ಪರಪ್ಪನ ಅಗ್ರಹಾರದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ- ಕೈದಿಗಳ ಪ್ರತಿಭೆಗೆ ಕಂಡು ಜೈಲಾಧಿಕಾರಿಗಳಿಗೆ ಅಚ್ಚರಿ

ಪರಪ್ಪನ ಅಗ್ರಹಾರದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ- ಕೈದಿಗಳ ಪ್ರತಿಭೆಗೆ ಕಂಡು ಜೈಲಾಧಿಕಾರಿಗಳಿಗೆ ಅಚ್ಚರಿ

ಬೆಂಗಳೂರು: ಪರಪ್ಪನ ಅಗ್ರಹಾರ ಸೆಂಟ್ರಲ್ ಜೈಲಿನಲ್ಲಿರುವ ಕೈದಿಗಳಿಗೆ ಅಧಿಕಾರಿಗಳು ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಏರ್ಪಡಿಸಿದ್ದು, ಸ್ವಾತಂತ್ರ್ಯ ದಿನಾಚರಣೆಗೆ ನಿಮಿತ್ತ ಸೆಂಟ್ರಲ್ ಜೈಲಿನಲ್ಲಿ ಸ್ಪರ್ಧಾ ಕಾರ್ಯಕ್ರಮದಲ್ಲಿ ಕೈದಿಗಳ ಪ್ರತಿಭೆಯನ್ನು ಕಂಡು ಅಧಿಕಾರಿಗಳು ಮೆಚ್ಚುಗೆ ಸೂಚಿಸಿದ್ದಾರೆ.

blank

ಚಿತ್ರಕಲೆ, ಗಾಯನ, ಸಂಗೀತ ಸೇರಿದಂತೆ ವಿವಿಧ ಪ್ರತಿಭಾಕಾರಂಜಿ ಸ್ಪರ್ಧೆ ಏರ್ಪಡಿಸಲಾಗಿತ್ತು. ಹಲವು ಕೈದಿಗಳು ಉತ್ಸಾಹದಿಂದ ಚಿತ್ರ ಬರೆದು, ಗಾಯನ ಮಾಡಿ ಬಹುಮಾನ ಪಡೆದುಕೊಂಡರು. ಡ್ರಗ್ಸ್ ಕೇಸ್​​​ನಲ್ಲಿ ಜೈಲಿನಲ್ಲಿರುವ ನೈಜೀರಿಯನ್ಸ್ ಕೂಡ ಪ್ರತಿಭಾಕಾರಂಜಿಯಲ್ಲಿ ಭಾಗಿಯಾಗಿದ್ದು ವಿಶೇಷವಾಗಿತ್ತು. ಒಟ್ಟಾರೆ ಜೈಲಿನ 42 ಮಂದಿ ಕೈದಿಗಳು ವಿವಿಧ ಸ್ಪರ್ಧೆಯಲ್ಲಿ ಉತ್ಸಾಹದಿಂದ ಭಾಗಿಯಾಗಿದ್ದರು.

blank

ವಿಭಿನ್ನವಾಗಿ ಚಿತ್ರಗಳನ್ನ ಬಿಡಿಸಿ ಜೈಲಾಧಿಕಾರಿಗಳನ್ನೇ ಕೈದಿಗಳು ಅಚ್ಚರಿಗೊಳಿಸಿದರು. ಭಾರತ ಮಾತೆ, ಡಾ.ಬಿ.ಆರ್.ಅಂಬೇಡ್ಕರ್, ಪರಿಸರ, ಗಾಂಧೀಜಿ, ಬುದ್ಧ, ವಿಷ್ಣು, ಕೃಷ್ಣ, ಬಾಲಕೃಷ್ಣ, ಹಳ್ಳಿ ಪರಸರ ಸೇರಿದಂತೆ ಅನೇಕ ಚಿತ್ರಗಳನ್ನು ಬಿಡಿಸಿ ಕೈದಿಗಳು ಗಮನಸೆಳೆದಿದ್ದರು. ಕೈದಿಗಳು ಬಿಡಿಸಿದ ಚಿತ್ರಗಳ ವೀಕ್ಷಣೆ ಮಾಡಿ ಐಜಿಪಿ ನಂಜುಂಡಸ್ವಾಮಿ ಅವರು, ಅಂಬೇಡ್ಕರ್ ಚಿತ್ರ ಬಿಡಿಸಿ ಸಂವಿಧಾನದ ಬಗ್ಗೆ ಬರೆದಿದ್ದ ಮಹಿಳಾ ಕೈದಿಗೆ ಪ್ರಥಮ ಬಹುಮಾನ ನೀಡಿದರು.

blank

Source: newsfirstlive.com Source link