ಗಡ್ದಧಾರಿಯಾಗಿ ರಷ್ಯಾದ ಬೀದಿಯಲ್ಲಿ ಸಲ್ಮಾನ್ ಅಲೆದಾಟ – ಫೋಟೋ ವೈರಲ್

ಮುಂಬೈ: ಬಾಲಿವುಡ್ ಬ್ಯಾಡ್ ಬಾಯ್ ನಟ ಸಲ್ಮಾನ್ ಖಾನ್ ಸದಾ ಯಂಗ್ ಆ್ಯಂಡ್ ಎನರ್ಜಿಟಿಕ್ ಆಗಿ ಹ್ಯಾಂಡ್‍ಸಮ್ ಲುಕ್‍ನಲ್ಲಿ ಕಾಣಿಸಿಕೊಳ್ಳುತ್ತಾರೆ. ಸಲ್ಲು ಏನೇ ಸ್ಟೈಲ್ ಮಾಡಿದರೂ ಅದು ಬಾಲಿವುಡ್‍ನಲ್ಲಿ ಟ್ರೆಂಡ್ ಸೆಟ್ ಮಾಡಿಬಿಡುತ್ತದೆ. ಸದ್ಯ ಸಲ್ಮಾನ್‍ಖಾನ್ ಗಡ್ಡ ಬಿಟ್ಟುಕೊಂಡು ರಷ್ಯಾದ ಬೀದಿಯಲ್ಲಿ ಅಲೆದಾಡುತ್ತಿರುವ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

ಹೌದು, ಬಾಲಿವುಡ್ ಬ್ಯಾಚುಲರ್ ಎಂದೇ ಫೇಮಸ್ ಆಗಿರುವ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಅಭಿನಯದ ಬಹು ನಿರೀಕ್ಷಿತ ಟೈಗರ್-3 ಸಿನಿಮಾದ ಶೂಟಿಂಗ್ ರಷ್ಯಾದಲ್ಲಿ ನಡೆಯುತ್ತಿದೆ. ಸದ್ಯ ಈ ಸಿನಿಮಾದ ಶೂಟಿಂಗ್ ವೇಳೆ ಸಲ್ಮಾನ್ ಖಾನ್ ಕೆಂಪು ಬಣ್ಣದ ಉದ್ದ ದಾಡಿ ಮತ್ತು ಉದ್ದ ಕೂದಲು ಬಿಟ್ಟುಕೊಂಡು ರಷ್ಯಾದ ಬೀದಿಯಲ್ಲಿ ಓಡಾಡಿದ್ದಾರೆ. ಈ ನ್ಯೂ ಲುಕ್‍ನಲ್ಲಿ ಸಲ್ಮಾನ್ ಖಾನ್ ಸಖತ್ ಹ್ಯಾಂಡ್ ಸಮ್ ಆಗಿ ಕಾಣಿಸಿಕೊಂಡಿದ್ದು, ಅವರ ಗುರುತೆ ಸಿಗದಂತೆ ಬದಲಾಗಿದ್ದಾರೆ. ಇದೇ ವೇಳೆ ಅಭಿಮಾನಿಯೊಬ್ಬರು ಸಲ್ಮಾನ್ ಕಾನ್ ಜೊತೆ ಫೋಟೋ ಕ್ಲಿಕ್ಕಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಇದೀಗ ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಸಲ್ಮಾನ್ ಖಾನ್ ಹೊಸ ಲುಕ್‍ಗೆ ಫುಲ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಸಲ್ಮಾನ್ ಖಾನ್‍ಗೆ ಮಂಡಿಯೂರಿ ಧನ್ಯವಾದ ತಿಳಿಸಿದ ರಾಖಿ ಸಾವಂತ್

ಏಕ್ ತಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾದ ನಂತರ ಸಲ್ಮಾನ್ ಖಾನ್ ಹಾಗೂ ಕತ್ರಿನಾ ಕೈಫ್ ಟೈಗರ್-3 ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದು, ಈ ಸಿನಿಮಾದಲ್ಲಿ ಸಲ್ಮಾನ್ ಏಜೆಂಟ್ ಪಾತ್ರದಲ್ಲಿ ಕಾಣಿಸಿಕೊಳ್ಳಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಚಿತ್ರಕ್ಕೆ ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ವಿಶೇಷವೆಂದರೆ ಈ ಸಿನಿಮಾದ ಅಥಿತಿ ಪಾತ್ರದಲ್ಲಿ ಬಾಲಿವುಡ್ ಕಿಂಗ್ ಖಾನ್ ಶಾರೂಖ್ ಕೂಡ ಅಭಿನಯಿಸಲಿದ್ದಾರೆ ಎಂಬ ಸುದ್ದಿ ಇದೆ.  ಇದನ್ನೂ ಓದಿ: ದಕ್ಷಿಣ ಭಾರತದ ಸಿನಿಮಾಗಳತ್ತ ಮುಖ ಮಾಡಿದ ಸಲ್ಮಾನ್ ಖಾನ್

Source: publictv.in Source link