‘ಇಲ್ಲಿವರೆಗೆ ತಿಂದಿರೋದೇ ಸಾಕ್ರಪ್ಪ’ -ಸಚಿವೆ ಜೊಲ್ಲೆ ಬಗ್ಗೆ ಹೆಚ್​​ಡಿಕೆ ರಿಯಾಕ್ಷನ್​

‘ಇಲ್ಲಿವರೆಗೆ ತಿಂದಿರೋದೇ ಸಾಕ್ರಪ್ಪ’ -ಸಚಿವೆ ಜೊಲ್ಲೆ ಬಗ್ಗೆ ಹೆಚ್​​ಡಿಕೆ ರಿಯಾಕ್ಷನ್​

ಹುಬ್ಬಳ್ಳಿ: ಭ್ರಷ್ಟಾಚಾರ ಆರೋಪ ಹೊಂದಿರುವ ಸಚಿವೆ ಶಶಿಕಲಾ ಜೊಲ್ಲೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಇಲ್ಲಿವರೆಗೆ ತಿಂದಿರೋದೇ ಸಾಕ್ರಪ್ಪ, ಇನ್ನು ಮುಂದೇ ಆದರೂ ಕೆಲಸ ಮಾಡಿ ಎಂದು ಹೇಳಿದ್ದಾರೆ.

ನ್ಯೂಸ್​​ಫಸ್ಟ್​​ನೊಂದಿಗೆ ಮಾತನಾಡಿ ಕುಮಾರಸ್ವಾಮಿ ಅವರು, ನನಗೆ ಬಿಜೆಪಿ ಸರ್ಕಾರದಲ್ಲಿ ಜೊಲ್ಲೆ ಅವರೋ, ಬೇರೆ ಯಾರೋ ಆದ್ರು ಇನ್ನಾದರೂ ಕೆಲಸ ಮಾಡಬೇಕು. ನಿನ್ನೆಯಷ್ಟೇ ಸರ್ಕಾರದ ಸಚಿವರೇ ಆಗಿರುವ ಸೋಮಣ್ಣ ಅವರು ಒಂದು ಮಾತು ಹೇಳಿದ್ದಾರೆ.. ಇಲ್ಲಿವರೆಗೂ ತಿಂದಿರೋದೇ ಸಾಕ್ರಪ್ಪ, ಇನ್ನು ಮುಂದೇ ಆದ್ರೂ ಕೆಲಸ ಮಾಡಿ ಅಂತಾ ಹೇಳಿದ್ದಾರೆ.

ಸರ್ಕಾರ ಸಚಿವರೇ ಇಂತಹ ಹೇಳಿಕೆ ನೀಡಿದ್ದಾರೆ. ಅವ್ರ ಬಾಯಿಯಲ್ಲೇ ಇಂತಹ ಹೇಳಿಕೆ ಬಂದಿದೆ. ಸಚಿವರೇ ಇದರ ಬಗ್ಗೆ ಹೇಳಿದ ಮೇಲೆ ನಾನು ಏಕೆ ಚರ್ಚೆ ಮಾಡಲಿ.. ಜೊಲ್ಲೆ ಚರ್ಚೆ ಯಾಕೆ..? ಎಲ್ಲರಿಗು ಸತ್ಯ ಗೊತ್ತಿದೆ ಎಂದರು.

Source: newsfirstlive.com Source link