ಮೂವರು ಪತ್ನಿಯರಿಗೆ ಮೋಸ ಮಾಡಿ 4ನೇ ಮದುವೆಗೆ ರೆಡಿಯಾದ ಭೂಪ; ಪ್ರೇಯಸಿ ಜತೆಗೆ ಎಸ್ಕೇಪ್

ಮೂವರು ಪತ್ನಿಯರಿಗೆ ಮೋಸ ಮಾಡಿ 4ನೇ ಮದುವೆಗೆ ರೆಡಿಯಾದ ಭೂಪ; ಪ್ರೇಯಸಿ ಜತೆಗೆ ಎಸ್ಕೇಪ್

ಚಿಕ್ಕಮಗಳೂರು: ಮೂವರು ಪತ್ನಿಯರನ್ನು ಬಿಟ್ಟು ಭೂಪನೋರ್ವ ನಾಲ್ಕನೇ ಮದುವೆಗೆ ಸಿದ್ಧನಾದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ. ಯೂಸುಫ್ ಹೈದರ್ ಎಂಬಾತ ಮೂವರು ಪತ್ನಿಯರಿಗೆ ವಂಚನೆ ಮಾಡಿ ನಾಲ್ಕನೇ ಮದುವೆಗೆ ರೆಡಿಯಾಗಿದ್ದಾನೆ.

ಎನ್.ಆರ್ ಪುರ ತಾಲೂಕಿನ ಬಾಳೆಹೊನ್ನೂರು ನಿವಾಸಿ ಹೈದರ್. ಮಂತ್ರವಾದಿ ಎಂದು ಮಂಕುಬೂದಿ ಎರಚಿ ಅಮಾಯಕರಿಗೆ ವಂಚನೆ ಮಾಡಿದ್ದಾನೆ. ಈಗ ಮೋಸ ಹೋದ ಪತ್ನಿಯರು ಈತನ ವಿರುದ್ಧ ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.

ಸಕಲೇಶಪುರ, ಮೂಡಿಗೆರೆ, ಆಲ್ದೂರಿನ ಮಹಿಳೆಯರಿಗೆ ಮೋಸ ಮಾಡಿರುವ ಹೈದರ್, ಸದ್ಯ‌ ಕಳಸ ಪಟ್ಟಣದ ಮಹಿಳೆ ಜೊತೆ ಎಸ್ಕೇಪ್ ಆಗಿದ್ದಾನೆ. ಮಂತ್ರವಾದಿ ಹೆಸರಿನಲ್ಲಿ ಅನೇಕ ಮಹಿಳೆಯರಿಗೆ ವಂಚನೆ ಮಾಡಿರುವ ಈತನನ್ನು ಬಂಧಿಸುವಂತೆ ಮೂವರು ಪತ್ನಿಯರು ಚಿಕ್ಕಮಗಳೂರು ಎಸ್​​ಪಿ ದೂರು ನೀಡಿದ್ದಾರೆ.

ಇದನ್ನೂ ಓದಿ: ಸಾರ್ವಜನಿಕರಿಂದ ಪಾರಾಗಲು ಕದ್ದ ಚಿನ್ನದ ಸರವನ್ನೇ ಗುಳುಂ ಮಾಡಿದ ಕಳ್ಳ.. ಮುಂದೇನಾಯ್ತು?

Source: newsfirstlive.com Source link