ಬೆಂಗಳೂರಿನಲ್ಲಿ ರೋಲ್ಸ್​​ ರಾಯ್ಸ್​ ಸೀಜ್ ಕೇಸ್​​; ಅಮಿತಾಭ್​ ಬಚ್ಚನ್​​ಗೆ ನೋಟಿಸ್​​​​​

ಬೆಂಗಳೂರಿನಲ್ಲಿ ರೋಲ್ಸ್​​ ರಾಯ್ಸ್​ ಸೀಜ್ ಕೇಸ್​​; ಅಮಿತಾಭ್​ ಬಚ್ಚನ್​​ಗೆ ನೋಟಿಸ್​​​​​

ಬೆಂಗಳೂರು: ಬಾಲಿವುಡ್ ಬಿಗ್ ಬಿ ಅಮಿತಾಭ್ ಬಚ್ಚನ್​​ಗೆ ಬೆಂಗಳೂರು RTO ಅಧಿಕಾರಿಗಳು ನೋಟಿಸ್​ ನೀಡಿದ್ದಾರೆ. ಈ ಸಂಬಂಧ ನ್ಯೂಸ್​ಫಸ್ಟ್​ಗೆ ಮಾಹಿತಿ ನೀಡಿದ RTO ಅಧಿಕಾರಿ​, ಸೀಜ್​ ಆಗಿರೋ ರೋಲ್ಸ್ ರಾಯ್ಸ್ ಕಾರು ಸಂಬಂಧ ಮಾಹಿತಿ ನೀಡುವಂತೆ ನೋಟಿಸ್​​ನಲ್ಲಿ ಉಲ್ಲೇಖಿಸಿದ್ದಾರೆ.

ವಾಹನ ಪರ್ಚೇಸ್ ಮಾಡಿದ್ದು ಯಾವಾಗ? ಯಾರಿಗೆ ಯಾವಾಗ ಮಾರಾಟ ಮಾಡಿದ್ದು? ಮಾರಾಟ ಮಾಡಿದ್ದಕ್ಕೆ ಎನ್​ಓಸಿ ನೀಡಿದ್ದೀರಾ? ಇಷ್ಟು ದಾಖಲೆಗಳನ್ನ ಸಲ್ಲಿಸಲು ಸೂಚನೆ ನೀಡಲಾಗಿದೆ. ಅಮಿತಾಭ್ ಬಚ್ಚನ್ ಹೆಸರಲ್ಲಿ ನೋಂದಣಿಯಾಗಿದ್ದ ಸೂಕ್ತ ದಾಖಲೆ ಇಲ್ಲದ ರೋಲ್ಸ್ ರಾಯ್ಸ್ ಕಾರನ್ನು ಬೆಂಗಳೂರಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದರು. ಅಮಿತಾಭ್ ಬಚ್ಚನ್ ಹೆಸರಲ್ಲಿ ನೋಂದಣಿ ಆಗಿದ್ದ ಕಾರನ್ನು ಬೆಂಗಳೂರಿನ ಯುಬಿ ಸಿಟಿಯಲ್ಲಿ ಸೀಜ್ ಮಾಡಲಾಗಿತ್ತು.

ಇದನ್ನೂ ಓದಿ: ನೆಲಮಂಗಲ RTO ಅಧಿಕಾರಿಗಳಿಂದ ಸೀಜ್ ಆಯ್ತು ಅಮಿತಾಭ್ ಬಚ್ಚನ್ ಹೆಸರಿನಲ್ಲಿರೋ ಕಾರ್

MH 02, BB 2 ಸಂಖ್ಯೆಯ ರೋಲ್ಸ್ ರಾಯ್ಸ್ ಕಾರು ಸೀಜ್ ಆಗಿದ್ದು, ರೋಲ್ಸ್ ರಾಯ್ಸ್ ಕಾರಿಗೆ ಸೂಕ್ತ ದಾಖಲೆ ಇರಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದರು. ಬಾಬು ಎಂಬಾತ ಅಮಿತಾಭ್ ಬಚ್ಚನ್ ರಿಂದ 6 ಕೋಟಿಗೆ ರೋಲ್ಸ್ ರಾಯ್ಸ್ ಕಾರನ್ನು ಖರೀದಿಸಿದ್ದೆ ಎಂದು ಹೇಳಿದ್ದ.

Source: newsfirstlive.com Source link