ಶಾಲೆ ಇಲ್ಲದ ಜೀವನ ಹೇಗಿತ್ತು ಮಕ್ಕಳೇ? -ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಪ್ರಶ್ನೆ ಕೇಳಿದ ಸಿಎಂ ಬೊಮ್ಮಾಯಿ

ಶಾಲೆ ಇಲ್ಲದ ಜೀವನ ಹೇಗಿತ್ತು ಮಕ್ಕಳೇ? -ವಿದ್ಯಾರ್ಥಿಗಳಿಗೆ ಪ್ರೀತಿಯಿಂದ ಪ್ರಶ್ನೆ ಕೇಳಿದ ಸಿಎಂ ಬೊಮ್ಮಾಯಿ

ಬೆಂಗಳೂರು: ಮಾರಕ ಕೊರೋನಾ ಮೂರನೇ ಅಲೆ ಆತಂಕದ ನಡುವೆಯೇ ಇಂದಿನಿಂದ 9-12ನೇ ತರಗತಿವರೆಗೆ ಶಾಲಾ-ಕಾಲೇಜುಗಳು ಆರಂಭಗೊಂಡಿವೆ. ಹಾಗಾಗಿ ಖುದ್ದು ಸಿಎಂ ಬಸವರಾಜ್​​ ಬೊಮ್ಮಾಯಿ ಅವರೇ ಶಾಲಾ ಕಾಲೇಜಿಗೆ ಭೇಟಿ ನೀಡಿ ಕೊರೋನಾ ತಡೆಗೆ ಏನೆಲ್ಲಾ ಮುಂಜಾಗೃತಾ ಕ್ರಮಗಳನ್ನು ಕೈಗೊಂಡಿದ್ದಾರೆ ಎಂದು ಪರಿಶೀಲಿಸಿದರು.

ನಗರದ ಮಲ್ಲೇಶ್ವರಂನ 18ನೇ ಕ್ರಾಸಿನಲ್ಲಿರುವ ನಿರ್ಮಲಾ ರಾಣಿ ಶಾಲೆಗೆ ಭೇಟಿ ನೀಡಿದ ಸಿಎಂ ಬೊಮ್ಮಾಯಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಹೇಗಿತ್ತು ಶಾಲೆ ಇಲ್ಲದ ಜೀವನ? ಎಂದು ವಿದ್ಯಾರ್ಥಿಗಳಿಗೆ ಪ್ರಶ್ನಿಸಿದರು.

ಇಷ್ಟು ದಿನ ಶಾಲೆ ಇರಲಿಲ್ಲ. ಹೇಗಿತ್ತು ಶಾಲೆಯ ಜೀವನ ಇಲ್ಲದೇ ಇದ್ದದ್ದು? ಈಗ ಆತಂಕವಿದೆಯೇ? ಪರೀಕ್ಷೆ ಇರಲಿಲ್ಲ, ಈಗ ಭಯ ಇದೆಯೇ? ಸರ್ಕಾರ ಧೈರ್ಯ ಮಾಡಿ, ಶಾಲೆಗಳನ್ನು ಆರಂಭ ಮಾಡಿದೆ. ಈಗ ಹುಷಾರಾಗಿ ಕೊರೋನಾ ನಿಯಮ ಪಾಲಿಸಿ. ಪಠ್ಯ ಅಭ್ಯಾಸ ಮಾಡಿ ಸಲಹೆ ನೀಡಿದರು.

ಇದನ್ನೂ ಓದಿ: ಶಾಲೆಗಳಲ್ಲಿ ಹಬ್ಬದ ವಾತಾರಣ ನಿರ್ಮಾಣವಾಗಿದೆ -ಸಿಎಂ ಬೊಮ್ಮಾಯಿ ಹರ್ಷ

Source: newsfirstlive.com Source link