ಲಾರ್ಡ್ಸ್​​​ನಲ್ಲಿ ರಿಷಭ್​ ಪಂತ್​ ವೈಫಲ್ಯ.. ಡೆಲ್ಲಿ ಡ್ಯಾಶರ್ ಚಾನ್ಸ್​ ಕಿತ್ಕೊಳ್ತಾರಾ ಸಹಾ?

ಲಾರ್ಡ್ಸ್​​​ನಲ್ಲಿ ರಿಷಭ್​ ಪಂತ್​ ವೈಫಲ್ಯ.. ಡೆಲ್ಲಿ ಡ್ಯಾಶರ್ ಚಾನ್ಸ್​ ಕಿತ್ಕೊಳ್ತಾರಾ ಸಹಾ?

ರಿಷಭ್​ ಪಂತ್..! ಈತನನ್ನ ಮಾಜಿ ಕ್ರಿಕೆಟಿಗರು, ಕ್ರಿಕೆಟ್​ ವಿಶ್ಲೇಷಕರು ಟೀಮ್​ ಇಂಡಿಯಾದ ಆಪತ್ಬಾಂಧವ ಅಂತಾನೇ ಕರಿತಾರೆ. ಈತ ಕೂಡ ಕೆಲ ಪಂದ್ಯಗಳಲ್ಲಿ ತಂಡಕ್ಕೆ ಹಾಗೆ ನೆರವಾಗಿದ್ದಾನೆ. ಆದ್ರೆ, ಹಲವು ಪಂದ್ಯಗಳಲ್ಲಿ ಎಡವಿದ್ದಾನೆ. ಸಿಕ್ಕ ಅವಕಾಶಗಳನ್ನ ಕೈ ಚೆಲ್ಲಿದ್ದಾನೆ.

ರಿಷಭ್​ ಪಂತ್​​ ಒಬ್ಬ ರಿಯಲ್​ ಗೇಮ್​ ಚೇಂಜರ್​​​. ಸಂಕಷ್ಟದಲ್ಲಿರುವ ತಂಡವನ್ನ ಕಾಪಾಡಬಲ್ಲ ಸಂಜೀವಿನಿ. ಟಾಪ್​ ಆರ್ಡರ್​ ಬ್ಯಾಟ್ಸ್​​ಮನ್​​ಗಳು ಕೈ ಕೊಟ್ರೂ ಏಕಾಂಗಿಯಾಗಿ ತಂಡಕ್ಕೆ ನೆರವಾಗುವ ಆಪತ್ಬಾಂಧವ. ಕಳೆದ ಬಾರ್ಡರ್​-ಗವಾಸ್ಕರ್​ ಸರಣಿಯ ಬಳಿಕ ಪಂತ್​ ಮಾಜಿ ಆಟಗಾರರು, ಕ್ರಿಕೆಟ್​ ವಿಶ್ಲೇಷಕರ ಕಣ್ಣಿಗೆ ಕಂಡಿದ್ದು ಹೀಗೆ. ಪಂತ್​ಗೆ ಆ ಸಾಮರ್ಥ್ಯವೂ ಇದೆ. ಇದಕ್ಕೆ ಉದಾಹರಣೆಗಳು ಇವೆ.

blank

ಇದನ್ನೂ ಓದಿ: IPL​ ಮರು ಆಯೋಜನೆಯಿಂದ ಬಿಸಿಸಿಐಗೆ ಟೆನ್ಶನ್.. ಫ್ರಾಂಚೈಸಿಗಳಿಗೆ ವಾರ್ನಿಂಗ್​​​!

ಆದ್ರೆ, ತಮ್ಮ ಸ್ಥಾನದ ಜವಾಬ್ದಾರಿ ಸ್ವತಃ ಪಂತ್​ಗೆ ಅರಿವಾದಂತಿಲ್ಲ. ಇದಕ್ಕೆ ಇಂಡೋ-ಇಂಗ್ಲೆಂಡ್​​​ ನಡುವಿನ​​ 2ನೇ ಟೆಸ್ಟ್​​​​ನ​ ಅಂತಿಮ ದಿನದಾಟವೇ ಬೆಸ್ಟ್​ ಎಕ್ಸಾಂಪಲ್​. ಲಾರ್ಡ್ಸ್​​​​ ಟೆಸ್ಟ್​​​ನ 4ನೇ ದಿನದಾಟದಲ್ಲಿ ಟೀಮ್​ ಇಂಡಿಯಾ ಟಾಪ್​ ಆರ್ಡರ್​ ವಿಕೆಟ್​​​ಗಳನ್ನು ಕಳೆದುಕೊಂಡು ಒತ್ತಡಕ್ಕೆ ಸಿಲುಕಿತ್ತು. ಕ್ರೀಸ್​​ನಲ್ಲಿ ಇದ್ದ ರಿಷಭ್​ ಪಂತ್ ಇಡೀ ತಂಡಕ್ಕೆ ಭರವಸೆಯಾಗಿದ್ರು. ತಂಡವನ್ನ ಸಂಕಷ್ಟದಲ್ಲಿದ್ದ ತಂಡವನ್ನ ಪಾರು ಮಾಡುತ್ತಾರೆ ಎಂಬ ಲೆಕ್ಕಚಾರ ಹಾಕಲಾಗಿತ್ತು. ಆದರೆ ಪಂತ್​ ಮಾತ್ರ ಎಲ್ಲರ ನಿರೀಕ್ಷೆ ಹುಸಿಗೊಳಿಸಿದ್ರು.

4ನೇ ದಿನದಾಟದಲ್ಲಿ 29 ಎಸೆತಗಳನ್ನ ಎದುರಿಸಿ 14 ರನ್​ ಗಳಿಸಿದ್ದ ಪಂತ್​ ಅಂತಿಮ ದಿನದ ಆರಂಭದಲ್ಲೇ ವಿಕೆಟ್​ ಒಪ್ಪಿಸಿದ್ರು. ಕೊನೆಯ ದಿನ ಕೇವಲ 17 ಎಸೆತಗಳನ್ನ ಎದುರಿಸಿದ ಪಂತ್​, 8ರನ್​ ಕಲೆ ಹಾಕಿ ಬೇಜವಾಬ್ದಾರಿಯಿಂದ ಔಟಾದ್ರು. ಇದು ತಂಡವನ್ನ ಒತ್ತಡಕ್ಕೆ ಸಿಲುಕಿಸಿತು. ಆದ್ರೆ, ಆ ಬಳಿಕ ಕಣಕ್ಕಿಳಿದ ಮೊಹಮ್ಮದ್​ ಶಮಿ ಮತ್ತು ಜಸ್​​ಪ್ರಿತ್ ​ಬೂಮ್ರಾ ಜವಾಬ್ಧಾರಿ ಅರಿತು ಬ್ಯಾಟಿಂಗ್​ ನಡೆಸಿದ್ರು.

blank

ಇದನ್ನೂ ಓದಿ:ಟೀಂ ಇಂಡಿಯಾ ಹೆಡ್​ಕೋಚ್​​ ರೇಸ್​​ನಲ್ಲಿ ಅಚ್ಚರಿ ಹೆಸರು; ಇವರು ಬ್ಯಾಟಿಂಗ್ ಮಾಂತ್ರಿಕ

ಅವರನ್ನಾದ್ರೂ ನೋಡಿ ಕಲಿಯಬೇಕಿದೆ ಅಂದರೆ ತಪ್ಪಾಗೋದಿಲ್ಲ. ಯಾಕಂದ್ರೆ ಪಂತ್​ ಬೇಜವಾಬ್ಧಾರಿಯುತ ಆಟ ಕೇವಲ ಒಂದು ಇನ್ನಿಂಗ್ಸ್​ನಂದಲ್ಲ. ವಿಶ್ವ ಟೆಸ್ಟ್ ​ಚಾಂಪಿಯನ್​​ ಶಿಪ್​​​​ ಫೈನಲ್​​​ನಲ್ಲೂ ಪಂತ್​​ ನೀಡಿದ್ದು ನೀರಸ ಪ್ರದರ್ಶನವನ್ನೇ. ಮೊದಲ ಇನ್ನಿಂಗ್ಸ್​​ನಲ್ಲಿ 41 ರನ್​ಗಳಿಗೆ ಆಟ ಮುಗಿಸಿದ ಪಂತ್​, 2ನೇ ಇನ್ನಿಂಗ್ಸ್​​ 4 ರನ್​ಗಳಿಸಿ ಔಟಾದ್ರು. ಇಂಗ್ಲೆಂಡ್​​ ಸರಣಿಯ ನಾಟಿಂಗ್​ ಹ್ಯಾಮ್​ ಟೆಸ್ಟ್​ನಲ್ಲೂ ಪಂತ್​ರಿಂದ ಜವಾಬ್ದಾರಿಯುತ ಪ್ರದರ್ಶನ ಬರಲಿಲ್ಲ.

ಈ ಹಿಂದೆ ಬಾರ್ಡರ್​​-ಗವಾಸ್ಕರ್​ ಸರಣಿ ಹಾಗೂ ಭಾರತದಲ್ಲಿ ನಡೆದ ಇಂಗ್ಲೆಂಡ್​​ ವಿರುದ್ಧ ಸರಣಿ ಈ ಎರಡರಲ್ಲೂ ಪಂತ್​ ಬಿಗ್​ ಇನ್ನಿಂಗ್ಸ್​ ಕಟ್ಟಿದ್ದಾರೆ ನಿಜ. ಆದ್ರೆ, ಈ ಸರಣಿಯಲ್ಲ್ಲೂ ಔಟ್​ ಆಗಿದ್ದು ಬೇಜವಾಬ್ಧಾರಿಯುತ ಹೊಡೆತಕ್ಕೆ ಕೈ ಹಾಕಿಯೇ ಅನ್ನೋದನ್ನ ಮರೆಯುವಂತಿಲ್ಲ. ಈ ತಪ್ಪಿನಿಂದಲೇ ಹಲವು ಬಾರಿ ಸೆಂಚುರಿ ಸಿಡಿಸುವ ಅವಕಾಶವನ್ನೂ ಪಂತ್​ ಕೈ ಚೆಲ್ಲಿದ್ದಾರೆ.

blank

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧದ 3ನೇ ಟೆಸ್ಟ್​ ಪಂದ್ಯ; ಟೀಂ ಇಂಡಿಯಾದಲ್ಲಿ ಭಾರೀ ಬದಲಾವಣೆ ಪಕ್ಕಾ..!

ಹೀಗೆ ಬೇಜವಾಬ್ದಾರಿಯುತ ಆಟ ಮುಂದುವರೆದರೇ ಪಂತ್​ ಸ್ಥಾನಕ್ಕೆ ಕುತ್ತು ಬರೋದ್ರಲ್ಲಿ ಅನುಮಾನವೇ ಇಲ್ಲ. ಯಾಕಂದ್ರೆ ಕಳೆದ ಕೆಲ ಪಂದ್ಯಗಳಿಂದ ಬೆಂಚ್​ಗೆ ಮಾತ್ರ ಸೀಮಿತವಾಗಿರುವ ವೃದ್ಧಿಮಾನ್​ ಸಾಹ ಸ್ಥಾನಕ್ಕಾಗಿ ಕಾದು ಕುಳಿತಿದ್ದಾರೆ. ಹೀಗಾಗಿ ಸರಣಿಯ ಉಳಿದ ಪಂದ್ಯಗಳಲ್ಲೂ ರಿಷಭ್​ ಕಳಪೆ ಮುಂದುವರೆದಿದ್ದೇ ಆದ್ರೆ, ಸಾಹ ಚಾನ್ಸ್​ ಗಿಟ್ಟಿಸಿಕೊಳ್ಳೋದ್ರಲ್ಲಿ ಅನುಮಾನವೇ ಇಲ್ಲ.

ಇದನ್ನೂ ಓದಿ: ಹಳೇ ಹೈದ್ರಾಬಾದ್​​ ಗಲ್ಲಿಯಲ್ಲಿ ವೇಗಿ ಮೊಹಮ್ಮದ್ ಸಿರಾಜ್​ ಕಟೌಟ್..!

Source: newsfirstlive.com Source link