ಓಣಂ ಡ್ಯಾನ್ಸ್​​​; ಸುಳ್ಳು ಮಾಹಿತಿ ನೀಡಿದ್ದಾರೆಂದು ಕಾಲೇಜು​ ಆಡಳಿತ ಮಂಡಳಿ ಮೇಲೆ ಗರಂ

ಓಣಂ ಡ್ಯಾನ್ಸ್​​​; ಸುಳ್ಳು ಮಾಹಿತಿ ನೀಡಿದ್ದಾರೆಂದು ಕಾಲೇಜು​ ಆಡಳಿತ ಮಂಡಳಿ ಮೇಲೆ ಗರಂ

ಉಡುಪಿ: ಓಣಂ ಪ್ರಯುಕ್ತ ಕೊರೊನಾ ನಿಯಮಾವಳಿಗಳನ್ನು ಮೀರಿ ಕೋಟದ ಇಸಿಆರ್ ಕಾಲೇಜು ವಿದ್ಯಾರ್ಥಿಗಳಿಂದ, ಭರ್ಜರಿ ಡ್ಯಾನ್ಸ್ ವಿಡಿಯೋ ವೈರಲ್ ವಿಚಾರಕ್ಕೆ ಸಂಬಂಧಿಸಿದಂತೆ, ಬ್ರಹ್ಮಾವರ ತಹಶೀಲ್ದಾರ್ ಕಾಲೇಜಿಗೆ ಭೇಟಿ ನೀಡಿ ವಿಚಾರಿಸಿದ್ದಾರೆ..

ತಹಶೀಲ್ದಾರ್ ಕಾಲೇಜಿಗೆ ಭೇಟಿ ನೀಡಿದ ವೇಳೆ ಕಾಲೇಜು ಆಡಳಿತ ಮಂಡಳಿ, ವೈರಲ್​ ಆಗಿರುವ ವಿಡಿಯೋ ಎರಡು ವರ್ಷದ ಹಳೆಯ ವಿಡಿಯೋ ಆಗಿದ್ದು, ಈ ವರ್ಷ ಕೇವಲ ಊಟದ ವ್ಯವಸ್ಥೆ ಮಾತ್ರ ಮಾಡಿರುವುದಾಗಿ ಹೇಳಿಕೆ ನೀಡಿದೆ ಎನ್ನಲಾಗಿದೆ. ಕಾಲೇಜು ಆಡಳಿತ ಮಂಡಳಿ ನೀಡಿದ ತಪ್ಪು ಹೇಳಿಕೆಯನ್ನು ತಹಶೀಲ್ದಾರ ತಮ್ಮ ವರದಿಯಲ್ಲಿ ನಮೂದಿಸಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ.

ಕಾಲೇಜು ಆಡಳಿತ ಮಂಡಳಿ ಸುಳ್ಳು ಮಾಹಿತಿ ನೀಡಿ ತಹಶೀಲ್ದಾರರಿಗೆ ನಂಬಿಸಲು ಪ್ರಯತ್ನ ಪಟ್ಟಿದ್ದಾರೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತ ಪಡಿಸಿದ್ದಾರೆ.. ಕಳೆದ ಒಂದೂವರೆ ವರ್ಷದ ಹಿಂದೆಯಷ್ಟೆ ಪ್ರಾರಂಭವಾಗಿದ್ದ ಕೋಟದ ಇಸಿಆರ್ ಕಾಲೇಜಿನಲ್ಲಿ , ಓಣಂ ಆಚರಣೆ ನೆಪದಲ್ಲಿ ಕೊರೊನಾ ನಿಯಮ ಮರೆತು ಉಪನ್ಯಾಸಕರು, ವಿದ್ಯಾರ್ಥಿಗಳು ಕುಣಿದಿದ್ದ ವಿಡಿಯೋವೊಂದು ವೈರಲ್​ ಆಗಿದ್ದು, ಕೇರಳದ ವಿದ್ಯಾರ್ಥಿಗಳೇ ಹೆಚ್ಚಾಗಿ ವ್ಯಾಸಂಗ ಮಾಡುತ್ತಿರುವ ಕಾಲೇಜಿನಲ್ಲಿ ಕೊರೊನಾ ಮಾರ್ಗಸೂಚಿಗಳನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು..

ಇದನ್ನೂ ಓದಿ: ಓಣಂ ಪ್ರಯುಕ್ತ ಕೇರಳ ವಿದ್ಯಾರ್ಥಿಗಳ ಭರ್ಜರಿ ಡ್ಯಾನ್ಸ್.. ಕಣ್ಮರೆಯಾಗಿತ್ತು ಕೋವಿಡ್ ರೂಲ್ಸ್

Source: newsfirstlive.com Source link