ತಾಲಿಬಾನ್ ಬೆಂಬಲಿಸುವ ಸಂಸ್ಕೃತಿಯನ್ನ ಕಾಂಗ್ರೆಸ್ ಬಿಡಲಿ: ಕೋಟ ಶ್ರೀನಿವಾಸ್ ಪೂಜಾರಿ

ಉಡುಪಿ: ಅಫ್ಘಾನಿಸ್ತಾನ ದೇಶದ ಬೆಳವಣಿಗೆಯಿಂದಾದರೂ ತಾಲಿಬಾನ್ ಸಂಸ್ಕೃತಿಯನ್ನು ಬೆಂಬಲಿಸುವ ಕಾಂಗ್ರೆಸ್ ತನ್ನ ಅಭಿಪ್ರಾಯವನ್ನು ಬದಲಾವಣೆ ಮಾಡಿಕೊಳ್ಳಬೇಕು ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ಖಾರದ ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರ ಸಚಿವರ ಜನಾಶೀರ್ವಾದ ಯಾತ್ರೆಯಲ್ಲ ಜನದ್ರೋಹ ಯಾತ್ರೆ ಎಂಬ ಕಾಂಗ್ರೆಸ್ ಮುಖಂಡ ಉಗ್ರಪ್ಪ ಹೇಳಿಕಗೆ ಕೋಟ ಶ್ರೀನಿವಾಸ ಪೂಜಾರಿ ಉಡುಪಿಯಲ್ಲಿ ತಿರುಗೇಟು ಕೊಟ್ಟಿದ್ದಾರೆ. ಉಗ್ರಪ್ಪನವರು ಅವರ ರೀತಿಯಲ್ಲಿ ವಿಮರ್ಶೆ ಮಾಡಿದ್ದಾರೆ. ಕೆಲ ಮುಖಂಡರು ಕಾಲಕಾಲಕ್ಕೆ ಸರ್ಟಿಫಿಕೇಟು ಕೊಡುತ್ತಾರೆ. ಎಲ್ಲರ ಭಾವನೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಎಂದರು.

ನಮ್ಮದು ಜನಾಶೀರ್ವಾದ ಇರುವ ಸರ್ಕಾರ. ಪ್ರಧಾನಿ ಮೋದಿ, ಸಿಎಂ ಬೊಮ್ಮಾಯಿ ಜನಾಶೀರ್ವಾದದ ಸರ್ಕಾರ ನೀಡುತ್ತಿದ್ದಾರೆ. ಜನರ ಮಧ್ಯೆ ನಿಂತು ಸಮಸ್ಯೆ ಬಗೆಹರಿಸುತ್ತೇವೆ. ಇನ್ನೊಮ್ಮೆ ಕರ್ನಾಟಕದಲ್ಲಿ ಅಧಿಕಾರಕ್ಕೆ ಬರುತ್ತೇವೆ. ಬಿಜೆಪಿ ತಾಲಿಬಾನ್ ಒಂದೇ ಸಂಸ್ಕೃತಿ ಎಂಬ ಕಾಂಗ್ರೆಸ್ ಟ್ವೀಟ್ ವಿಚಾರಕ್ಕೆ, ಇದು ತಾಲಿಬಾನ್ ಸಂಸ್ಕೃತಿಯನ್ನು ಪ್ರೀತಿಸುವವರ ಹೇಳಿಕೆ. ಆಗಾಗ ತಾಲಿಬಾನ್ ಮೇಲೆ ಇವರಿಗೆ ಒಳ್ಳೆಯ ಭಾವನೆ ಬರುತ್ತದೆ. ಅಲ್ಲಿಯ ದುರಂತವನ್ನು ನೋಡಿಯಾದರೂ ಈ ಸಂಸ್ಕೃತಿಯನ್ನು ಬೆಂಬಲಿಸಬೇಡಿ ಎಂದು ಸಚಿವ ಕೋಟ ಹೇಳಿದರು. ಇದನ್ನೂ ಓದಿ: ನಾನೇ ಮಾಡಿದೇ, ನಾನೇ ಕಟ್ಟಿದೆ ಅಂತ ಪ್ರತಾಪ್ ಸಿಂಹ ಹೇಳೋದು ತಪ್ಪು: ವಿಶ್ವನಾಥ್

ಪಾಸಿಟಿವಿಟಿ ಇಳಿಕೆಯಾದ ಕೂಡಲೇ ಶಾಲೆ ಶುರು
ಕೊಡಗು, ದ.ಕನ್ನಡ ಮತ್ತು ಉಡುಪಿ ಜಿಲ್ಲೆ ಪಾಸಿಟಿವಿಟಿ ರೇಟ್ ಜಾಸ್ತಿ ಇದೆ. ಶೇಕಡಾ 2.5ಕ್ಕಿಂತ ಜಾಸ್ತಿ ಇರುವ ಕಾರಣಕ್ಕಾಗಿ ಶಾಲೆ ಪ್ರಾರಂಭ ಮಾಡಿಲ್ಲ. ರಾಜ್ಯದ ಇತರ ಜಿಲ್ಲೆಗಳಲ್ಲಿ ಶಾಲೆ ಪ್ರಾರಂಭವಾಗಿದೆ. ನಮ್ಮ ಜಿಲ್ಲೆಗಳಿಗೆ ಇದೊಂದು ಸಾಂಕೇತಿಕ ಎಚ್ಚರಿಕೆ. ಕೋವಿಡ್ ಗೈಡ್ ಲೈನ್ ಗಟ್ಟಿಗೊಳಿಸಿ ಪಾಸಿಟಿವಿಟಿ ರೇಟ್ ಕಡಿಮೆಯಾಗಬೇಕು. ಶಾಲೆ ಶೀಘ್ರ ಪ್ರಾರಂಭಿಸಲು ನಮಗೆ ಆಸಕ್ತಿ ಇದೆ. ಪಾಸಿಟಿವಿಟಿ ರೇಟ್ ಇಳಿಸಲು ಗಟ್ಟಿ ಕ್ರಮ ಕೈಗೊಳ್ಳುತ್ತೇವೆ ಎಂದು ಕೋಟ ಶ್ರೀನಿವಾಸ ಪೂಜಾರಿ ಹೇಳಿದರು. ಇದನ್ನೂ ಓದಿ: ಕಿಚ್ಚನ ಹೊಸ ಹೇರ್ ಸ್ಟೈಲ್‍ಗೆ ಫ್ಯಾನ್ಸ್ ಫಿದಾ

Source: publictv.in Source link