ಹಳೆಯ ಬೈಕ್​ಗೆ ಮರುಜೀವ ನೀಡಿದ ವಿದ್ಯಾರ್ಥಿ -10 ರೂಪಾಯಿಗೆ 40 ಕಿ.ಮಿ ಸಾಗುತ್ತೆ ಬೈಕ್​

ಹಳೆಯ ಬೈಕ್​ಗೆ ಮರುಜೀವ ನೀಡಿದ ವಿದ್ಯಾರ್ಥಿ -10 ರೂಪಾಯಿಗೆ 40 ಕಿ.ಮಿ ಸಾಗುತ್ತೆ ಬೈಕ್​

ಮಡಿಕೇರಿ: ತೈಲ ಬೆಲೆ ಏರಿಕೆ ಆಗುತ್ತಲೇ ಇದೆ. ಜನ್ರು ಕೂಡ ಹೇಗಪ್ಪಾ ನಾವು ವಾಹನದಲ್ಲಿ ಓಡಾಡೋದು ಅಂತ ಹಿಂದೆ ಮುಂದೆ ನೋಡ್ತಿದ್ದಾರೆ. ಆದ್ರೆ ಇಂಥ ಟೈಮಲ್ಲಿ ಇಲ್ಲೊಬ್ಬ ಯುವಕ ಗುಜರಿ ಸೇರಬೇಕಿದ್ದ ಬೈಕ್​ಗೆ ಮರುಜೀವ ಕೊಟ್ಟಿದ್ದಾನೆ. ಯುವಕನ ಈ ಪ್ರಯೋಗ ವಾಹನ ಸವಾರರಲ್ಲಿ ಹೋಪ್ ಕ್ರಿಯೇಟ್ ಮಾಡಿದೆ.

ನೋಡೋದಕ್ಕೆ ಮಾತ್ರ ಇದು ಹಳೆ ಬೈಕ್.. ಒಳ್ಳೆ ಕಂಡೀಷನ್ನಲ್ಲಿದ್ದಂಗೂ ಕಾಣುತ್ತಲ್ವಾ.. ಆದ್ರೆ ಕೊಡಗಿನ ಹುಡುಗ ಇದೇ ಹಳೆಯ ಬೈಕ್​ಗೆ ಮರುಜೀವ ನೀಡಿದ್ದಾನೆ. ಜಸ್ಟ್​ 10 ರೂಪಾಯಿಗೆ ದ್ವಿಚಕ್ರ 40 ಕಿಲೋ ಮೀಟರ್ ಸಾಗುವಂತೆ ಮಾಡಿದ್ದಾನೆ.

blank

ಹೌದು.. ಇಷ್ಟು ಸ್ಮೂಥ್ ಆಗಿ ಚಲಿಸುತ್ತಿರುವ ಈ ಬೈಕ್‍ಗೆ ಪೆಟ್ರೋಲ್ ಬೇಕಿಲ್ಲ. ಅರೆ, ಪೆಟ್ರೋಲ್ ಇಲ್ಲದೆ ಬೈಕ್ ಓಡುತ್ತಾ ಅಂತಾ ನೀವು ಕೇಳ್ಬಹುದು. ಆದ್ರೆ ಈ ಸುಝುಕಿ ಸಮುರಯಿ ಬೈಕ್ ಓಡ್ತಿರೋದು ಬ್ಯಾಟರಿ ಪವರ್​ನಿಂದ. ಸುಝುಕಿ ಕಂಪೆನಿ ಅದ್ಯಾವಾಗ ಈ ಥರ ಎಲೆಕ್ಟ್ರಿಕ್ ಬೈಕ್ ಮಾರ್ಕೆಟ್‍ಗೆ ಬಿಡ್ತು ಅಂತ ತಲೆ ಕೆಡಿಸ್ಕೊಳ್ಬೇಡಿ. ಈ ಥರ ಬ್ಯಾಟರಿಯಿಂದ ಚಲಿಸುವ ಬೈಕ್ ಆವಿಷ್ಕಾರ ಮಾಡಿರೋದು ಪೊನ್ನಂಪೇಟೆ ತಾಲೂಕಿನ ಟಿ. ಶೆಟ್ಟಿಗೇರಿ ನಿವಾಸಿ ಕಟ್ಟೇರ ಗಿಲನ್ ಕರುಂಬಯ್ಯ.

blank

ಮೊದಲಿನಿಂದಲೂ ಇಲೆಕ್ಟ್ರಿಕಲ್ ಮೆಕ್ಯಾನಿಕ್‍ನಲ್ಲಿ ಆಸಕ್ತಿ ಇದ್ದ ಕಾರಣಕ್ಕೆ ಲಾಕ್‍ಡೌನ್‍ನಲ್ಲಿ ಎಲೆಕ್ಟ್ರಿಕ್ ಬೈಕ್ ಆವಿಷ್ಕಾರ ಮಾಡಿದ್ದಾನೆ ಗಿಲನ್. ಸ್ಥಳೀಯರೊಬ್ಬರಿಂದ ಹಳೆ ಬೈಕ್ ಖರೀದಿಸಿ ಅದಕ್ಕೆ 750 ವ್ಯಾಟ್ ಮೋಟಾರ್, 48 ವೋಲ್ಟ್ ಸಾಮಥ್ರ್ಯದ 24 ಆ್ಯಮ್ಸ್ ಲೆಡಿಸಿಡ್ ಬ್ಯಾಟರಿ ಉಪಯೋಗಿಸಿ ಹೊಸ ಪ್ರಯೋಗ ಮಾಡಿದ್ದಾನೆ. ಗೇರ್ ಬದಲು ಹ್ಯಾಂಡಲ್‍ನಲ್ಲಿ ಮೂರು ಬಗೆಯ ಪವರ್ ಮೋಡ್ ತಂತ್ರಜ್ಞಾನವನ್ನೂ ಅಳವಡಿಸಿದ್ದಾನೆ.

blank

ವಿದ್ಯುತ್‍ನಿಂದ ಬ್ಯಾಟರಿ ಚಾರ್ಜ್ ಮಾಡಬಹುದಾಗಿದ್ದು, ಪೂರ್ತಿ ಚಾರ್ಜ್ ಆಗೋಕೆ ಆರು ಗಂಟೆ ಬೇಕು. ಒಂದೂವರೆ ಯೂನಿಟ್ ವಿದ್ಯುತ್ ಇದಕ್ಕೆ ಬಳಕೆಯಾಗುತ್ತೆ. ಇಷ್ಟು ಶಕ್ತಿಯಲ್ಲಿ 40 ಕಿಮೀ ಮೈಲೇಜ್ ನೀಡುತ್ತೆ ಈ ಬೈಕ್. ಇಬ್ಬರು ಆರಾಮಾಗಿ ಸಂಚರಿಸಬಹುದಾದ ಬೈಕ್‍ನಲ್ಲಿ 40 ಕಿಲೋ ಮೀಟರ್​ಗೆ ಖರ್ಚಾಗೋದು ಕೇವಲ 10 ರೂಪಾಯಿ.

ಗಿಲನ್ ಪ್ರಯತ್ನವನ್ನು ಕಂಡು ಊರವರು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಯುವಕನ ಈ ಪ್ರಯತ್ನ ಮುಂದೆ ಉತ್ತಮ ಫಲಿತಾಂಶ ಸಿಗುವ ನಿರೀಕ್ಷೆಯಲ್ಲಿ ಆತನ ಪೋಷಕರು, ಹಿತೈಷಿಗಳು ಕಾಯ್ತಿದ್ದಾರೆ.

ವರದಿ; ಯುಗ ದೇವಯ್ಯ, ನ್ಯೂಸ್ ಫಸ್ಟ್, ಕೊಡಗು

blank

Source: newsfirstlive.com Source link