್ಯದ ಮಟ್ಟಿಗೆ ಯಾವ ಬೆಳವಣೆಗಳನ್ನು ಬಹಿರಂಗ ಪಡಿಸಿಲ್ಲ. ಆದರೆ ಚೀನಾ ತನ್ನ ಕುತಂತ್ರ ಬುದ್ಧಿ ತೋರಿಸುವ ಮುನ್ನ ಎಚ್ಚೆತ್ತಿಕೊಳ್ಳ ಬೇಕಾಗಿರುವುದು ಭಾರತದ ಕರ್ತವ್ಯ. ಇನ್ನು ಈ ಮಳೆ ಬಿತ್ತನೆಯ ಇತಿಹಾಸ ಏನು ಹೇಳ್ತಿವಿ ಕೇಳಿ.

1946 ರಲ್ಲಿ ಅಮೆರಿಕಾ ರೂಪಿಸಿದ ವಿಶೇಷ ತಂತ್ರಜ್ಞಾನ
ವೆದರ್ ಮಾಡಿಫೀಕೇಷನ್​ಗಾಗಿ ಕೋಟಿ ಗಟ್ಟಲೇ ವೆಚ್ಚ

ಹಾಗೆ ನೋಡಿದ್ರೆ ಈ ತಂತ್ರಜ್ಞಾನ ಮೊದಲು ಅಭಿವೃದ್ಧಿ ಪಡಿಸಿದ್ದು ಅಮೆರಿಕಾದ ವಿನ್ಸೆಂಟ್ ಶೆಪ್ಜರ್​​ ಅನ್ನೋ ವಿಜ್ಞಾನಿ. ಅಮೆರಿಕಕ್ಕೆ ದೇಶಕ್ಕೆ ಒಮ್ಮೆ ಬರಗಾಲ ಕಾಣಿಸಿಕೊಂಡಾಗ, ಮೋಡವನ್ನು ಕಸಿ ಮಾಡಿ ಆರ್ಟಿಫೀಷಲ್ ರೇನ್ ಬರಿಸಲು ಅಮೆರಿಕದ ಒಂದು ಸಂಸ್ಥೆ ಪ್ಲಾನ್ ಮಾಡಿತ್ತು. ಅದರಂತೆ ಡ್ರೈ ಐಸ್ ಗಳನ್ನು ಮೋಡಗಳ ಮೇಲೆ ಸಿಂಪಡಿಸಿದರೇ, ಅಲ್ಲಿ ರಿಯಾಕ್ಷನ್​ಗಳಾಗಿ, ಛಿದ್ರವಾದ ಮೋಡಗಳೆಲ್ಲ ಹತ್ತಿರವಾಗುತ್ತದೆ. ಇದರಿಂದ ಒಮ್ಮೆಲೇ ಮೋಡಗಳು ಮಳೆಯನ್ನು ಧರೆಗೆ ತಳ್ಳುತ್ತದೆ ಅನ್ನೋದು ಸಿದ್ದವಿದ್ದ ಪ್ಲಾನ್. ಇದು ಯಶಸ್ವಿಯಾಗಿದ್ದನ್ನು ಕಂಡಿದ್ದ ಕೂಡಲೆ ಅಮೆರಿಕ ಇದಕ್ಕೆ ವೆದರ್ ಮಾಡಿಫಿಕೇಷನ್ ಪ್ರಾಜೆಕ್ಟ್ ಎಂದು ಹೆಸರಿಸಿ ಅದರ ಸಂಶೋಧನೆಗೆ ಕೋಟಿಗಟ್ಟಲೇ ಹೂಡಿಕೆ ಮಾಡಿತ್ತು.

ಹರಿಕೇನ್ ಕಿಂಗ್ ಚಂಡಮಾರುತವನ್ನು ತಡೆದ ಪ್ರಾಜೆಕ್ಟ್
ಕ್ಲೌಡ್ ಸೀಡಿಂಗ್ ತಂತ್ರಜ್ಞಾನಕ್ಕೆ ಪ್ರಾಜೆಕ್ಟ್ ನಾಂದಿ

ಸಂಶೋಧನೆಗಳು ಮುಂದೆ ಸಾಗುತ್ತಲೇ ಇದ್ದಾಗ, ಅಮೆರಿಕಾ ಭೀಕರವಾದ ಚಂಡಮಾರುತಕ್ಕೆ ಬಲಿಯಾಗ ಬೇಕಾಗಿತ್ತು. ಇದನ್ನು ತಡೆಗಟ್ಟದಿದ್ದರೆ ಅದೆಷ್ಟೋ ನಾಶವನ್ನು ಅಮೆರಿಕ ಅನುಭವಿಸ ಬೇಕಾಗುತ್ತದೆ ಎಂದಾಗ, ಇದನ್ನು ತಡೆಗಟ್ಟಲೂ ಕ್ಲೌಡ್ ಸೀಡಿಂಗ್ ಎನ್ನುವ ಪ್ರಾಜೆಕ್ಟ್ ಜಾರಿಗೆ ಬಂತು. ಅಂದ್ರೆ ಬಿರುಗಾಳಿ ಬೀಸಿ ಅತಿಯಾದ ಮಳೆ ವ್ಯರ್ಥವಾಗಿ ಹೋಗುವ ಬದಲು, ಗಾಳಿಗೆ ಅಲ್ಲಾಡದೇ, ಮೋಡಗಳೂ ಗುಂಪು ಗೂಡಾಗಿ ಬಿರುಗಾಳಿ ಕಡಿಮೆ ಆದ ಬಳಿಕ ಧರೆಗಿಳಿಯುವ ಹೊಸ ಪ್ರಾಜೆಕ್ಟ್ ಅನ್ನು ಸಿದ್ಧ ಪಡಿಸಿ ಅದರಲ್ಲಿ ಯಶಸ್ವಿಯಾದರು. ಅಂದಿನಿಂದ ಈ ವಿಧಾನವನ್ನು ಅಮೆರಿಕ ಸೇರಿ ಹಲವು ರಾಷ್ಟ್ರಗಳು ಸಮರೋಪಾದಿಯಲ್ಲಿ ಬಳಸುತ್ತಿದ್ದಾರೆ.

ಬ್ರಿಟಿಷ್ ರಾಯಲ್ ಫ್ಯಾಮಿಲಿ ಮದುವೆಗೆ ತಂತ್ರಜ್ಞಾನ ಬಳಕೆ
ಬೀಜಿಂಗ್ ನಲ್ಲಿ ನಡೆದ ಒಲಿಂಪಿಕ್ಸ್​ನಲ್ಲೂ ವರುಣನಿಗೆ ತಡೆ

ಮಳೆ ನಿಯಂತ್ರಣ ಮಾಡಬಹುದು ಎನ್ನುವುದು ಗೊತ್ತಾದ ಬಳಿಕ, ಇದರಿಂದ ಬಹಳಷ್ಟು ಉಪಯೋಗವನ್ನು ಪಡೆಯಲು ಶುರು ಮಾಡಿದ್ದರು. ಪ್ರಿನ್ಸ್ ಆಫ್ ಕೊಲಂಬಿಯಾ ವಿಲಿಯಂ ತನ್ನ ಡಚ್ಚಸ್ ಜೊತೆ ಮದುವೆ ನಿರ್ಧಾರವಾದಾಗ.. ಸಮಾರಂಭಕ್ಕೆ ಮಳೆ ಅಡ್ಡ ಬರಬಹುದು ಎನ್ನುವ ಆತಂಕ ಎದುರಾಗಿತ್ತು. ಇದಕ್ಕಾಗಿ ಕ್ಲೌಡ್ ಸೀಡಿಂಗ್ ವಿಧಾನವನ್ನು ಡ್ಯೂಕ್ ಅನುಸರಿಸಿ ಮಳೆಯನ್ನು ನಿಯಂತ್ರಿಸಿ ಮದುವೆ ಆಗಿದ್ದರು. ಇನ್ನು ಬಹಳ ಕುತೂಹಲ ಮೂಡಿಸಿದ್ದ ಬಿಜಿಂಗ್ ಒಲಿಂಪಿಕ್ಸ್​ನ ಪ್ರಾರಂಭಿಕ ಉತ್ಸವಕ್ಕೆ ವರುಣ ಬರೆ ಎಳೆಯುತ್ತಾನೆ ಎಂದು ಹವಮಾನ ಇಲಾಖೆ ತಿಳಿಸಿದಾಗ, ಚೀನಾ ಹೆಲಿಕಾಪ್ಟರ್ ಮೂಲಕ ಐಯೋಡಿನ್ ಸಿಂಪಡಿಸಿ ಬಿಜಿಂಗ್ ಒಲಿಂಪಿಕ್ ಉತ್ಸವವನ್ನು ಭರ್ಜರಿಯಾಗಿ ಆಚರಿಸಿತು ಅನ್ನೋದು ಎಲ್ಲರಿಗೂ ತಿಳಿದ ವಿಷಯ. ಇದೀಗ ಈ ತಂತ್ರಜ್ಞಾನವನ್ನು ಸ್ವಾರ್ಥಕ್ಕಾಗಿ ಚೀನಾ ದುರುಪಯೋಗ ಮಾಡಿಕೊಂಡರೇ, ಭಾರತ ಬರ ಪೀಡಿತವಾಗುತ್ತದೆ. ಹೀಗಾಗಿ ಚೀನಾದ ತಂತ್ರಜ್ಞಾನಕ್ಕೆ ಪ್ರತಿ ತಂತ್ರಜ್ಞಾನ ರೂಪಿಸುವಲ್ಲಿ ಭಾರತ ಕೂಡ ಮುಂದಡಿ ಇಡಬೇಕಿದೆ.

ಹಾಗೆ ನೋಡಿದ್ರೆ ಪ್ರಾಚೀನ ಭಾರತದ ಗ್ರಂಥಗಳಲ್ಲಿ ಮಳೆ ಇಂದ್ರ ಹಾಗೂ ವರುಣನ ಕೈಯಡಿಯಲ್ಲಿದೆ ಅನ್ನುತ್ತಾರೆ. ಅಷ್ಟೇ ಅಲ್ಲ ಇಂದ್ರ ಗೋಕುಲದ ಜನರ ಮೇಲೆ ಕೋಪಗೊಂಡಾಗ.. ಬೃಹತ್ ಮಳೆಯನ್ನೇ ಸುರಿಸುತ್ತಾನೆ. ಅಂದ್ರೆ ಮಳೆಯನ್ನು ದಾಳಿಯ ಅಸ್ತ್ರವನ್ನಾಗಿ ಮಾಡಿಕೊಂಡಿರ್ತಾನೆ. ಆಗ ಸ್ವತಃ ಶ್ರೀ ಕೃಷ್ಣ ಪರಮಾತ್ಮ ಗೋವರ್ಧನ ಪರ್ವತವನ್ನೇ ತನ್ನ ಕಿರು ಬೆರಳಿನಲ್ಲಿ ಎತ್ತಿ ಗೋಪಾಲಕರನ್ನು ಉಳಿಸಿರುತ್ತಾನೆ. ಈಗಲೂ ಸಹ ಇಂದ್ರನಂತೆ ಮಳೆಯ ನಿಯಂತ್ರಿಸಲು ಯತ್ನಿಸುತ್ತಿರುವ ಚೀನಾಕ್ಕೆ, ಭಾರತ ಶ್ರೀಕೃಷ್ಣನಂತೆ ಪ್ರತಿ ತಂತ್ರ ಹೆಣೆಯಬೇಕಿದೆ.. ಅಲ್ಲವೇ?

Source: newsfirstlive.com Source link