ಶಾಲೆಗಳಲ್ಲಿ ಹಬ್ಬದ ವಾತಾರಣ ನಿರ್ಮಾಣವಾಗಿದೆ -ಸಿಎಂ ಬೊಮ್ಮಾಯಿ ಹರ್ಷ

ಶಾಲೆಗಳಲ್ಲಿ ಹಬ್ಬದ ವಾತಾರಣ ನಿರ್ಮಾಣವಾಗಿದೆ -ಸಿಎಂ ಬೊಮ್ಮಾಯಿ ಹರ್ಷ

ಬೆಂಗಳೂರು: ಬರೋಬ್ಬರಿ ಒಂದೂವರೆ ವರ್ಷದ ಬಳಿಕ ಶಾಲೆಗಳು ಆರಂಭವಾಗಿದ್ದು, ಈ ಹಿನ್ನೆಲೆಯಲ್ಲಿ ಸ್ವತಃ ಸಿಎಂ ಬಸವರಾಜ ಬೊಮ್ಮಾಯಿ ಅವರು ನಗರದ ಮಲ್ಲೇಶ್ವರಂ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು.

ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ, ಇವತ್ತು ಕೊರೊನಾದಿಂದ ಮಕ್ಕಳಿಗೆ ಸ್ವಾತಂತ್ರ್ಯ ಸಿಕ್ಕಿದೆ. ಸೋಂಕು ಇಳಿಕೆಯಾಗುತ್ತಿದಂತೆ ಶಾಲೆಗಳ ಸಂಖ್ಯೆಯನ್ನು ಹೆಚ್ಚು ಮಾಡ್ತೇವೆ. ಕೊರೊನಾ ಕಡಿಮೆಯಾದ ಕಾರಣದಿಂದ ಶಾಲೆ ಆರಂಭ ಮಾಡಲಿದೆ. ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ನೋಡಿ ಬಹಳ ಸಂತೋಷವಾಯಿತು. ಭೇಟಿ ವೇಳೆ ವಿದ್ಯಾರ್ಥಿಗಳು ಕೂಡ ಸಂತೋಷ ವ್ಯಕ್ತಪಡಿಸಿದ್ದಾರೆ.

blankರಾಜ್ಯದಲ್ಲಿ 9ರಿಂದ 12ನೇ ತರಗತಿ ಆರಂಭವಾಗಿವೆ. ಒಂದೂವರೆ ವರ್ಷದ ನಂತರ ಶಾಲೆಗಳು ಆರಂಭವಾಗಿದೆ. ಶಾಲೆಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಮಕ್ಕಳಿಗೆ ಯಾವುದೇ ತೊಂದರೆಯಾಗದಂತೆ ಶಾಲೆ ತೆರೆದು ಉತ್ತಮ ಶಿಕ್ಷಣ ಕೊಡಲು ಸರ್ಕಾರ ಪ್ರಯತ್ನ ಮಾಡ್ತಿದೆ. ತಜ್ಞರ ಅಭಿಪ್ರಾಯ ಪಡೆದು ಶಾಲೆ ಆರಂಭಿಸಲಾಗಿದೆ. ಶಾಲೆಯಲ್ಲಿನ ಮಾರ್ಗಸೂಚಿ ಪರಿಶೀಲಿಸಲಾಗಿದೆ.

ಆನ್​ಲೈನ್ ತರಗತಿಯಲ್ಲಿ ಹಲವು ಸಮಸ್ಯೆಗಳಿದ್ದವು. ನೆಟ್​ವರ್ಕ್, ಇಂಟರ್​​ ನೆಟ್​ ಸಮಸ್ಯೆ ಇರುತ್ತಿತ್ತು. ಈಗ ಶಾಲೆಗಳಲ್ಲಿ ಮುಕ್ತವಾದ ವಾತಾವರಣ ಇರಲಿದೆ. ಶಾಲೆಯಲ್ಲಿ ಶಿಕ್ಷಕರ ಜತೆ ಮಕ್ಕಳ ಸಂವಹನ ಸಾಧ್ಯ. ಮಾರ್ಗಸೂಚಿಗಳನ್ನು ಪಾಲಿಸಲು ಸೂಚಿಸಿದ್ದೇನೆ. ಸಮಯ ಕೊಟ್ಟು ಶಾಲೆ-ಕಾಲೇಜು ಓಪನ್ ಮಾಡಿದ್ದೇವೆ. ಗಡಿ ಜಿಲ್ಲೆಗಳಲ್ಲಿ ಶೇ.2%ಕ್ಕಿಂತ ಸೋಂಕು ಇಳಿಕೆಯಾದರೆ ಶಾಲೆ ಆರಂಭ ಮಾಡುತ್ತೇವೆ ಎಂದು ವಿವರಿಸಿದರು.

Source: newsfirstlive.com Source link