ಏಪ್ರಿಲ್​ 14ಕ್ಕೇ ಏಕೆ ಬರ್ತಿದೆ ಕೆಜಿಎಫ್​-2, ಇಲ್ಲಿದೆ ಇಂಟರೆಸ್ಟಿಂಗ್ ಫ್ಯಾಕ್ಟ್..!

ಏಪ್ರಿಲ್​ 14ಕ್ಕೇ ಏಕೆ ಬರ್ತಿದೆ ಕೆಜಿಎಫ್​-2, ಇಲ್ಲಿದೆ ಇಂಟರೆಸ್ಟಿಂಗ್ ಫ್ಯಾಕ್ಟ್..!

ಅಂತು ಇಂತು ಕೆಜಿಎಫ್ 2 ಸಿನಿಮಾದ ರಿಲೀಸ್​ ಡೇಟ್​ ಫೈನಲ್​ ಆಗ್ತಿದೆ. ಚಾಪ್ಟರ್​ 2 ರಿಲೀಸ್​ಗೆ ಮುಹೂರ್ತ ಫಿಕ್ಸ್​ ಆಗ್ತಿದಂತೆ ಈಡೀ ವಿಶ್ವವೇ ರಾಖಿ ಭಾಯ್​ ಮತ್ತು ಅಧೀರನ ಅರ್ಭಟವನ್ನು ಕಣ್ತುಂಬಿ ಕೊಳ್ಳೊಕೆ ಬೆರಗುಗಣ್ಣಿನಿಂದ ಕಾಯ್ತಿದೆ. ಇದರ ಜೊತೆಗೆ ಬಾಹುಬಲಿ ಪ್ರಭಾಸ್​ ದರ್ಶನದ ಡೇಟ್​ನಲ್ಲಿ , ರಾಖಿಭಾಯ್​ ಎಂಟ್ರಿಯಾಗ್ತಿರೋದಕ್ಕೆ ಕೊಂಚ ಗಲಿಗಲಿಯು ಆಗಿದೆ. ಅಷ್ಟೇ ಅಲ್ಲ ಏಪ್ರಿಲ್​ 14 ಕ್ಕೆ ಕೆಜಿಎಫ್ 2 ಬಂದ್ರೆ, ಸಲಾರ್​ ಬರೋದ್ಯಾವಾಗ ಅನ್ನೋ ಅಂತ ಪ್ರಭಾಸ್​ ಫ್ಯಾನ್ಸ್​ಗಳು ಕಣ್ ಕಣ್ ಬಿಡ್ತಿದ್ದಾರೆ.

blank

ಕೆಜಿಎಫ್ 2 ಸಿನಿಮಾ ಬಿಡುಗಡೆಯ ಹೊಸ ದಿನಾಂಕವನ್ನು ಹೊಂಬಾಳೆ ಫಿಲಂಸ್​ ಸರ್ಪ್ರೈಸ್​ ಆಗಿ ನಿನ್ನೆ ಅನೌನ್ಸ್​ ಮಾಡಿದ್ದಾರೆ. ಡಿಸೆಂಬರ್‌ನಲ್ಲಿ ಸಿನಿಮಾ ಬಿಡುಗಡೆ ಆಗಬಹುದು ಎಂಬ ಬಹುತೇಕರ ನಿರೀಕ್ಷೆಯನ್ನು ಮೀರಿ ಸಿನಿಮಾವು ಮುಂದಿನ ವರ್ಷ ಬಿಡುಗಡೆ ಆಗಲಿದೆ ಎಂದು ಸಿನಿಮಾ ನಿರ್ಮಾಣ ಸಂಸ್ಥೆ ಹೊಂಬಾಳೆ ಘೋಷಿಸಿದೆ.

ಮುಂದಿನ ವರ್ಷ ಏಪ್ರಿಲ್ 14ನೇ ತಾರೀಖಿನಂದು ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಅಗ್ತಿರೋದು ಹೇಳಿ ಯಶ್​ ಅಭಿಮಾನಿಗಳಿಗೆ ಸಿಹಿ ಸುದ್ದಿ ಆಗಿದ್ರೆ. ಸಲಾರ್​ ರಿಲೀಸ್​ ಆಗಬೇಕಿದ್ದ ​ ಡೇಟ್​ನಲ್ಲಿ ಕೆಜಿಎಫ್ ಬರ್ತಿರೋದಕ್ಕೆ ಡಾರ್ಲಿಂಗ್​ ಪ್ರಭಾಸ್​ ಅಭಿಮಾನಿಗಳಲ್ಲಿ ನಿರಾಸೆ ಮೂಡಿಸಿದೆ.

blank

ಏಪ್ರಿಲ್ 14ಕ್ಕೆ ಜಿಎಫ್ ರಿಲೀಸ್​ ಆಗಲಿದ್ದು, ಸಲಾರ್​ ಯಾವಾಗ ರಿಲೀಸ್​ ಆಗಲಿದೆ ಅನ್ನೋ ಪ್ರಶ್ನೆ ಈಗ ಎಲ್ಲರನ್ನು ಕಾಡ್ತಿದೆ. ಪ್ರಭಾಸ್ ನಟನೆಯ ‘ಸಲಾರ್’ ಸಿನಿಮಾ ಏಪ್ರಿಲ್ 14ಕ್ಕೆ ಬಿಡುಗಡೆಗೆ ರೆಡಿಯಾಗಿತ್ತು. ಆದರೆ ‘ಕೆಜಿಎಫ್ 2’ ಸಿನಿಮಾ ಬಿಡುಗಡೆ ಆಗುತ್ತಿರುವ ಕಾರಣಕ್ಕೆ ‘ಸಲಾರ್’ ಸಿನಿಮಾದ ಬಿಡುಗಡೆ ಇನ್ನಷ್ಟು ಮುಂದಕ್ಕೆ ಹೋಗಿದೆ ಎನ್ನಲಾಗುತ್ತಿದೆ. ಯಾಕಂದ್ರೆ ಕೆಜಿಎಫ್ 2 ಚಿತ್ರದ ಹಿಂದಿರುವ ಮಾತ್ರಿಕರೇ ಸಲಾರ್​ ಚಿತ್ರ ಅರಳೋಕೆ ಕಾರಣ ಕರ್ತರಾಗಿದ್ದಾರೆ.

ಈ ಹಿನ್ನೆಲೆಯಲ್ಲಿ ಒಂದೇ ಬ್ಯಾನರ್​ನಲ್ಲಿ ಒಬ್ಬರೇ ನಿರ್ದೇಶನ ಮಾಡಿರುವ ಎರಡು ಚಿತ್ರಗಳು ಕ್ಲಾಶ್​ ಆಗೋದು ಬೇಡ ಎಂಬ ಕಾರಣಕ್ಕೆ ಸಲಾರ್​ ಚಿತ್ರವನ್ನು ಕೆಜಿಎಫ್ 2 ನಂತ್ರ ರಿಲೀಸ್​ ಮಾಡಲು ಹೊಂಬಾಳೆ ಮಾಲೀಕರು ಪ್ಲಾನ್​ ಮಾಡಿದ್ದಾರೆ. ಅಲ್ಲದೆ ಕೆಜಿಎಫ್ 2 ಮತ್ತು ಸಲಾರ್​ ಫ್ಯಾನ್​ ಇಂಡಿಯಾ ಸಿನಿಮಾವಾಗಿದ್ದು, ಎರಡು ಚಿತ್ರಕ್ಕೂ ರಿಲೀಸ್​ ಡೇಟ್​ನಲ್ಲಿ ಗ್ಯಾಫ್​ ಇದ್ರೆ, ಚಿತ್ರಮಂದಿರಗಳ ಕೊರತೆಯೂ ಕಾಡಲ್ಲ ಈಹಿನ್ನಲೆಯಲ್ಲಿ ಸಲಾರ್​ ಮುಂದೆ ಹೋಗಿದೆ ಅನ್ನಬಹುದು.

blank

ಅಷ್ಟೇ ಅಲ್ಲ ‘ಸಲಾರ್’ ಸಿನಿಮಾ ಕಂಪ್ಲೀಟ್​ ಆಗಲು ಇನ್ನಷ್ಟು ಟೈಂ ಬೇಕಿದೆ.ಅದೂ ಅಲ್ಲದೆ ಪ್ರಭಾಸ್ ನಟಿಸಿರುವ ‘ರಾಧೆ-ಶ್ಯಾಮ್’ ಸಿನಿಮಾ ಮುಂದಿನ ವರ್ಷ ಜನವರಿಯಲ್ಲಿ ಬಿಡುಗಡೆ ಆಗಲಿದೆ. ಕೇವಲ ಮೂರು ತಿಂಗಳ ಅಂತರದಲ್ಲಿ ಸಲಾರ್​ ರಿಲೀಸ್ ಮಾಡೋದು ಬೆಡ ಅನ್ನೋ ಕಾರಣದಿಂದ, ವಿಜಯ್​ ಕಿರಗಂದೂರ್​ ಸಲಾರ್​ ಚಿತ್ರವನ್ನು ಸ್ವಲ್ಪ ತಡವಾಗಿ ರಿಲೀಸ್​ ಮಾಡಲು ಮನಸ್ಸು ಮಾಡಿದ್ದಾರೆ.

Source: newsfirstlive.com Source link