ರೆಡ್ಡಿ ಆಗಮನದ ಬೆನ್ನಲ್ಲೇ ಬಳ್ಳಾರಿ ಉಸ್ತುವಾರಿಗಾಗಿ ಪೈಪೋಟಿ; ವೈಲೆಂಟ್​ ಆದ ಸೋಮಶೇಖರ್​ ರೆಡ್ಡಿ ಹೇಳಿದ್ದೇನು?

ರೆಡ್ಡಿ ಆಗಮನದ ಬೆನ್ನಲ್ಲೇ ಬಳ್ಳಾರಿ ಉಸ್ತುವಾರಿಗಾಗಿ ಪೈಪೋಟಿ; ವೈಲೆಂಟ್​ ಆದ ಸೋಮಶೇಖರ್​ ರೆಡ್ಡಿ ಹೇಳಿದ್ದೇನು?

ಬಳ್ಳಾರಿ: ಮಾಜಿ ಸಚಿವ ಜನಾರ್ದನ ರೆಡ್ಡಿ ಬಳ್ಳಾರಿಗೆ ಕಾಲಿಡುತ್ತಿದಂತೆ ಜಿಲ್ಲೆಯಾದ್ಯಂತ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ..
ಗಣಿಧಣಿ ಬರೋಬ್ಬರಿ 10 ವರ್ಷಗಳ ನಂತರ ಜಿಲ್ಲೆಗೆ ಕಾಲಿಡುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಮತ್ತೆ ಮುನ್ನೆಲೆಗೆ ಬಂದಿದ್ದು,  ಜನಾರ್ದನ ರೆಡ್ಡಿ ಪಾರುಪತ್ಯ ಮತ್ತೆ ಜಿಲ್ಲೆಯಲ್ಲಿ ಆರಂಭವಾಗುತ್ತದೆಯೇ ಎಂಬ ಗುಮಾನಿ ಎದ್ದಿದೆ..ಇದಕ್ಕೆ ಪೂರಕವಾಗಿ ಗಾಲಿ ಜನಾರ್ದನ ರೆಡ್ಡಿ ಬಂದ ದಿನವೇ ಆಪ್ತ ಪಾಲಣ್ಣಗೆ ಬುಡಾ ಅಧ್ಯಕ್ಷಗಿರಿ ಪಟ್ಟ ನೀಡಲಾಯ್ತು..

ಇನ್ನು ಜಿಲ್ಲೆಯ ರಾಜಕೀಯ ಬ್ಯಾನರ್​ಗಳಲ್ಲಿ ಗಣಿಧಣಿಯ ಭಾವಚಿತ್ರ ರಾರಾಜಿಸುತ್ತಿದ್ದು, ಗಣಿ ನಾಡಿನ ನಾಯಕರಲ್ಲಿ ಜಿಲ್ಲಾ ಉಸ್ತುವಾರಿಗಾಗಿ ಕದನ​ ಶುರುವಾಗಿದೆ ಎನ್ನಲಾಗ್ತಿದೆ..ಸದ್ಯ ಶಾಸಕ ಸೋಮಶೇಖರ್ ರೆಡ್ಡಿ ಜಿಲ್ಲಾ ಉಸ್ತುವಾರಿಗಾಗಿ ಸಿದ್ಧತೆ ನಡೆಸಿರುವ ಕುರಿತು ತಂತ್ರ ರೂಪಿಸುತ್ತಿದ್ದಾರೆ ಎನ್ನಲಾಗಿದ್ದು, ಜೊತೆಗೆ ತಮಗಾಗಲಿ ಅಥವಾ ಸಚಿವ ರಾಮುಲುಗೆ ಬಳ್ಳಾರಿ ಉಸ್ತುವಾರಿ ನೀಡ್ಬೇಕು ಅಂತ ಪಟ್ಟು ಹಿಡೀತಾರಾ ಎಂಬ ಅನುಮಾನಗಳು ಆರಂಭವಾಗಿವೆ..

ಇದನ್ನೂ ಓದಿ: ಬೂದಿ ಮುಚ್ಚಿದ ಕೆಂಡದಂತಿದೆ ಖಾತೆ ಕಿಚ್ಚು -ಬೊಮ್ಮಾಯಿಗೆ ಮುಗಿಯದ ಸಂಪುಟ ಸಂಕಷ್ಟ

ಈ ಕುರಿತು ವೈಲೆಂಟ್ ಆದ ಶಾಸಕ ಸೋಮಶೇಖರ್ ರೆಡ್ಡಿ, ಜಿಲ್ಲೆಯನ್ನ ವಿಭಜಿಸಿದವ್ರಿಗೆ ಉಸ್ತುವಾರಿ ನೀಡಿರೋದು ನಮ್ಮ ದುರ್ದೈವ ಎಂದಿದ್ದು, ಇನ್ನೇರಡು ದಿನದಲ್ಲಿ ರಾಮುಲುಗೆ ಉಸ್ತುವಾರಿ ನೀಡುವಂತೆ ಸಿಎಂ ಭೇಟಿ ಮಾಡುವುದಾಗಿ ಹೇಳಿದ್ದಾರೆ. ರೆಡ್ಡಿ ಆಗಮನ ಬಳಿಕ ಆನಂದ ಸಿಂಗ್ ವಿರುದ್ಧ ಹೆಸರು ಹೇಳದೆ ಶಾಸಕ ಸೋಮಶೇಖರ್ ರೆಡ್ಡಿ ವಾಗ್ದಾಳಿ ನಡೆಸಿದ್ದು, ಜನಾರ್ದನ ರೆಡ್ಡಿ ಆಗಮನದಿಂದ ಸೋಮಶೇಖರ್​ ರೆಡ್ಡಿಗೆ ಆನೆ ಬಲ ಬಂದಂತಾಗಿದೆ ಎನ್ನಲಾಗಿದೆ..

 

Source: newsfirstlive.com Source link