ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಿಸಿದ ಸನ್ನಿ ಲಿಯೋನ್​

ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಿಸಿದ ಸನ್ನಿ ಲಿಯೋನ್​

ಬಾಲಿವುಡ್​ ಬೆಡಗಿ, ಪಡ್ಡೆ ಹುಡುಗರ ಫೆವ್​ರೇಟ್​ ಚೆಲುವೆ ಸನ್ನಿ ಲಿಯೋನ್ ​ತಮ್ಮ ಕುಟುಂಬದ ಜೊತೆ ಸಂಭ್ರಮದಿಂದ ರಾಖಿ ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಭಾರತದಲ್ಲಿ ಆಚರಿಸುವ ಪ್ರತಿಯೊಂದು ಹಬ್ಬವನ್ನು ತಪ್ಪದೇ ಸೆಲೆಬ್ರೆಟ್​ ಮಾಡೋ ಸನ್ನಿ ರಾಖಿ ಹಬ್ಬವನ್ನು ಕೂಡ ಆಚರಿಸಿದ್ದಾರೆ.

blank

ಹೌದು, ಸನ್ನಿ ಲಿಯೋನ್​ ರಾಖಿ ಹಬ್ಬವನ್ನು 2019 ರಿಂದಲೂ ತಮ್ಮ ಕುಟುಂಬದ ಜೊತೆ ಆಚರಿಸಿಕೊಂಡು ಬಂದಿದ್ದಾರೆ. ಸನ್ನಿ ಲಿಯೋನ್​ ದತ್ತು ಪುತ್ರಿ ನಿಶಾ, ಅವಳಿ-ಜವಳಿ ತಮ್ಮಂದಿರಾದ ಆಶರ್​ ಮತ್ತು ನೋಹ್​ಗೆ ರಾಖಿಯನ್ನು ಕಟ್ಟಿದ್ದಾಳೆ. ಇನ್ನು ಸನ್ನಿ ಲಿಯೋನ್ ತನ್ನ ಡಿಸೈನರ್​, ಹೇರ್​ ಸ್ಟೈಲೀಸ್ಟ್, ಮೇಕ್​ ಆರ್ಟಿಸ್ಟ್​ಗೆ ರಾಖಿಯನ್ನು ಕಟ್ಟಿದ್ದಾರೆ.

blank

ಸನ್ನಿಯ ಲೇಡಿ ಹೇರ್​ ಸ್ಟೈಲೀಸ್ಟ್ ಸನ್ನಿ ಪತಿ ಡೇನಿಯಲ್ ವೆಬರ್​ಗೆ ರಾಖಿಯನ್ನು ಕಟ್ಟಡಿದ್ದಾರೆ. ಇನ್ನು ಈ ಸಂಭ್ರಮದ ರಾಖಿ ಹಬ್ಬ ಆಚರಣೆಯ ಫೋಟೋಗಳನ್ನು ಸನ್ನಿ ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ.

blank

Source: newsfirstlive.com Source link