ಆನಂದ್​ ಸಿಂಗ್​ ಮುನಿಸು: ಸೈಲೆಂಟಾಗಿದ್ಕೊಂಡು ಮಾಜಿ ಸಚಿವ ಜಾರಕಿಹೊಳಿ ಹಾದಿ ಹಿಡಿದ್ರಾ ಸಿಂಗ್​?

ಆನಂದ್​ ಸಿಂಗ್​ ಮುನಿಸು: ಸೈಲೆಂಟಾಗಿದ್ಕೊಂಡು ಮಾಜಿ ಸಚಿವ ಜಾರಕಿಹೊಳಿ ಹಾದಿ ಹಿಡಿದ್ರಾ ಸಿಂಗ್​?

ಖಾತೆ ಹಂಚಿಕೆಯಾಗಿ 20 ದಿನಗಳೇ ಕಳೆದ್ರೂ, ಸಚಿವ ಆನಂದ ಸಿಂಗ್ ಮಾತ್ರ ಅಧಿಕೃತವಾಗಿ ಇಲಾಖೆಯ ಚಾರ್ಚ್ ತೆಗೆದುಕೊಳ್ಳದೆ ಹೊಸಪೇಟೆಯಲ್ಲಿ ಬೀಡು ಬಿಟ್ಟು ವೈಲೆಂಟ್​ ಸಚಿವ ಸೈಲೆಂಟ್​ ಆಗಿದ್ದಾರೆ. ಆರಂಭದಲ್ಲಿ ಖಾತೆ ಕ್ಯಾತೆ ತೆಗೆದು ಗದ್ದಲ ಎಬ್ಬಿಸಿದ್ದ ಸಚಿವರು ಸದ್ಯ ಸೈಲೆಂಟ್​ ಆಗಿದ್ದು, ಶಾಸಕ ರಮೇಶ್ ಜಾರಕಿಹೊಳಿ ಹಿಡಿದ ಹಾದಿ ತುಳಿತ್ತಿದ್ದಾರಾ? ಎಂಬ ಅನುಮಾನಗಳು ಶುರುವಾಗಿವೆ.

ಇದನ್ನೂ ಓದಿ: ದೆಹಲಿಗೆ ಹೋದ್ರೂ ಸಿಗದ ‘ಆನಂದ’; ಇನ್ನೂ 3 ದಿನ ಆನಂದ್ ಸಿಂಗ್ ಮೌನ..!

ಸರ್ಕಾರಿ ಕಾರು ಬಳಸದೆ ತಮ್ಮ ಖಾಸಗಿ ಕಾರಿನಲ್ಲಿ ಓಡಾಟ ಮಾಡ್ತಿರೋ ಸಚಿವ ಆನಂದ ಸಿಂಗ್, ಮುಂದಿನ ರಾಜಕೀಯ ನಡೆ ಕುರಿತು ಯಾವುದೇ ಸುಳಿವು ಬಿಟ್ಟುಕೊಡದೆ, ಹೊಸಪೇಟೆಯ ನಿವಾಸದಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಇನ್ನು ಸಚಿವರ ಈ ನಡೆ ಸಿಎಂ ಬಸವರಾಜ ಬೊಮ್ಮಾಯಿಯವರಿಗೆ ಹೊಸ ಟೆನ್ಶನ್​ ಶುರು ಮಾಡಿದ್ದು, ಖಾತೆ ಹಂಚಿಕೆಯಾದ್ರು ಅಧಿಕೃತವಾಗಿ ಕೆಲಸ ಶುರುಮಾಡದ ಸಚಿವರ ಮೇಲೆ ಸಿಎಂ ಬೊಮ್ಮಾಯಿ ಗರಂ ಆಗಿದ್ದಾರೆ ಎನ್ನಲಾಗಿತ್ತು.

blank

‘ಅಭಿ ಪಿಕ್ಚರ್ ಬಾಕಿ ಹೈ, ನಾನು ಹಠವಾದಿ ಅಂದುಕೊಂಡನ್ನ ಸಾಧಿಸದೆ ಬಿಡುವುದಿಲ್ಲ’ ಅಂತ ಮಾಧ್ಯಮಗಳ ಮುಂದೆ ಘರ್ಜಿಸಿದ್ದ ಸಚಿವ ಆನಂದ್​ ಸಿಂಗ್, ಈಗ ಮಾಧ್ಯಮಗಳಿಂದಲೂ ಅಂತರ ಕಾಯ್ದುಕೊಂಡು ತೆರೆಮರೆಯಲ್ಲಿ ರಾಜಕೀಯ ಚದುರಂಗದಾಟ ಆರಂಭಿಸಿದ್ರಾ? ಎಂಬ ಗುಮಾನಿ ಎದ್ದಿದೆ.

ಇದನ್ನೂ ಒದಿ:  ಕನ್ಯೆ ತೋರಿಸುವುದು ಸರ್ಕಾರದ ಕೆಲಸ.. ಮದುವೆ ಮಾಡಿಕೊಳ್ಳೋದು ಅವರಿಗೆ ಬಿಟ್ಟಿದ್ದು- ನಿರಾಣಿ

ಗೋಪಾಲ ಸ್ವಾಮಿ ದೇಗುಲದಲ್ಲಿ ಪೂಜೆ ಬಳಿಕ ರಾಜಕೀಯ ವೈರಾಗ್ಯದ ಮಾತು ಮಾತನಾಡಿದ್ದ ಸಿಂಗ್​, ಏಕಾಏಕಿ ತಮ್ಮ ಕಛೇರಿ ಬೋರ್ಡ್ ತೆಗೆದು ಹಾಕಿ ಪರೋಕ್ಷವಾಗಿ ಬಿಜೆಪಿ ಮೇಲೆ ಮುನಿಸಿಕೊಂಡಿದ್ರು. ಜಿಂದಾಲ್‌ಗೆ ಸಿಎಂ ಬೊಮ್ಮಾಯಿ ಬಂದ್ರೂ ಭೇಟಿ ಆಗದೆ ದೂರ ಉಳಿದಿದ್ದರು. ಸದ್ಯ ಹೊಸಪೇಟೆಯಲ್ಲಿ ಓಡಾಟ ಮಾಡ್ಕೊಂಡು ಆರಾಮಾಗಿರೋ ಪ್ರವಾಸೋದ್ಯಮ ಸಚಿವ ಆನಂದ್​ ಸಿಂಗ್​ ಇನ್ನು ಯಾವಾಗ ವೈಲೆಂಟ್​ ಆಗ್ತಾರೋ ಕಾದು ನೋಡಬೇಕು.

Source: newsfirstlive.com Source link