ಶೂಟಿಂಗ್​​ ವೇಳೆ ಜೂನಿಯರ್​ ಆರ್ಟಿಸ್ಟ್​​ಗೆ ಪೆಟ್ಟು -ಕಾಲು ಮುಟ್ಟಿ ಸಾರಿ ಕೇಳಿದ ನಟ ಶ್ರೀಮುರಳಿ

ಶೂಟಿಂಗ್​​ ವೇಳೆ ಜೂನಿಯರ್​ ಆರ್ಟಿಸ್ಟ್​​ಗೆ ಪೆಟ್ಟು -ಕಾಲು ಮುಟ್ಟಿ ಸಾರಿ ಕೇಳಿದ ನಟ ಶ್ರೀಮುರಳಿ

‘ಮದಗಜ’ ಸ್ಯಾಂಡಲ್​ವುಡ್​ನ ರೋರಿಂಗ್​ ಸ್ಟಾರ್ ಶ್ರೀಮುರಳಿ ನಟನೆಯ ನಿರೀಕ್ಷಿತ ಸಿನಿಮಾ. ಮಹೇಶ್ ಕುಮಾರ್ ಕಲ್ಪನೆಯಲ್ಲಿ ಉಮಾಪತಿ ಶ್ರೀನಿವಾಸ್ ನಿರ್ಮಾಣದಲ್ಲಿ ಅದ್ದೂರಿಯಾಗಿ ಮದಗಜ ಸಿನಿಮಾ ಮೂಡಿ ಬರುತ್ತಿದೆ.

ಕೆಲ ದಿನಗಳ ಹಿಂದೆಯಷ್ಟೇ ಮದಗಜ ಶೂಟಿಂಗ್​ ಸೆಟ್​ನಲ್ಲಿ ಪುಟ್ಟ ಬಾಲಕನ ಜೊತೆ ಶ್ರೀಮುರಳಿ ಫ್ರೆಂಡ್ಸ್​​ಶಿಫ್ ಮಾಡಿ ಬಾಲಕನೊಂದಿಗೆ ಚಾಕ್ಲೇಟ್, ಚಿಪ್ಸ್ ತಿಂದು ಸುದ್ದಿಯಾಗಿದ್ರು. ಇದೀಗ ಮದಗಜ ಶೂಟಿಂಗ್​ ಸೆಟ್​ನಲ್ಲಿ ಫೈಟ್ ದೃಶ್ಯದ ಶೂಟಿಂಗ್​ ವೇಳೆ ಜೂನಿಯರ್​ ಆರ್ಟಿಸ್ಟ್​ ಕಾಲಿಗೆ ಪೆಟ್ಟಾಗಿದ್ದು, ಈ ವೇಳೆ ಆರ್ಟಿಸ್ಟ್​​ ಬಳಿ ತೆರಳಿದ ಶ್ರೀಮುರಳಿ ಕ್ಷಮೆ ಕೇಳಿದ್ದಾರೆ.

blank

ಹೌದು, ಮದಗಜ ಶೂಟಿಂಗ್ ವೇಳೆ ಫೈಟ್​ ಮಾಡುತ್ತಿದ್ದ ಪುಟ್ಟರಾಜು ಅನ್ನೊ ಜೂನಿಯರ್​ ಆರ್ಟಿಸ್ಟ್ ಕಾಲಿಗೆ ಪೆಟ್ಟಾಗಿತ್ತು. ಮುರಳಿ ಅವರ ಬಳಿ ಬಂದು ಕೈ ಮುಗಿದು ಕ್ಷಮೆಯನ್ನು ಕೇಳಿ ಅವರ ಕಾಲನ್ನು ಮುಟ್ಟಿ, ಯೋಗ ಕ್ಷೇಮ ವಿಚಾರಿಸಿದ್ದಾರೆ. ಸದ್ಯ ಜೂನಿಯರ್​ ಆರ್ಟಿಸ್ಟ್​ರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸಲಾಗುತ್ತಿದೆ. ಇನ್ನು ಈ ಹಿಂದೆ ಮದಗಜ ಶೂಟಿಂಗ್​ ಟೈಮ್​​ನಲ್ಲಿ ಶ್ರೀಮುರಳಿ ಕಾಲಿಗೂ ಪೆಟ್ಟಾಗಿ ಶೂಟಿಂಗ್​ ಅರ್ಧಕ್ಕೆ ನಿಂತ್ತಿತು.

blank

Source: newsfirstlive.com Source link