ಪಾಕ್​​ಗೆ ಅಮೆರಿಕ ಶಸ್ತ್ರಾಸ್ತ್ರಗಳು ರವಾನೆ ಆಗಿದ್ದೇಕೆ?; ತಾಲಿಬಾನಿಗಳಿಂದ ಭಾರತಕ್ಕಿರೋ ಸವಾಲೇನು?

ಪಾಕ್​​ಗೆ ಅಮೆರಿಕ ಶಸ್ತ್ರಾಸ್ತ್ರಗಳು ರವಾನೆ ಆಗಿದ್ದೇಕೆ?; ತಾಲಿಬಾನಿಗಳಿಂದ ಭಾರತಕ್ಕಿರೋ ಸವಾಲೇನು?

ಅಫ್ಘಾನ್‌ನಲ್ಲಿ ಅಮೆರಿಕ ಸೇನೆ ವಾಪಸ್‌ ಸರಿಯುವಾಗ ಕೆಲವೊಂದಷ್ಟು ಎಡವಟ್ಟು ಮಾಡಿದೆ. ಇದರ ಪರಿಣಾಮ ಸುಮಾರು 1 ಲಕ್ಷ 50 ಸಾವಿರ ಕೋಟಿ ಶಸ್ತ್ರಾಸ್ತ್ರ ಉಗ್ರರ ಕೈಸೇರಿದೆ. ಈ ಶಸ್ತ್ರಾಸ್ತ್ರಗಳು ಏನಾದವು? ಅದರಿಂದ ಭಾರತಕ್ಕೆ ಇರೋ ಸವಾಲು ಏನು? ಅನ್ನೋದನ್ನು ಹೇಳ್ತೀವಿ ಸ್ಪೆಷಲ್‌ ಸ್ಟೋರಿಯಲ್ಲಿ.

20 ವರ್ಷಗಳ ಕಾಲ ಅಫ್ಘಾನ್‌ನಲ್ಲಿದ್ದ ಅಮೆರಿಕ ಸೇನೆ ತಾಲಿಬಾನಿಗಳ ವಿರುದ್ಧ ಹೋರಾಟ ಮಾಡಿತ್ತು. ಅಫ್ಘಾನ್‌ನಲ್ಲಿ ಪ್ರಜಾಪ್ರಭುತ್ವ ಸರ್ಕಾರ ರಚನೆಗೆ ಕಾರಣವಾಗಿತ್ತು. ಅಲ್ಲಿಯ ಜನ ಶಾಂತಿಯಿಂದ ಜೀವನ ಮಾಡುವಂತೆ ಮಾಡಿತ್ತು. ಆದ್ರೆ, ಅಮೆರಿಕ ಸೇನೆ ಎರಡ್ಮೂರು ತಿಂಗಳ ಹಿಂದೆ ಯಾವುದೇ ಫ್ರೀ ಪ್ಲಾನ್‌ ಇಲ್ಲದೇ ಏಕಾಏಕಿ ಹಿಂದೆ ಸರಿಯಿತು. ಇದರ ಪರಿಣಾಮ ಅಫ್ಘಾನ್‌ ತಾಲಿಬಾನ್‌ ಉಗ್ರರ ಕೈಸೇರಿದೆ. ಉಗ್ರರು ಅಫ್ಘಾನ್‌ ಜನರ ಮೇಲೆ ಕ್ರೌರ್ಯ ಮೆರೆಯುತ್ತಿದ್ದಾರೆ. ಜನರನ್ನು ಗುಂಡಿಟ್ಟು ಕೊಲ್ಲುತ್ತಿದ್ದಾರೆ. ಮಹಿಳೆಯರು ಮನೆ ಬಿಟ್ಟು ಬರದಂತೆ ಮಾಡಿ ಬಿಟ್ಟಿದ್ದಾರೆ. ಶರಿಯಾ ಕಾನೂನು ಉಲ್ಲಂಘಿಸಿದ್ರೆ ಹುಷಾರ್‌ ಅಂತ ಗನ್‌ ಹಿಡಿದು ಎಚ್ಚರಿಸುತ್ತಿದ್ದಾರೆ……ಇದಿಷ್ಟು ಅಮೆರಿಕ ಸೇನೆ ವಾಪಸ್‌ ಆಗಿರೋದ್ರಿಂದ ಅಫ್ಘಾನ್‌ ಜನ ಅನಭವಿಸುತ್ತಿರೋ ನರಕವಾಗಿದೆ. ಇನ್ನು ಅಫ್ಘಾನ್‌ ಹೊರಗೆ ಯಾವ ಪರಿಣಾಮ ಬೀರುತ್ತಿದೆ ಗೊತ್ತಾ? ಭಾರತದ ಮೇಲೆ ಆಗುವ ಪರಿಣಾಮ ಏನು ಗೊತ್ತಾ? ಅದೆಲ್ಲವನ್ನು ಹಂತಹಂತವಾಗಿ ಹೇಳ್ತಾ ಹೋಗ್ತೀವಿ.

blank

ಅಫ್ಘಾನ್‌ ರಾಜಧಾನಿ ಕಾಬುಲ್‌ ಸಿಟಿಯಲ್ಲಿ ಮತ್ತೆ ಅಮೆರಿಕ ಸೇನೆ ಎಂಟ್ರಿ ಆಯ್ತು. ತಾಲಿಬಾನಿಗಳ ವಿರುದ್ಧ ಹೋರಾಡುತ್ತಾರೆ. ಉಗ್ರರ ಹೆಡೆಮುರಿ ಕಟ್ಟುತ್ತಾರೆ. ಅಫ್ಘಾನ್‌ನಲ್ಲಿ ಮತ್ತೆ ಶಾಂತಿ ನಲೆಸುವಂತೆ ಮಾಡುತ್ತಾರೆ. ಅಂತೂ ಅಫ್ಘಾನ್‌ ಹೆಣ್ಣು ಮಕ್ಕಳ ಕಣ್ಣೀರಿಗೆ ಅಮೆರಿಕ ಕರಗಿತು……ಇಂತಹ ಭಾವನೆ ಬಂದೇ ಬರುತ್ತೆ. ದುರಾದೃಷ್ಟವಶಾತ್‌ ವಿಷಯ ಆಗಿಲ್ಲ. ಇಲ್ಲಿ ಅಮೆರಿಕ ಸೇನೆಯ ಡ್ರೆಸ್‌ ಹಾಕಿ ಕೊಂಡು, ಅಮೆರಿಕ ಸೇನೆಯ ಅತ್ಯಾಧುನಿ ರೈಫಲ್‌ ಹಿಡಿದುಕೊಂಡು ಪೋಸ್‌ ನೀಡುತ್ತಾ ಇರುವವರು ಅಮೆರಿಕ ಸೈನಿಕರು ಅಲ್ಲವೇ ಅಲ್ಲ. ಹಾಗಾದ್ರೆ ಅವರೆಲ್ಲಾ ಯಾರು?

ಅಮೆರಿಕ ಸೇನೆಯ ವೇಷತೊಟ್ಟು ತಾಲಿಬಾನಿಗಳ ಸಂಚಾರ
ಪಕ್ಕಾ ಅಮೆರಿಕ ಸೇನೆಯಂತೆ ಭರ್ಜರಿ ಪೋಸು

ಅಮೆರಿಕ ಸೇನೆ ಮತ್ತೆ ಅಖಾಡಕ್ಕೆ ಇಳಿದ್ದಿದ್ರೆ ಖುಷಿ ಪಡುವ ವಿಚಾರವಾಗಿತ್ತು. ಆದ್ರೆ, ಅದು ಅಮೆರಿಕ ಸೇನೆಯಲ್ಲ, ಉಗ್ರರ ಕೈಯಲ್ಲಿ ಇರೋ ರೈಫಲ್‌, ತೊಟ್ಟಿರೋ ಬಟ್ಟೆ ಮಾತ್ರ ಅಮೆರಿಕದ್ದು. ಅವೇನ್‌ ಕಾಂಜಿಪಿಂಜಿ ರೈಫಲ್‌ಗಳಲ್ಲ. ಅತ್ಯಾಧುನಿತ ಎಂ-4 ಮತ್ತು ಎಂ-60 ರೈಫಲ್‌ಗಳಾಗಿವೆ. ಗುರಿ ಇಟ್ಟು ಹೊಡೆದರೆ ಒಂದೇ ಹೊಡೆತಕ್ಕೆ ವಿರೋಧಿ ಬಲಿಯಾಗಿ ಬಿಡ್ತಾನೆ. ಉಗ್ರರು ಇವುಗಳನ್ನು ಕೈಯಲ್ಲಿ ಹಿಡಿದಿದ್ದಾರೆ. ಬುಲೇಟ್‌ ಪ್ರೂಪ್‌ ಜಾಕೇಟ್‌ ಹಾಕಿದ್ದಾರೆ. ಮೊಣಕಾಲಿಗೆ ಪ್ಯಾಡ್‌ ಕಟ್ಟಿಕೊಂಡಿದ್ದಾರೆ. ಅಲ್ಪಂಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಿದ್ದ ಅಂತಾರಲ್ಲ ಹಾಗೆ.. ಅಮೆರಿಕ ಸೇನೆ ರಾತ್ರಿ ವೇಳೆ ಹಾಕುತ್ತಿದ್ದ ನೈಟ್‌ ವಿಷನ್‌ ಗಾಗಲ್‌ಗಳನ್ನು ಹಗಲೇ ಈ ಉಗ್ರರು ತೊಟ್ಟಿದ್ದಾರೆ. ಇದೇ ವೇಷದಲ್ಲಿ ಕಾಬುಲ್‌ ಸಿಡಿಯಲ್ಲಿ ರೌಂಡ್‌ ಹೊಡೆದಿದ್ದಾರೆ.

blank

ಅಮೆರಿಕ ಸೇನೆಯ ಶಸ್ತ್ರಾಸ್ತ್ರ ವಶಪಡಿಸಿಕೊಂಡ ವಿಡಿಯೋ ಫ್ಲೋ
1 ಲಕ್ಷ 50 ಸಾವಿರ ಕೋಟಿ ಬೆಲೆ ಬಾಳುವ ಶಸ್ತ್ರಾಸ್ತ್ರ ತಾಲಿಬಾನಿಗಳ ಕೈಗೆ
ಇದೇ ನೋಡಿ ಅಮೆರಿಕ ಮಾಡಿ ಹೋದ ದೊಡ್ಡ ಎಡವಟ್ಟು

ಅಮೆರಿಕ ಸೇನೆ ಅಫ್ಘಾನ್‌ನಿಂದ ವಾಪಸ್‌ ಹೋಗುವಾಗ ತರಾತುರಿಯಲ್ಲಿ ಹೋಗಿದೆ. ಕೆಲವೊಂದಷ್ಟು ಎಡವಟ್ಟುಗಳನ್ನು ಮಾಡಿ ಹೋಗಿದೆ. ಅದು ಅಂತಿಂಥ ಎಡವಟ್ಟು ಅಲ್ಲ. ಮುಂದೊಂದು ದಿನ ಭಾರತ ಸೇರಿದಂತೆ ಕೆಲವು ರಾಷ್ಟ್ರಗಳಿಗೆ ಅಪಾಯವನ್ನು ತಂದರೂ ಅಚ್ಚರಿ ಇಲ್ಲ. ಅದೇನಂದ್ರೆ ಸುಮಾರು 1 ಲಕ್ಷ 50 ಸಾವಿರ ಕೋಟಿ ಅಷ್ಟು ಶಸ್ತ್ರಾಸ್ತ್ರಗಳನ್ನು ಅಫ್ಘಾನ್‌ನಲ್ಲಿಯೇ ಬಿಟ್ಟು ಹೋಗಿರೋದು. ಅವುಗಳನ್ನು ತಾಲಿಬಾನ್‌ ಉಗ್ರರು ವಶಪಡಿಸಿಕೊಂಡಿದ್ದಾರೆ. ಅದೇ ಶಸ್ತ್ರಾಸ್ತ್ರದಲ್ಲಿಯೇ ಉಗ್ರರು ಪೋಸ್‌ ನೀಡಿದ್ದಾರೆ. ಆದ್ರೆ, ಈ ಶಸ್ತ್ರಾಸ್ತ್ರಗಳು ತಾಲಿಬಾನಿ ಉಗ್ರರಿಗೆ ಪ್ರಯೋಜನಕ್ಕೆ ಬರುತ್ತಿಲ್ಲ. ಹಾಗಾದ್ರೆ ಆ ಶಸ್ತ್ರಾಸ್ತ್ರಗಳು ಎಲ್ಲಿಗೆ ಸರಬರಾಜು ಆಗುತ್ತಿವೆ? ಅವುಗಳಿಂದ ಭಾರತಕ್ಕೆ ಏನು ಅಪಾಯ ಅನ್ನೋದು ಗೊತ್ತಾ?

ಅಮೆರಿಕ ಶಸ್ತ್ರಾಸ್ತ್ರಗಳು ಪಾಕಿಸ್ತಾನಕ್ಕೆ ರವಾನೆ
ಅಫ್ಘಾನ್‌ ಮೂಲಕ ಪಾಕ್‌ಗೆ ಗಿಫ್ಟ್‌ ಕೊಟ್ಟ ಬೈಡನ್‌

ಅಮೆರಿಕದ ಶಸ್ತ್ರಾಸ್ತ್ರಗಳು ಅತ್ಯಾಧುನಿಕವಾದವುಗಳು. ಅವುಗಳನ್ನು ಹಿಡಿದು ತಾಲಿಬಾನಿ ಉಗ್ರರು ಪೋಸ್‌ ನೀಡಬಹುದೇ ಹೊರತು ವ್ಯವಸ್ಥಿತವಾಗಿ ಉಪಯೋಗಿಸಲು ಸಾಧ್ಯವಿಲ್ಲ. ಯಾಕಂದ್ರೆ ಅವುಗಳ ಬಳಕೆಗೆ ತರಬೇತಿ ಬೇಕು. ಅದಕ್ಕೆ ಮದ್ದು ಗುಂಡುಗಳು ಬೇಕು…..ಅದಕ್ಕೆ ಬೇಕಾದಂತಹ ಕಚ್ಚಾ ವಸ್ತುಗಳು ತಾಲಿಬಾನಿ ಉಗ್ರರ ಕೈಗೆ ಸಿಗುವುದಿಲ್ಲ. ಇದೇ ಕಾರಣಕ್ಕೆ ಆ ಎಲ್ಲಾ ಶಸ್ತ್ರಾಸ್ತ್ರಗಳು ಈಗ ಪಾಪಿ ಪಾಕಿಸ್ತಾನದ ಕೈಸೇರಿವೆ ಎನ್ನಲಾಗುತ್ತಿದೆ. ಹೌದು, ಅಮೆರಿಕದ ಅತ್ಯಾಧುನಿ ಶಸ್ತ್ರಾಸ್ತ್ರಗಳು ಅಫ್ಘಾನಿಸ್ತಾನ್‌ ಮೂಲಕ ಪಾಕಿಸ್ತಾನವನ್ನು ಸೇರಿವೆ. ಈ ಮೂಲಕ ಅಮೆರಿಕ ಅಧ್ಯಭ ಜೋ ಬೈಡನ್‌ ಅಫ್ಘಾನ್‌ ಮೂಲಕ ಪಾಕಿಸ್ತಾನಕ್ಕೆ ಭರ್ಜರಿ ಗಿಫ್ಟ್‌ ನೀಡಿದ್ದಾರೆ.

ಪಾಕಿಸ್ತಾನ ಸೇನೆಗೆ, ಉಗ್ರರಿಗೆ ಶಸ್ತ್ರಾಸ್ತ್ರ ಬಳಕೆ
ಭಾರತದ ವಿರುದ್ಧ ಬಳಕೆಯಾಗುತ್ತಾ ಈ ಶಸ್ತ್ರಾಸ್ತ್ರಗಳು

ತಾಲಿಬಾನಿ ಉಗ್ರರಿಗೂ ಪಾಕಿಸ್ತಾನಕ್ಕೂ ಅವಿನಾಭಾವ ನಂಟಿದೆ. ಆದ್ರೆ, ತನಗೂ ತಾಲಿಬಾನಿ ಉಗ್ರರಿಗೂ ನಂಟಿಲ್ಲ ಅಂತ ಇಷ್ಟು ವರ್ಷಗಳ ಕಾಲ ಪಾಕಿಸ್ತಾನ ಪುಂಗಿ ಉದುತ್ತಾ ಬಂದಿತ್ತು. ಆದ್ರೆ, ಅದೀಗ ಬಟಾಬಯಲಾಗಿದೆ. ಇಷ್ಟು ವರ್ಷಗಳ ಕಾಲ ಪಾಕಿಸ್ತಾನ ಒಳಗಿನಿಂದಲೇ ತಾಲಿಬಾನಿ ಉಗ್ರರಿಗೆ ಬೆಂಬಲ ನೀಡಿದೆ. ಅಷ್ಟೇ ಅಲ್ಲ, ಗುಪ್ತಚರ ಮಾಹಿತಿಯನ್ನು ಅವರಿಗೆ ಕಾಲಕಾಲಕ್ಕೆ ನೀಡುತ್ತಾ ಬಂದಿದೆ. ಹೀಗಾಗಿಯೇ ತಾಲಿಬಾನಿಗಳು ಬಲಶಾಲಿಯಾಗಿ ಬೆಳೆದುಬಿಟ್ಟಿದ್ದಾರೆ. ದುರಾದೃಷ್ಟ ಅಂದ್ರೆ, ಅಮೆರಿಕ ಸೇನೆ ಬಿಟ್ಟೋಗಿರೋ ಶಸ್ತ್ರಾಸ್ತ್ರಗಳು ಪಾಕ್‌ ಬತ್ತಳಿಕೆ ಸೇರಿವೆ. ಪಾಕಿಸ್ತಾನದಲ್ಲಿ ಆ ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಗೆ ಬೇಕಾದ ಕಚ್ಚಾವಸ್ತುಗಳು ಸಿಗುತ್ತವೆ. ಹೀಗಾಗಿ ಅವುಗಳನ್ನು ಭಾರತದ ವಿರುದ್ಧ ಬಳಸಲು ಪಾಕ್‌ ಯತ್ನಿಸುತ್ತೆ. ಅಷ್ಟೇ ಅಲ್ಲ, ಭಾರತದ ಗಡಿಯಲ್ಲಿ ತರಬೇತಿ ಪಡೆಯುತ್ತಿರೋ ಉಗ್ರಗಾಮಿಗಳ ಕೈಗೂ ಅಮೆರಿಕ ಶಸ್ತ್ರಾಸ್ತ್ರಗಳು ಸಿಗೋ ಸಾಧ್ಯತೆ ಇದೆ.

blank

ಭಾರತಕ್ಕೆ ಇರೋ ಸಾವಾಲು ಏನು?
ಕಾಶ್ಮೀರದಲ್ಲಿ ಭಯೋತ್ಪಾದನೆ ಹೆಚ್ಚಾಗುತ್ತಾ?
ದಾಳಿಗೆ ಭಾರತ ಯಾವತ್ತೂ ಬಗ್ಗಲ್ಲ ಹುಷಾರ್‌

ಅಫ್ಘಾನ್‌ ಅನ್ನು ತಾಲಿಬಾನಿಗಳು ವಶಪಡಿಸಿಕೊಂಡ ನಂತರ ಮೊದಲು ಕೇಳಿ ಬಂದಿದ್ದೇ ಕಾಶ್ಮೀರದ ಬಗ್ಗೆಯಾಗಿದೆ. ಇಷ್ಟು ದಿನ ತಾಲಿಬಾನಿಗಳು ಅಫ್ಘಾನ್‌ ವಶಪಡಿಸಿಕೊಳ್ಳಲು ಹೋರಾಟ ಮಾಡುತ್ತಿದ್ರು. ಅಫ್ಘಾನ್‌ನ ಅಶ್ರಫ್‌ ಘನಿ ಸರ್ಕಾರದ ಜೊತೆ ಭಾರತ ಉತ್ತಮ ಸಂಬಂಧ ಹೊಂದಿತ್ತು. ಇತ್ತ ಕಾಶ್ಮೀರದಲ್ಲಿ ಉಗ್ರಗಾಮಿಗಳ ಚಟುವಟಿಕೆಗೆ ಭಾರತ ಕಡಿವಾಣ ಹಾಕಿತ್ತು. ಆದ್ರೆ, ಈಗ ತಾಲಿಬಾನಿಗಳು ಅಫ್ಘಾನ್‌ ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಭಾರತ ಅಫ್ಘಾನ್‌ ಸಂಬಂಧ ದೂರವಾಗಲಿದೆ. ಕುತಂತ್ರಿ ಪಾಕ್‌ ತಾಲಿಬಾನಿ ಉಗ್ರರನ್ನು ಬಳಸಿಕೊಂಡು ಕಾಶ್ಮೀರದಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುವ ಸಾಧ್ಯತೆ ಇದೆ. ಆದ್ರೆ, ಭಾರತ ಈಗ ಮೊದಲಿನ ಹಾಗಿಲ್ಲ. ಎಟಿಗೆ ಎದುರೇಟು ನೀಡುವುದನ್ನು ತಲಿತುಕೊಂಡಿದೆ. ಅದಕ್ಕೆ ತಾಜಾ ಉದಾಹರಣೆ ಅಂದ್ರೆ, ಏರ್‌ಸ್ಟ್ರೈಕ್‌ ಮೂಲಕ ಪಾಕಿಸ್ತಾನಕ್ಕೆ ನುಗ್ಗಿ ಉಗ್ರರನ್ನು ಹೊಡೆದುರುಳಿಸಿದ್ದು.

ಸರಕು ಸಾಗಾಣಿಕೆಗೆ ತಾಲಿಬಾನ್‌ ಅಡ್ಡಿಯಾಗುತ್ತಾ?

ಮೊದಲು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸರಕು ಸಾಗಾಣಿಕೆಗಾಗಿ ಪಾಕಿಸ್ತಾನ ಮೂಲಕ ಭೂ ಮಾರ್ಗವಿತ್ತು. ಆದ್ರೆ, ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ಮೇಲೆ ಇರಾನ್‌ಗೆ ಜಲಮಾರ್ಗವನ್ನು ಅಭಿವೃದ್ಧಿ ಪಡಿಸಿದರು. ಆಮೇಲೆ ಇರಾನ್‌, ಅಫ್ಘಾನಿಸ್ತಾನ್‌ ಮೂಲಕ ಮಧ್ಯಪ್ರಾಚ್ಯ ರಾಷ್ಟ್ರಗಳ ಜೊತೆ ಸರಕು ಸಗಾಣಿಕೆಗೆ ವ್ಯವಹಾರ ನಡೆಯುತ್ತಿತ್ತು. ಆದ್ರೆ, ಈಗ ತಾಲಿಬಾನಿಗಳು ಅಧಿಕಾರಕ್ಕೆ ಬರುವುದರಿಂದ ಭಾರತ ಮಧ್ಯಪ್ರಾಚ್ಯಕ್ಕೆ ಇರೋ ಸಂಪರ್ಕದ ಮಾರ್ಗಕ್ಕೆ ಅಡ್ಡಿಯಾಗಬಹುದು. ಇಲ್ಲವೇ ತಾಲಿಬಾನಿಗಳು ಅದೇ ಮಾರ್ಗದಲ್ಲಿ ಸರಕುಸಾಗಾಣಿಕೆಗೆ ಅನುಕೂಲ ನೀಡುತ್ತಾರಾ ಅನ್ನೋದನ್ನು ಕಾದು ನೋಡಬೇಕಿದೆ. ಆದ್ರೆ, ತಾಲಿಬಾನಿಗಳ ಹಿಂದೆ ಭಾರತದ ವಿರೋಧಿ ರಾಷ್ಟ್ರಗಳಾದ ಪಾಕಿಸ್ತಾನ ಮತ್ತು ಚೀನಾ ಇರುವುದರಿಂದ ಭಾರತಕ್ಕೆ ತಾಲಿಬಾನಿಗಳು ಅಡ್ಡಿ ಪಡಿಸುವ ಸಾಧ್ಯತೆಯೇ ಹೆಚ್ಚಾಗಿದೆ.
ಅಮೆರಿಕ ಮಾಡಿರೋ ಎಡವಟ್ಟಿನಿಂದ ಭಾರತಕ್ಕೂ ಸಮಸ್ಯೆ ಆಗಬಹುದು. ಆದ್ರೆ, ಎಟಿಗೆ ಎದುರೇಟು ನೀಡುವುದನ್ನು ಭಾರತ ರಕ್ತಗತ ಮಾಡಿಕೊಂಡಿದೆ. ಹೀಗಾಗಿ ಭಾರತ ಎಂದಿಗೂ ಉಗ್ರರಿಗೆ ತಲೆಭಾಗುವ ಪ್ರಶ್ನೆಯೇ ಇಲ್ಲ.

Source: newsfirstlive.com Source link