ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟ – ನಾಲ್ವರ ಸಾವು, 10 ಮಂದಿಗೆ ಗಾಯ

ಲಕ್ನೋ: ಗ್ಯಾಸ್ ಬಲೂನ್ ಸಿಲಿಂಡರ್ ಸ್ಫೋಟಗೊಂಡು ಬಲೂನ್ ಮಾರಾಟಗಾರ ಸೇರಿದಂತೆ ನಾಲ್ವರು ಮೃತಪಟ್ಟಿದ್ದು, 10 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾ ಮತ್ತು ಉತ್ತರ ಪ್ರದೇಶದ ವಾರಾಣಸಿಯಲ್ಲಿ ಭಾನುವಾರ ನಡೆದಿದೆ.

ಚಿಂದ್ವಾರಾ ಮಾರುಕಟ್ಟೆಯಲ್ಲಿ ಮೃತಪಟ್ಟರನ್ನು ತಾಜುದ್ದೀನ್ ಅನ್ಸಾರಿ ನಿಜಾಮುದ್ದೀನ್ ಅನ್ಸಾರಿ(40) ಮತ್ತು ಶೇಖ್ ಇಸ್ಮಾಯಿಲ್(70) ಎಂದು ಗುರುತಿಸಲಾಗಿದ್ದು, ವಾರಾಣಾಸಿಯ ರಾಮನಗರ ಪ್ರದೇಶದಲ್ಲಿ ಮೃತಪಟ್ಟವರನ್ನು ಗೀತಾ ದೇವಿ(40) ಮತ್ತು ಲಲ್ಲಾ(30) ಎಂದು ಗುರುತಿಸಲಾಗಿದೆ. ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ:ಅಫ್ಘಾನಿಸ್ತಾನದ ಮಹಿಳೆಗೆ ಮಿಲಿಟರಿ ವಿಮಾನದಲ್ಲಿ ಹೆರಿಗೆ

ಚಿಂದ್ವಾರ ಮಾರುಕಟ್ಟೆಯಲ್ಲಿ ಸಿಲಿಂಡರ್ ಸ್ಫೋಟಗೊಂಡ ಶಬ್ದ ಬಹಳ ಜೋರಾಗಿತ್ತು. ಬಲೂನ್ ಮಾರಾಟಗಾರ ಬಲೂನ್‍ಗೆ ಗ್ಯಾಸ್ ತುಂಬಿಸುವ ವೇಳೆ ಈ ಘಟನೆ ನಡೆದಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಸದ್ಯ ಈ ಕುರಿತಂತೆ ಪೊಲೀಸರು ಘಟನಾ ಸ್ಥಳಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದಾರೆ. ಇದನ್ನೂ ಓದಿ: ಐಪಿಎಲ್ ಆರಂಭಕ್ಕೂ ಮೊದಲೇ ನಾವು ಆಡುವುದಿಲ್ಲ ಎಂದ ಸ್ಟಾರ್ ಆಟಗಾರರು

ಮತ್ತೊಂದೆಡೆ ವಾರಣಾಸಿ ಪೊಲೀಸರು ಘಟನೆಯಲ್ಲಿ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ತಿಳಿಸಿದ್ದಾರೆ.

Source: publictv.in Source link