ಸಾರ್ವಜನಿಕರಿಂದ ಪಾರಾಗಲು ಕದ್ದ ಚಿನ್ನದ ಸರವನ್ನೇ ಗುಳುಂ ಮಾಡಿದ ಕಳ್ಳ.. ಮುಂದೇನಾಯ್ತು?

ಸಾರ್ವಜನಿಕರಿಂದ ಪಾರಾಗಲು ಕದ್ದ ಚಿನ್ನದ ಸರವನ್ನೇ ಗುಳುಂ ಮಾಡಿದ ಕಳ್ಳ.. ಮುಂದೇನಾಯ್ತು?

ಬೆಂಗಳೂರು: ಚಾಲಾಕಿ ಕಳ್ಳನೊಬ್ಬ ಸಾರ್ವಜನಿಕರಿಂದ ಪಾರಾಗಲು ಕದ್ದ ಚಿನ್ನದ ಸರವನ್ನೇ ನುಂಗಿದ ವಿಚಿತ್ರ ಘಟನೆ ನಗರದಲ್ಲಿ ತಡವಾಗಿ ಬೆಳಕಿಗೆ ಬಂದಿದೆ.

ಆರೋಪಿ ಸಂಜಯ್ ಕದ್ದ ಸರವನ್ನು ನುಂಗಿದ ಖದೀಮ. ಬೆಂಗಳೂರಿನ ಕೆ.ಆರ್. ಮಾರ್ಕೆಟ್​ನಲ್ಲಿ ಈ ಅಪರೂಪದ ಘಟನೆ ನಡೆದಿದ್ದು, ವಿಷಯ ತಿಳಿದ ಪೊಲೀಸರು ಅರೆಕ್ಷಣ ಹೌಹಾರಿದ್ದಾರೆ. ಕೆಲ ದಿನಗಳ ಹಿಂದೆ ಎಂ.ಟಿ ಸ್ಟ್ರೀಟ್ ನಿವಾಸಿ ಹೇಮಾ ಎಂಬುವವರ ಕುತ್ತಿಗೆಯಲ್ಲಿದ್ದ ಚಿನ್ನದ ಸರ ಕಿತ್ತು ಸಂಜಯ್​ ಹಾಗೂ ಆತನ ಸಹಚರ ವಿಜಿ ಪರಾರಿಯಾಗುತ್ತಿದ್ದ ವೇಳೆ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದಿದ್ದರು.

blank

ಇದನ್ನೂ ಓದಿ: ಪರಪ್ಪನ ಅಗ್ರಹಾರದಲ್ಲಿ ಪ್ರತಿಭಾ ಕಾರಂಜಿ ಸ್ಪರ್ಧೆ- ಕೈದಿಗಳ ಪ್ರತಿಭೆ ಕಂಡು ಜೈಲಾಧಿಕಾರಿಗಳಿಗೆ ಅಚ್ಚರಿ

ಬಳಿಕ ಸರಗಳ್ಳರಾದ ವಿಜಿ ಹಾಗೂ ಸಂಜಯ್ ನನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ್ದರು. ಆದರೆ ಪೊಲೀಸ್ರು ಕಳ್ಳರನ್ನ ವಿಚಾರಣೆ ನಡೆಸಿ ಹುಡುಕಾಟ ನಡೆಸಿದಾಗ ಆರೋಪಿಗಳ ಬಳಿ ಕಳ್ಳತನ ಮಾಡಿದ ಚಿನ್ನ ಪತ್ತೆಯಾಗಿರಲಿಲ್ಲ. ಕ್ಷಣಾರ್ಧದಲ್ಲಿ ಸರ ಅದ್ಹೇಗೆ ಮಾಯವಾಯ್ತು ಎಂದು ತಲೆ ಕೆಡಿಸಿಕೊಂಡ ಪೊಲೀಸರು ಆರೋಪಿಗಳ ದೇಹವನ್ನು ಸ್ಕ್ಯಾನ್​ ಮಾಡಿಸಲು ಮುಂದಾಗಿದ್ದರು. ಸ್ಕ್ಯಾನ್​ ವೇಳೆ ಆರೋಪಿ ಸಂಜಯ್ ಹೊಟ್ಟೆಯಲ್ಲಿ ಚಿನ್ನದ ಸರ ಇರುವುದು ಕಂಡು ಪೊಲೀಸರು ಬೆಚ್ಚಿಬಿದ್ದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಕಳ್ಳನ ಕರಾಮತ್ತಿಗೆ ಅವಕ್ಕಾದ ಪೊಲೀಸರು ಸದ್ಯ ಚಿನ್ನದ ಸರ ಆಚೆ ತೆಗೆಸುವ ಬಗ್ಗೆ ಚಿಂತನೆ ನಡೆಸಿರೋದಾಗಿ ಬಗ್ಗೆ ಮಾಹಿತಿ ಲಭ್ಯವಾಗಿದೆ.

Source: newsfirstlive.com Source link