ದಾವಣಗೆರೆ; ಫ್ರೀ ಸೈಟ್​​ ಕೊಡ್ತಿದ್ದಾರೆ ಅಂತ ಜಮಾಯಿಸಿದ ಸಾವಿರಾರು ಜನ

ದಾವಣಗೆರೆ; ಫ್ರೀ ಸೈಟ್​​ ಕೊಡ್ತಿದ್ದಾರೆ ಅಂತ ಜಮಾಯಿಸಿದ ಸಾವಿರಾರು ಜನ

ದಾವಣೆಗೆರೆ: ಉಚಿತ ನಿವೇಶನ ಕೊಡುತ್ತಾರೆಂಬ ವದಂತಿಗೆ ಕಿವಿಗೊಟ್ಟು ದಾವಣೆಗೆರೆಯ ದೂಡಾ ಕಚೇರಿ ಮುಂದೆ ಸಾವಿರಾರು ಸಂಖ್ಯೆಯಲ್ಲಿ ಜನರು ಮುಗಿಬಿದ್ದ ಘಟನೆ ನಡೆದಿದೆ. ದೂಡಾ ಕಚೇರಿಯಿಂದ ಫ್ರೀ ಸೈಟ್​​ ನೀಡುತ್ತಿದ್ದಾರೆ ಎಂಬ ಸುದ್ದಿ ಹರಡುತ್ತಿದ್ದಂತೆಯೇ ಸಾವಿರಾರು ಜನ ಅರ್ಜಿ ಹಾಕಲು ನಾ ಮುಂದು ತಾ ಮುಂದು ಎಂದು ಜಮಾಯಿಸಿದ್ದಾರೆ.

ನಗರದ ಜನರ ಬೇಡಿಕೆ ತಕ್ಕಂತೆ ಸೈಟ್ ಸೃಷ್ಠಿಸಲು ಮುಂದಾಗಿತ್ತು ದಾವಣಗೆರೆ ದೂಡಾ. ಅದಕ್ಕಾಗಿ ಬೇಡಿಕೆ ಸಮೀಕ್ಷೆಯನ್ನ ಮಾಡಲು ದೂಡಾ ಆಡಳಿತ ಅಧಿಕಾರಿಗಳು ಅರ್ಜಿ ಆಹ್ವಾನಿಸಿದ್ದಾರೆ. ಈ ಮಧ್ಯೆ ಯಾರೋ ಕಿಡಿಗೇಡಿಗಳು ದೂಡಾ ಕಚೇರಿಯಿಂದ ಪುಕ್ಕಟೆ ನಿವೇಶನ ನೀಡಲಾಗುತ್ತದೆ ಎಂದು ವದಂತಿ ಹಬ್ಬಿಸಿದ್ದಾರೆ. ಹಾಗಾಗಿ ಈ ಅವಾಂತರವಾಗಿದ್ದು, ಒಂದು ವಾರದಿಂದ ಜನ ದೂಡಾ ಕಚೇರಿ ಮುಂದೆ ಕ್ಯೂನಲ್ಲಿ ನಿಂತಿದ್ದಾರೆ.

ಸಾವಿರಾರು ಜನ ಏಕಾಏಕಿ ನಾ ಮುಂದು, ತಾ ಮುಂದು ಎಂಬಂತೆ ಸೈಕಲ್‌, ಸ್ಕೂಟರ್‌, ಬೈಕ್‌, ಆಟೋ, ಟ್ರ್ಯಾಕ್ಟರ್‌ಗಳಲ್ಲಿ ಹೋಗಿ ದೂಡಾ ಕಚೇರಿ ಮುಂದೆ ಜಮಾಯಿಸಿದ್ದಾರೆ.

ಇದನ್ನೂ ಓದಿ: ದೆಹಲಿಗೆ ಹೋದ್ರೂ ಸಿಗದ ‘ಆನಂದ’; ಇನ್ನೂ 3 ದಿನ ಆನಂದ್ ಸಿಂಗ್ ಮೌನ..!

Source: newsfirstlive.com Source link