2018ರ ಬಳಿಕ ಬದಲಾಗಿದೆ ಬೌಲಿಂಗ್​ ಗುಣಮಟ್ಟ.. ವಿರಾಟ್​ ಪಡೆಯ ಬೌಲಿಂಗ್​ನ​ ಸಕ್ಸಸ್ ಸಿಕ್ರೇಟ್​ ಏನು?

2018ರ ಬಳಿಕ ಬದಲಾಗಿದೆ ಬೌಲಿಂಗ್​ ಗುಣಮಟ್ಟ.. ವಿರಾಟ್​ ಪಡೆಯ ಬೌಲಿಂಗ್​ನ​ ಸಕ್ಸಸ್ ಸಿಕ್ರೇಟ್​ ಏನು?

ಟೀಮ್ ಇಂಡಿಯಾ ಬದಲಾಗಿದೆ. ಆಟದ ಶೈಲಿಯಿಂದ ಮಾತ್ರವಲ್ಲ, ಪ್ರದರ್ಶನದಲ್ಲೂ ಬದಲಾವಣೆಯಾಗಿದೆ. ಸೇನಾ ರಾಷ್ಟ್ರಗಳಲ್ಲಿ ಟೀಮ್ ಇಂಡಿಯಾ ಗೆಲ್ಲಬೇಕಾದರೆ, ಬ್ಯಾಟಿಂಗ್​ನಿಂದಲೇ ಎಂಬ ಮಾತಿತ್ತು. ಆ ಮಾತನ್ನ ಬೌಲಿಂಗ್​ ಕಂಪ್ಲೀಟ್​​ ಉಲ್ಟಾ ಮಾಡಿದೆ. ಹಿಂದೆ ಯಾವ ವಿಭಾಗ ಟೀಕಗೆ ಗುರಿಯಾಗಿತ್ತೋ, ಅದೇ ಈಗ ಟೀಮ್ ಇಂಡಿಯಾದ ಸಕ್ಸಸ್​ ಸೂತ್ರವಾಗಿ ಬದಲಾಗಿದೆ.

blank

ಕಳೆದ ಕೆಲ ವರ್ಷಗಳ ಹಿಂದೆ ಕ್ರಿಕೆಟ್​​ ಲೋಕದಲ್ಲಿ ಆಸ್ಟ್ರೇಲಿಯಾನ್ನರದ್ದೇ ಪಾರುಪತ್ಯ. ಈ ಅವಧಿಯಲ್ಲಿ ಕಾಂಗರೂಗಳನ್ನ ಬಡಿದಟ್ಟುವುದೇ ಅಸಾಧ್ಯದ ಮಾತಾಗಿತ್ತು. ಮೂರು ವಿಭಾಗಗಳಲ್ಲಿ ಬಲಿಷ್ಠವಾಗಿದ್ದ ಆಸ್ಟ್ರೇಲಿಯಾಗೆ ಸರಿಸಮನಾದ ತಂಡವೇ ಇರಲಿಲ್ಲ. ಇನ್​ಫ್ಯಾಕ್ಟ್​​ ಶ್ರೇಷ್ಠ ವೇಗಿಗಳನ್ನ ಹೊಂದಿದ್ದ ಪಾಕ್, ಬೌಲಿಂಗ್​ನಲ್ಲಿ ಆಸಿಸ್​​ಗೆ ಸೆಡ್ಡು ಹೊಡೆಯಬಹುದಾಗಿತ್ತಾದ್ರೂ, ಬ್ಯಾಟಿಂಗ್​​​ನಲ್ಲಿ ಪೈಪೋಟಿ ಅಸಾಧ್ಯದ ಮಾತಾಗಿತ್ತು..

blank

ಇದನ್ನೂ ಓದಿ: 10 ಶಾಲೆಗಳಿಗೆ ಭಾರತೀಯ ಹಾಕಿ ಟೀಂ ಆಟಗಾರರ ಹೆಸರಿಟ್ಟ ಪಂಜಾಬ್​ ಸರ್ಕಾರ

ಬ್ಯಾಟಿಂಗ್ ಮಾಂತ್ರಿಕರ ಪಡೆಯನ್ನೇ ಹೊಂದಿದ್ದ ಭಾರತಕ್ಕೆ, ಬೌಲಿಂಗ್ ಸಮಸ್ಯೆ ಹಿನ್ನಡೆಯಾಗಿತ್ತು. ತವರಿನಲ್ಲೇನೋ ಸ್ಪಿನ್​ ಪ್ರಾಬಲ್ಯದಿಂದ ಗೆಲ್ಲುತ್ತಿದ್ದ ಟೀಮ್ ಇಂಡಿಯಾ, ಸೇನಾ ರಾಷ್ಟ್ರಗಳಲ್ಲಿ ಹಿನ್ನಡೆ ಅನುಭವಿಸುತ್ತಿತ್ತು. ಇದು ಭಾರೀ ಟೀಕೆಯ ಜೊತೆಗೆ ವೇಗಿಗಳ ಶಕ್ತಿ ಸಾಮರ್ಥ್ಯದ ಬಗ್ಗೆ ಪ್ರಶ್ನೆಯನ್ನ ಹುಟ್ಟಿಸಿತ್ತು. ಅದ್ರೀಗ ಅದೇ ಟೀಮ್​ ಇಂಡಿಯಾದ ಪ್ಲಸ್​ ಪಾಯಿಂಟ್​​ ಆಗಿ ಮಾರ್ಪಟ್ಟಿದೆ.

ಬದಲಾಗಿದೆ ಟೀಮ್ ಇಂಡಿಯಾ ವೇಗಿಗಳ ಗುಣಮಟ್ಟ!

ಹೌದು , ಹಿಂದೆ ಸೇನಾರಾಷ್ಟ್ರಗಳಲ್ಲಿ ಟೀಮ್ ಇಂಡಿಯಾ ವೇಗಿಗಳು ಪರದಾಟವನ್ನೇ ನಡೆಸ್ತಿದ್ರು. ಒಂದೊಂದು ವಿಕೆಟ್ ಉರುಳಿಸೋದು ಕೂಡ ಹರಸಾಹಸದ ಕೆಲಸವಾಗಿತ್ತು. ಆದ್ರೆ, 2018ರ ಬಳಿಕ ಟೀಮ್ ಇಂಡಿಯಾ ವೇಗಿಗಳ ಆಟದ ಶೈಲಿಯೇ ಸಂಪೂರ್ಣ ಬದಲಾಗಿದೆ. 2018ರಿಂದ ಟೀಮ್ ಇಂಡಿಯಾ ವಿದೇಶದಲ್ಲಿ ಆಡಿರುವ 22 ಟೆಸ್ಟ್​ ಪಂದ್ಯಗಳಲ್ಲಿ ಬಹುಪಾಲು ವಿಕೆಟ್​​ಗಳು ವೇಗಿಗಳದ್ದೇ ಆಗಿದೆ. ಇದು ಟೀಮ್​ ಇಂಡಿಯಾ ಸಕ್ಸಸ್​​​ಗೂ ಕಾರಣವಾಗಿದೆ.

2018ರ ಬಳಿಕ ಭಾರತ ವಿದೇಶದಲ್ಲಿ ಆಡಿರುವ 22 ಪಂದ್ಯಗಳ ಪೈಕಿ 9 ಪಂದ್ಯದಲ್ಲಿ ಗೆದ್ದು ಬೀಗಿದ್ರೆ, 10 ಪಂದ್ಯ ಕೈ ಚೆಲ್ಲಿದೆ. ಇನ್ನುಳಿದ 3 ಪಂದ್ಯಗಳನ್ನ ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ.

blank

ಇಂಗ್ಲೆಂಡ್ ಸರಣಿಯಲ್ಲೂ ವೇಗಿಗಳದ್ದೇ ಅಬ್ಬರ!

ಸದ್ಯ ನಡೆಯುತ್ತಿರುವ ಇಂಗ್ಲೆಂಡ್ ವಿರುದ್ದದ ಟೆಸ್ಟ್​ ಸರಣಿಯೇ ಟೀಮ್ ಇಂಡಿಯಾ ವೇಗಿಗಳ ದರ್ಬಾರ್​ಗೆ ಪ್ರತ್ಯಕ್ಷ ಸಾಕ್ಷಿಯಾಗಿದೆ. ನಾಟಿಂಗ್​ಹ್ಯಾಮ್ ಮತ್ತು ಲಾರ್ಡ್ಸ್​ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಬ್ಯಾಟಿಂಗ್​ನಲ್ಲಿ ನೆಲ ಕಚ್ಚಿದ್ರೂ, ಭಾರತೀಯ ವೇಗಿಗಳು ಸ್ಪಿನ್ನರ್ ನೆರವಿಲ್ಲದೆ 20 ವಿಕೆಟ್ ಸುಲಭವಾಗಿ ಉರುಳಿಸಿದ್ದಾರೆ. ಅದ್ರಲ್ಲೂ ಸ್ವಿಂಗ್​ ಜೊತೆಗೆ ವೇರಿಯೇಷನ್ಸ್​, ಶಾರ್ಟ್ ಬಾಲ್​ಗಳನ್ನ ಹಾಕಿದ್ದು ಇಂಗ್ಲೆಂಡ್ ಕಂಡೀಷನ್ಸ್​ನಲ್ಲಿ ಟೀಮ್ ಇಂಡಿಯಾ ವೇಗಿಗಳ ಪರ್ಫಾಮೆನ್ಸ್​ಗೆ ಕನ್ನಡಿಯಾಗಿದೆ.

blank

ಇದು ಭಾರತೀಯ ವೇಗಿಗಳ ಬಗೆಗಿನ ಅಪನಂಬಿಕೆ ತೊಳೆದುಹಾಕಿದ್ದಲ್ಲದೇ, ಬ್ಯಾಟ್ಸ್​ಮನ್​ಗಳ ಮೇಲೆ ಡಿಪೆಂಡ್ ಆಗಿಲ್ಲ ಎಂಬ ಸಂದೇಶವನ್ನೂ ರವಾನಿಸಿದೆ. ಇದನ್ನ, ಟೀಮ್ ಇಂಡಿಯಾದ ಕ್ರಿಕೆಟ್​​​ ಇತಿಹಾಸದಲ್ಲೇ ಸಿಕ್ಕ ಬೆಸ್ಟ್​​ ಬೌಲಿಂಗ್​ ಕಾಂಬಿನೇಷನ್​ ಅಂದ್ರೂ ತಪ್ಪಾಗಲ್ಲ.

Source: newsfirstlive.com Source link