ಫ್ಯಾನ್ಸ್​ಗೆ ಸರ್​​ಪ್ರೈಜ್​​​ ಕೊಟ್ಟ ಸಲಾರ್​ ಟೀಂ.. ಭಯಂಕರ ಲುಕ್​​​​ನಲ್ಲಿ ಜಗಪತಿ ಬಾಬು

ಫ್ಯಾನ್ಸ್​ಗೆ ಸರ್​​ಪ್ರೈಜ್​​​ ಕೊಟ್ಟ ಸಲಾರ್​ ಟೀಂ.. ಭಯಂಕರ ಲುಕ್​​​​ನಲ್ಲಿ ಜಗಪತಿ ಬಾಬು

ಸಲಾರ್​.. ಸೌಥ್ ಸಿನಿ ದುನಿಯಾದ ಬಹು ನಿರೀಕ್ಷಿತ ಸಿನಿಮಾ. ನಿರ್ದೇಶಕ ಪ್ರಶಾಂತ್ ನೀಲ್, ಪ್ರಭಾಸ್​ ಕಾಂಬಿನೇಷನ್​ ದೊಡ್ಡ ಮಟ್ಟದ ಸೆನ್ಸೇಶನ್​ ಕ್ರಿಯೇಟ್​ ಮಾಡಿದೆ. ಅಷ್ಟೆ ಅಲ್ಲದೆ ಸಲಾರ್​ ಚಿತ್ರದ ಪ್ರತಿಯೊಂದು ಪಾತ್ರವೂ ಒಂದೊಂದು ಕತೆ ಹೇಳ್ತಿವೆ. ಅದೇ ರೀತಿ ಸಲಾರ್​ ಸಿನಿಮಾದಲ್ಲಿ ಪ್ರಭಾಸ್​ ಎದುರು ಕಣ್ ಅರಳಿಸಿ ನಿಂತಿರುವ ಜಗಪತಿ ಬಾಬು ಪಾತ್ರ ಕೂಡ ಸಿನಿ ರಸಿಕರ ರೋಮಾಂಚನಗೊಳಿಸಿದೆ. ಅದಕ್ಕೆ ಸಾಕ್ಷಿ ಜಗಪತಿ ಬಾಬು ಫಸ್ಟ್​ ಲುಕ್​.

ಹೊಂಬಾಳೆ ಫಿಲಂಸ್ ನಿನ್ನೆಯಿಂದ ಚಿತ್ರಪ್ರೇಮಿಗಳಿಗೆ ಸರ್ಪ್ರೈಸ್​ ಮೇಲೆ ಸರ್ಪ್ರೈಸ್​ ಕೊಡ್ತಿದ್ದಾರೆ. ಭಾನುವಾರ ಬಾಡೂಟ ಸವಿದು ರಿಲ್ಯಾಕ್ಸ್​ ಮೂಡ್​ನಲ್ಲಿದ್ದ ರಾಖಿ ಬಳಗಕ್ಕೆ ಕೆಜಿಎಫ್ ರಿಲೀಸ್​ ಡೇಟ್​ ಅನೌನ್ಸ್​ ಮಾಡಿ ರಾಖಿ ಹಬ್ಬಕ್ಕೆ ಉಡುಗೊರೆ ಕೊಟ್ಟಿದ್ರು ಹೊಂಬಾಳೆ ಫಿಲಂಸ್.

ಹೊಂಬಾಳೆ ಫಿಲಂಸ್​ನ ಭಾನುವಾರದ ಸರ್ಪ್ರೈಸ್​ನಿಂದ ಸಿನಿರಸಿಕರು ಹೊರ ಬರುವ ಮುನ್ನವೇ ಚಿತ್ರಪ್ರೇಮಿಗಳಿಗೆ ಮತ್ತೋದ್ ಧಮಾಕ ಸಿಕ್ಕಿದೆ. ಅದೇನಪ್ಪ ಸಲಾರ್​ ಚಿತ್ರದಲ್ಲಿ ಬಾಹುಬಲಿ ಪ್ರಭಾಸ್​ ವಿರುದ್ದ ತೊಡೆತಟ್ಟಿರುವ ಜಗಪತಿ ಬಾಬುಗೆ ನಿರ್ವಹಿಸಿರುವ ರಾಜ ಮನಾರ್​ ಪಾತ್ರದ ಫಸ್ಟ್​ ಲುಕ್​ ರಿವೀಲ್​ ಮಾಡಿದೆ ಸಲಾರ್​ ಟೀಂ..

ಕೆಜಿಎಫ್ ಸೃಷ್ಠಿಕರ್ತ ನಿರ್ದೇಶಕ ಪ್ರಶಾಂತ್ ನೀಲ್ ಕಲ್ಪನೆಯ ಸಲಾರ್ ಸಿನ್ಮಾದಲ್ಲಿ ಖಡಕ್ ಪಾತ್ರದಲ್ಲಿ ಜಗಪತಿ ಬಾಬು ಮಿಂಚು ಹರಿಸಿದ್ದಾರೆ. ಇನ್ನು ಜಗಪತಿ ಬಾಬು ಅವರ ರಾಜ ಮನಾರ್ ಪಾತ್ರದ ಲುಕ್ ನೋಡಿ ಅವರ ಅಭಮಾನಿಗಳು ಫುಲ್​ ಫಿದಾ ಆಗಿದ್ದಾರೆ. ಇತ್ತೀಚಿಗಷ್ಟೇ ಸಲಾರ್​ ಚಿತ್ರದ ಶೂಟಿಂಗ್​ ವೇಳೆ ಕೆಲವೊಂದು ವಿಡಿಯೋ ಲೀಕ್​ ಆಗಿತ್ತು. ಲೀಕ್​ ಆಗಿದ್ದ ವಿಡಿಯೋಗಳ ಸನ್ನಿವೇಶಗಳಲ್ಲಿ ಜಗಪತಿ ಬಾಬು ಕಾಣಿಸಲಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಅದ್ರೆ ಈಗ ಚಿತ್ರತಂಡವೇ ಜಗಪತಿ ಬಾಬು ಅವರ ಪಾತ್ರದ ಲುಕ್​ ರಿವೀಲ್​ ಮಾಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ರಾಜಮನಾರ್​ ಲುಕ್​ ಸಖತ್​ ಸೌಂಡ್​ ಮಾಡ್ತಿದೆ.

Source: newsfirstlive.com Source link