ಇಂದಿನಿಂದ ರಾಜ್ಯಾದ್ಯಂತ ಶಾಲೆ ಆರಂಭ.. ಆದ್ರೆ ಈ ಜಿಲ್ಲೆಗಳಲ್ಲಿ ಮಾತ್ರ ಇಲ್ಲ ಸ್ಕೂಲ್​ ಭಾಗ್ಯ!

ಇಂದಿನಿಂದ ರಾಜ್ಯಾದ್ಯಂತ ಶಾಲೆ ಆರಂಭ.. ಆದ್ರೆ ಈ ಜಿಲ್ಲೆಗಳಲ್ಲಿ ಮಾತ್ರ ಇಲ್ಲ ಸ್ಕೂಲ್​ ಭಾಗ್ಯ!

ಬೆಂಗಳೂರು: ಬರೋಬ್ಬರಿ ಒಂದೂವರೆ ವರ್ಷದಿಂದ ಬಾಗಿಲು ಮುಚ್ಚಿದ ಶಾಲೆಗಳು ಇಂದಿನಿಂದ ಆರಂಭವಾಗಿವೆ. ಇಂದಿನಿಂದ ರಾಜ್ಯಾದ್ಯಂತ ಶಾಲೆ-ಕಾಲೇಜುಗಳು ಆರಂಭವಾಗುತ್ತಿದ್ದು, ಶಾಲೆಗಳಲ್ಲಿ ಮತ್ತೆ ವಿದ್ಯಾರ್ಥಿಗಳ ಕಲರವ ಆರಂಭವಾಗಲಿದೆ. ಮೊದಲ ಹಂತದಲ್ಲಿ 9 ಮತ್ತು 12ನೇ ತರಗತಿಗಳು ಪ್ರಾರಂಭವಾಗಲಿದ್ದು, ಶಾಲೆ-ಕಾಲೇಜುಗಳು ಭೌತಿಕ ತರಗತಿ ಆರಂಭಕ್ಕೆ, ಶಿಕ್ಷಣ ಇಲಾಖೆ ಸಂಪೂರ್ಣ ಸಿದ್ಧತೆ ನಡೆಸಿದೆ.

ಆದರೆ ಕೊರೊನಾ ಹಾವಳಿ ಹೆಚ್ಚಿರುವ ಜಿಲ್ಲೆಗಳ ವಿದ್ಯಾರ್ಥಿಗಳಿಗೆ ಮಾತ್ರ ಇನ್ನು ಶಾಲೆ-ಕಾಲೇಜುಗಳು ದೂರದ ಮಾತಾಗಿಯೇ ಉಳಿದಿದೆ. ರಾಜ್ಯದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಯಲ್ಲಿ ಶಾಲೆ-ಕಾಲೇಜುಗಳು ಓಪನ್​ ಆಗಿಲ್ಲ.

blank

ಹಾಸನದಲ್ಲಿ ಪಾಸಿಟಿವಿಟಿ ರೇಟ್ ಏರುಪೇರು ಆಗುತ್ತಿರುವ ಹಿನ್ನೆಲೆಯಲ್ಲಿ, ಜಿಲ್ಲಾಡಳಿತ ಪಿಯು ಮೇಲ್ಪಟ್ಟ ತರಗತಿಗಳ ಆರಂಭಕ್ಕೆ ಮಾತ್ರ ಅವಕಾಶ ನೀಡಿದ್ದು, ಶಾಲೆಗಳನ್ನು ತೆರೆಯಲು ಗ್ರೀನ್​ಸಿಗ್ನಲ್​ ನೀಡಿಲ್ಲ. ಪ್ರತಿದಿನ ಹಾಸನದಲ್ಲಿ ನೂರರ ಆಸುಪಾಸಿನಲ್ಲಿ ಪಾಸಿಟಿವ್ ಪ್ರಕರಣಗಳು ಪತ್ತೆಯಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸದ್ಯಕ್ಕೆ 9-10 ನೇ ತರಗತಿಗಳನ್ನು ಓಪನ್​ ಮಾಡುವುದಿಲ್ಲ ಎಂದು ಜಿಲ್ಲಾಡಳಿತ ತಿಳಿಸಿದೆ.

blank

ಇದನ್ನೂ ಓದಿ:  ಟಣ್ ಟಣ್ ಟಣ್.. ರಾಜ್ಯಾದ್ಯಂತ ಇಂದಿನಿಂದ ಶಾಲೆ ಆರಂಭ -ಹೇಗಿದೆ ಗೊತ್ತಾ ಮಾರ್ಗಸೂಚಿ?

ಇನ್ನು ಉಡುಪಿಯಲ್ಲಿ ಕೂಡ ಶಾಲೆ ಆರಂಭಕ್ಕೆ ಮೂಹೊರ್ತ ಕೂಡಿ ಬಂದಿಲ್ಲ. ಜಿಲ್ಲೆಯ ಪಾಸಿಟಿವಿಟಿ ರೇಟ್ ಶೇ.2 ಕ್ಕಿಂತ ಹೆಚ್ಚಿದ್ದು, ಸದ್ಯ ಶೇ.2.5% ಪಾಸಿಟಿವಿಟಿ ರೇಟ್ ಇರೋದ್ರಿಂದ ಶಾಲೆ-ಕಾಲೇಜುಗಳನ್ನ ಆರಂಭ ಮಾಡಿಲ್ಲ. ಪಾಸಿಟಿವಿಟಿ ರೇಟ್ ಶೇ.2 ಕ್ಕಿಂತ ಕಡಿಮೆಯಾದರೆ ಶಾಲೆ ಆರಂಭ ಮಾಡುವುದಾಗಿ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ್ದಾರೆ.

ಉಳಿದ ಜಿಲ್ಲೆಗಳಾದ ದಕ್ಷಿಣ ಕನ್ನಡ, ಕೊಡಗು ಚಿಕ್ಕಮಗಳೂರಲ್ಲಿ ಕೂಡ ಇನ್ನು ಶಾಲೆ-ಕಾಲೇಜುಗಳ ಆರಂಭಕ್ಕೆ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಕೊರೊನಾ ವ್ಯಾಪಕವಾಗಿ ಈ ಜಿಲ್ಲೆಗಳಲ್ಲಿ ಹರಡುತ್ತಿರುವುದರಿಂದ ಸರ್ಕಾರದ ಆದೇಶದಂತೆ ಕೊರೊನಾ ನಿಯಂತ್ರಣಕ್ಕೆ ಬಂದು ಶೇ.2 ಕ್ಕಿಂತ ಕಡಿಮೆ ಪಾಸಿಟಿವಿಟಿ ರೇಟ್​ ಬಂದಾಗ, ಶಾಲೆ-ಕಾಲೇಜುಗಳ ಆರಂಭ ಮಾಡುವುದಾಗಿ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link