‘ನಿಮ್ಮ ಸೋದರಿಯರನ್ನ ರಕ್ಷಣೆ ಮಾಡಿ ಪ್ಲೀಸ್​’ ಮೋದಿಗೆ ರಾಖಿ ಕಳಿಸಿ ಅಫ್ಘಾನ್​ ಮಹಿಳೆಯರ ಮನವಿ

‘ನಿಮ್ಮ ಸೋದರಿಯರನ್ನ ರಕ್ಷಣೆ ಮಾಡಿ ಪ್ಲೀಸ್​’ ಮೋದಿಗೆ ರಾಖಿ ಕಳಿಸಿ ಅಫ್ಘಾನ್​ ಮಹಿಳೆಯರ ಮನವಿ

25 ವರ್ಷದ ಸರ್ಕಾರಿ ಉದ್ಯೋಗಿಯಾಗಿರುವ ಅಫ್ಘಾನಿಸ್ತಾನದ ದಾಯ್ಕುಂದಿ ಪ್ರದೇಶದ ಮಹಿಳೆಯೊಬ್ಬರು ರಕ್ಷಾ ಬಂಧನ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ರಾಖಿಯನ್ನು ಕಳುಹಿಸಿಕೊಟ್ಟಿದ್ದು, ‘ದಯವಿಟ್ಟು ನಿಮ್ಮ ಸಹೋದರಿಯರನ್ನ ರಕ್ಷಣೆ ಮಾಡಿ, ಡಿಯರ್​ ಬ್ರದರ್’ ಎಂದು ಮನವಿ ಮಾಡಿದ್ದಾರೆ.

ತಾಲಿಬಾನಿಗಳು ಸರ್ಕಾರಿ ಅಧಿಕಾರಿಗಳಾಗಿ ಕೆಲಸ ಮಾಡಿದವರಾಗಿ ಕಾಬೂಲ್​​ನಲ್ಲಿ ಹುಡುಕೂಟ ನಡೆಸಿದ್ದಾರೆ. ಈ ಹಿನ್ನೆಲೆಯಲ್ಲಿ ಜೀವ ಭಯದಿಂದ ಮಹಿಳೆ, ಕಳೆದ ಏಳು ದಿನಗಳಿಂದ ಕಾಬೂಲ್​​ನ ಸ್ನೇಹಿತರ ಮನೆವೊಂದರಲ್ಲಿ ಅಡಗಿ ಕುಳಿತು ರಕ್ಷಣೆ ಪಡೆದುಕೊಂಡಿದ್ದಾರೆ.

ಇದೇ ವೇಳೆ ಖಾಸಗಿ ಮಾಧ್ಯಮದೊಂದಿಗೆ ಮಾತನಾಡಿರುವ ಮಹಿಳೆ, ಪ್ರಧಾನಿ ನರೇಂದ್ರ ಮೋದಿ ಅವರಿಗೆ ಆಡಿಯೋ ಸಂದೇಶವನ್ನು ಕಳುಹಿಸಿದ್ದಾರೆ. ಅಲ್ಲದೇ ಮೋದಿ ಅವರಿಗಾಗಿ ಇ-ರಾಖಿಯನ್ನು ಕಳುಹಿಸಿದ್ದೇನೆ ಮತ್ತು ಅಫ್ಘಾನ್​​ನಲ್ಲಿ ಯಾರ ಜೀವನ, ಘಟತೆ ಡೇಂಜರ್​ನಲ್ಲಿದೆಯೋ ಅಂತ ಜನರಿಗೆ ಅಗತ್ಯ ನೆರವು ನೀಡುವಂತೆ ಮನವಿ ಮಾಡಿದ್ದಾರೆ. ಅಲ್ಲದೇ ಕೈ ಜೋಡಿಸಿ ಮನವಿ ಮಾಡುತ್ತಿದ್ದು, ಸಂಕಷ್ಟದಲ್ಲಿರುವ ಮಹಿಳೆಯರಿಗೆ ವೀಸಾ ಕೊಟ್ಟು ನೆರವು ನೀಡಿ ಎಂದು ಕೇಳಿದ್ದಾರೆ.

Source: newsfirstlive.com Source link