ರಷ್ಯಾದಿಂದ ಲೀಕ್​ ಆಯ್ತು ಟೈಗರ್​-3 ಚಿತ್ರದ ಸಲ್ಲು ಫೋಟೋ

ರಷ್ಯಾದಿಂದ ಲೀಕ್​ ಆಯ್ತು ಟೈಗರ್​-3 ಚಿತ್ರದ ಸಲ್ಲು ಫೋಟೋ

ಬಾಲಿವುಡ್​ ನಟ ಸಲ್ಮಾನ್ ಖಾನ್ ಸದ್ಯ​ ಟೈಗರ್​ 3 ಚಿತ್ರಕ್ಕಾಗಿ ರಷ್ಯಾದಲ್ಲಿ ಬೀಡು ಬಿಟ್ಟಿದ್ದಾರೆ. ಈ ಮಧ್ಯೆ ಚಿತ್ರದಲ್ಲಿ ಸಲ್ಲು ಭಾಯ್​ ಅವರ ಪಾತ್ರವನ್ನು ಪರಿಚಯಿಸುವ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಲೀಕ್​ ಆಗಿದೆ.

ಉದ್ದನೆ ಗಡ್ಡ, ಕೆಂಪು ಬಣ್ಣದ ತಲೆಗೂದಲು ಇರುವ ಸಲ್ಮಾನ್​ ಖಾನ್​ರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ಫೋಟೋ ನೋಡಿದ ಜನ ಮಾತ್ರ ಸಲ್ಲು ಭಾಯ್​ ಹೊಸ ಲುಕ್​ ನೋಡಿ ಕನ್​ಫ್ಯೂಸ್​ ಆಗಿದ್ದಾರೆ. ಅಂದಹಾಗೆ ಯಶ್​​ ರಾಜ್​ ಬ್ಯಾನರ್​ನಲ್ಲಿ ನಿರ್ಮಾಣವಾಗ್ತಿರೋ ಟೈಗರ್​ 3 ನಲ್ಲಿ ಸಲ್ಲು ಜೊತೆ ನಟಿ ಕತ್ರಿನಾ ಕೈಫ್​ ನಟಿಸುತ್ತಿದ್ದು, ಸಲ್ಮಾನ್​ ಖಾನ್​ ರಾ ಏಜೆಂಟ್​ ಪಾತ್ರದಲ್ಲಿ ಮಿಂಚಲಿದ್ದಾರೆ.

ಆಗಸ್ಟ್​ 20 ರಂದು ಚಿತ್ರತಂಡ ಸಲ್ಮಾನ್​​ ಖಾನ್​​ ಹಾಗೂ ಕತ್ರಿನಾ ಕೈಫ್​ ಅವರೊಂದಿಗೆ ರಷ್ಯಾ ಕಡೆ ಪ್ರಯಾಣ ಬೆಳೆಸಿದ್ದ ಸಂದರ್ಭದ ಫೋಟೋವನ್ನು ಏರ್​​ಪೋರ್ಟ್​​​​ನಿಂದ ಹಂಚಿಕೊಂಡಿತ್ತು. ಸದ್ಯ ವೈರಲ್​ ಆಗಿರೋ ಫೋಟೋದಲ್ಲಿ ಸಲ್ಮಾನ್​ ಖಾನ್​​ ಸೋದರಳಿಯ ನಿರ್ವಣ್ ಖಾನ್ ಹಾಗೂ ನಿರ್ದೇಶಕ ಮನೀಶ್ ಶರ್ಮಾ ಅವರನ್ನು ಕಾರಣಬಹುದಾಗಿದೆ.

Source: newsfirstlive.com Source link