ಹೊಸ ಭರವಸೆ ಹುಟ್ಟು ಹಾಕಿದ ಟೇಲೆಂಡರ್ಸ್..ಅದ್ಭುತ ಬ್ಯಾಟಿಂಗ್​ ಹಿಂದಿದೆ ತಿಂಗಳ ಕಠಿಣಾಭ್ಯಾಸ

ಹೊಸ ಭರವಸೆ ಹುಟ್ಟು ಹಾಕಿದ ಟೇಲೆಂಡರ್ಸ್..ಅದ್ಭುತ ಬ್ಯಾಟಿಂಗ್​ ಹಿಂದಿದೆ ತಿಂಗಳ ಕಠಿಣಾಭ್ಯಾಸ

ಸೇನಾರಾಷ್ಟ್ರಗಳಲ್ಲಿ ಟೀಮ್ ಇಂಡಿಯಾದ ಹಿನ್ನಡೆಗೆ ಬಾಲಗೋಚಿಗಳೇ ಕಾರಣ ಎಂಬ ಆರೋಪವೊಂದಿತ್ತು. ಈ ಆರೋಪಕ್ಕೆ ಇದೀಗ ಬ್ಯಾಟ್ ಮೂಲಕವೇ ಟೇಲೆಂಡರ್ಸ್ ಉತ್ತರಿಸಿದ್ದಾರೆ. ಇಂಗ್ಲೆಂಡ್​ ವಿರುದ್ಧದ ಮೊದಲ ಎರಡು ಟೆಸ್ಟ್​​ಗಳಲ್ಲಿ ಇವರು ನೀಡಿದ ಪ್ರದರ್ಶನ ಇದೀಗ ಹೊಸ ಭರವಸೆ ಮೂಡಿಸಿದೆ.

blank

‘ಬೂಮ್ರಾ, ಶಮಿ, ಸಿರಾಜ್‌ ಹಾಗೂ ಇಶಾಂತ್‌, ಉಮೇಶ್​ ನೆಟ್ಸ್‌ನಲ್ಲಿ ಶ್ರಮ ವಹಿಸುತ್ತಿದ್ದಾರೆ. ಹಾಗಾಗಿ, ಕೊನೆಯಲ್ಲಿ ಕನಿಷ್ಠ 20-30 ನಿರ್ಣಾಯಕ ರನ್‌ ಸೇರ್ಪಡೆಯಾಗುವ ಬಗ್ಗೆ ಭರವಸೆ ಇದೆ. ಬೌಲರ್‌ಗಳು ನೆಟ್ಸ್‌ನಲ್ಲಿ 10-12 ನಿಮಿಷಗಳ ಕಾಲ ಬ್ಯಾಟಿಂಗ್‌ ಮಾಡುತ್ತಿರುವುದು ಉತ್ತಮ ಸಂಗತಿ. ಇದರಿಂದಾಗಿ ಫಲಿತಾಂಶ ತಡವಾಗಿ ಬರಲಿದೆ. ಆದ್ರೆ, ತಂಡದ ಗೆಲುವಿಗೆ ಪ್ರತಿಯೊಬ್ಬರ ಕೊಡುಗೆ ಮುಖ್ಯ. ಈ ಬಾರಿ ಟೇಲೆಂಡರ್ಸ್‌ಗಳಿಂದಲೂ ಅಲ್ಪ ಕೊಡುಗೆ ನಿರೀಕ್ಷಿಸುತ್ತಿದ್ದೇವೆ’..

-ರಹಾನೆ, ಉಪನಾಯಕ

ಇದು ಇಂಗ್ಲೆಂಡ್​​ ವಿರುದ್ಧದ ಟೆಸ್ಟ್​ ಸರಣಿಯ ಆರಂಭಕ್ಕೂ ಮುನ್ನ ವೈಸ್​ ಕ್ಯಾಪ್ಟನ್ ರಹಾನೆ, ಟೇಲೆಂಡರ್​ಗಳ ಬಗ್ಗೆ ಆಡಿದ್ದ ಭರವಸೆ ಮಾತು. ಟೇಲೆಂಡರ್ಸ್​ಗಳ ಕೊಡುಗೆಯೇ ನಿರ್ಣಾಯಕವಾಗಲಿದೆ ಅನ್ನೋದು ರಹಾನೆ ಮಾತಿನಲ್ಲಿ ಸ್ಪಷ್ಟವಾಗಿತ್ತು. ಜೊತೆಗೆ ಅವರು ಕೊಡುಗೆ ನೀಡುವ ಭರವಸೆಯ ವಿಶ್ವಾಸವೂ ಇತ್ತು. ರಹಾನೆಯ ವಿಶ್ವಾಸವನ್ನ ಬಾಲಗೋಚಿಗಳು ಹುಸಿಗೊಳಿಸಲಿಲ್ಲ.

blank

ಆದ್ರೆ, ಪತ್ರಿಕಾಗೋಷ್ಠಿಯಲ್ಲಿ ರಹಾನೆ ಟೇಲೆಂಡರ್ಸ್​ಗಳ ಕೊಡುಗೆಯೇ ನಿರ್ಣಾಯಕವಾಗಲಿದೆ ಅಂದಿದ್ದಕ್ಕೆ ಇದ್ದ ಕಾರಣವನ್ನ ಅಲ್ಲಗಳೆಯುವಂತಿಲ್ಲ. ಈ ಹಿಂದೆ 2018ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಟೀಮ್ ಇಂಡಿಯಾ 4-1 ಅಂತರದಿಂದ ಸರಣಿಯನ್ನ ಕೈ ಚೆಲ್ಲಿತ್ತು. ಟೇಲೆಂಡರ್ಸ್​​ ಕಳಪೆ ಪ್ರದರ್ಶನವೂ ಸರಣಿಯ ಸೋಲಿಗೆ ಕಾರಣವಾಗಿತ್ತು. ಯಾಕಂದ್ರೆ, 2018ರ ಪ್ರವಾಸದ 5 ಪಂದ್ಯಗಳಲ್ಲಿ ಟೇಲೆಂಡರ್ಸ್​ಗಳು ಗಳಿಸಿದ್ದು ಕೇವಲ 74 ರನ್ ಮಾತ್ರ!

ಈ ಸರಣಿ ಮಾತ್ರವಲ್ಲ. ಆ ನಂತರದ ಪಂದ್ಯಗಳಲ್ಲೂ ಬಾಲಂಗೋಚಿಗಳ ರನ್​ ಗಳಿಕೆ ಅಷ್ಟಕ್ಕಷ್ಟೇ. ಕಳೆದ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ಟೂರ್ನಿಯ 18 ಪಂದ್ಯಗಳಲ್ಲಿ, 8-11 ನೇ ಕ್ರಮಾಂಕದಲ್ಲಿ ಟೇಲೆಂಡರ್ಸ್​​ಗಳ ಬ್ಯಾಟಿಂಗ್​ ಸರಾಸರಿ 14.65 ಅಷ್ಟೇ, ಇದೇ ವೈಫಲ್ಯ ಸೌತಾಂಪ್ಟನ್​ನಲ್ಲಿ ನಡೆದ ಫೈನಲ್​ ಫೈಟ್​ನ ಸೋಲಿಗೂ ಕಾರಣವಾಯ್ತು ಅನ್ನೋದನ್ನ ಮರೆಯುವಂತಿಲ್ಲ.

ಇದನ್ನೂ ಓದಿ: ಹಳೇ ಹೈದ್ರಾಬಾದ್​​ ಗಲ್ಲಿಯಲ್ಲಿ ವೇಗಿ ಮೊಹಮ್ಮದ್ ಸಿರಾಜ್​ ಕಟೌಟ್..!

ಆದ್ರೆ, ಇಂಗ್ಲೆಂಡ್​ ವಿರುದ್ಧ ಸದ್ಯ ನಡೆಯುತ್ತಿರುವ ಟೆಸ್ಟ್​ ಸರಣಿ ಹೊಸ ಭರವಸೆ ಮೂಡಿಸಿದೆ. ನಾಟಿಂಗ್​ಹ್ಯಾಮ್​ನಲ್ಲಿ ನಡೆದ ಮೊದಲ ಟೆಸ್ಟ್​ನಲ್ಲಿ 205ರನ್​ಗೆ ಟೀಮ್ ಇಂಡಿಯಾ ಪ್ರಮುಖ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಈ ಸಂಕಷ್ಟದ ಪರಿಸ್ಥಿತಿಯಲ್ಲಿ 73 ರನ್​ಗಳ ಕೊಡುಗೆ ನೀಡಿದ್ದು ಇದೇ ಟೇಲೆಂಡರ್ಸ್.

blank

ಅಷ್ಟೇ ಅಲ್ಲ, ಲಾರ್ಡ್ಸ್​ ಟೆಸ್ಟ್​ನ ಮೊದಲ ಇನ್ನಿಂಗ್ಸ್​ನಲ್ಲಿ 33 ರನ್​ಗಳ ಕಾಣಿಕೆ ನೀಡಿದ್ದ ಬಾಲಗೋಂಚಿ ಬ್ಯಾಟ್ಸ್​ಮನ್​ಗಳು, 2ನೇ ಇನ್ನಿಂಗ್ಸ್​ನ ಮಹತ್ವದ ಘಟ್ಟದಲ್ಲಿ ತಂಡದ ಕೈಹಿಡಿದರು. 209 ರನ್​ಗಳಿಗೆ 8 ವಿಕೆಟ್ ಕಳೆದುಕೊಂಡಿದ್ದ ಟೀಮ್ ಇಂಡಿಯಾ ಸೋಲಿನ ಭೀತಿಯೂ ಎದುರಿಸಿತ್ತು. ಈ ವೇಳೆ 9ನೇ ವಿಕೆಟ್​ಗೆ ಶಮಿ, ಬೂಮ್ರಾ ಅಜೇಯ 89 ರನ್​ಗಳ ಜೊತೆಯಾಟ ಪಂದ್ಯದ ಚಿತ್ರಣವನ್ನೇ ಬದಲಿಸಿತ್ತು.

blank

ಇಂಗ್ಲೆಂಡ್​ನಂಥ ಶ್ರೇಷ್ಠ ಬೌಲಿಂಗ್ ಅಟ್ಯಾಕ್​ಗೆ ವಿರಾಟ್​ ಕೊಹ್ಲಿ, ಪೂಜಾರ, ರಹಾನೆ, ಪಂತ್​ರಂಥ ಪರಾಕ್ರಮಿಗಳೇ ಸುಲಭದ ತುತ್ತಾಗುತ್ತಿದ್ದಾರೆ. ಆದ್ರೆ, ಒತ್ತಡದ ಸನ್ನಿವೇಶದಲ್ಲಿ ಜವಾಬ್ದಾರಿಯುತ ಬ್ಯಾಟಿಂಗ್​ ನಡೆಸ್ತಾ ಇರೋ ಟೇಲೆಂಡರ್​ಗಳು, ಆಂಗ್ಲರ ಮೇಲೆ ಮೇಲುಗೈ ಸಾಧಿಸ್ತಿದ್ದಾರೆ. ಈ ಬದಲಾವಣೆಯಲ್ಲಿ ಬ್ಯಾಟಿಂಗ್​ ಕೋಚ್​​ ವಿಕ್ರಮ್​ ರಾಥೋರ್​ ಪರಿಶ್ರಮವನ್ನ ಅಲ್ಲಗಳೆಯುವಂತಿಲ್ಲ. ನೆಟ್ಸ್​ನಲ್ಲಿ ಬೌಲರ್​ಗಳು ಕನಿಷ್ಠ 15 ನಿಮಿಷ ಕ್ರೀಸ್​ನಲ್ಲಿ ನಿಲ್ಲುವಂತೆ ಸವಾಲ್​ ಎಸೆದಿರೋದೆ ಈ ಬದಲಾವಣೆಗೆ ಕಾರಣವಾಗಿದೆ.

ಇದನ್ನೂ ಓದಿ:ಟೀಂ ಇಂಡಿಯಾ ಹೆಡ್​ಕೋಚ್​​ ರೇಸ್​​ನಲ್ಲಿ ಅಚ್ಚರಿ ಹೆಸರು; ಇವರು ಬ್ಯಾಟಿಂಗ್ ಮಾಂತ್ರಿಕ

Source: newsfirstlive.com Source link