ಸೇಡು ತೀರಿಸಿಕೊಳ್ಳುವ ತವಕದಲ್ಲಿ ವಿರಾಟ್ ಪಡೆ -ಹೆಡಿಂಗ್ಲೆಯಲ್ಲಿ ಭರ್ಜರಿ ಅಭ್ಯಾಸ

ಸೇಡು ತೀರಿಸಿಕೊಳ್ಳುವ ತವಕದಲ್ಲಿ ವಿರಾಟ್ ಪಡೆ -ಹೆಡಿಂಗ್ಲೆಯಲ್ಲಿ ಭರ್ಜರಿ ಅಭ್ಯಾಸ

ಪ್ರತಿಷ್ಠಿತ ಲಾರ್ಡ್ಸ್ ಮೈದಾನದಲ್ಲಿ ಭರ್ಜರಿ ಗೆಲುವು ದಾಖಲಿಸಿದ ವಿಶ್ವಾಸದಲ್ಲಿರುವ ಟೀಮ್ ಇಂಡಿಯಾ, ಬುಧವಾರದಿಂದ ಆರಂಭವಾಗಲಿರುವ 3ನೇ ಟೆಸ್ಟ್ ಪಂದ್ಯಕ್ಕಾಗಿ ಸಮರಾಭ್ಯಾಸದಲ್ಲಿ ತೊಡಗಿದೆ.

ಹೆಡಿಂಗ್ಲೆ ಸ್ಟೇಡಿಯಂನಲ್ಲಿ ಮೂರನೇ ಟೆಸ್ಟ್ ಆರಂಭಗೊಳ್ಳಲಿದೆ. ಮೊದಲ ಟೆಸ್ಟ್ ಪಂದ್ಯ ಮಳೆಯಿಂದ ಡ್ರಾಗೊಂಡರೆ, ಎರಡನೇ ಟೆಸ್ಟ್ ಪಂದ್ಯವನ್ನು ಟೀಮ್ ಇಂಡಿಯಾ 151 ರನ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಇದರೊಂದಿಗೆ 5 ಪಂದ್ಯಗಳ ಸರಣಿಯಲ್ಲಿ ಟೀಮ್ ಇಂಡಿಯಾ 1-0 ಯಿಂದ ಮುನ್ನಡೆ ಸಾಧಿಸಿದೆ. 2018ರಲ್ಲಿ ಭಾರತ ತಂಡ 1-4 ರಿಂದ ಹೀನಾಯವಾಗಿ ಸರಣಿ ಸೋತಿದ್ದ ಟೀಮ್ ಇಂಡಿಯಾಕ್ಕೀಗ ಸೇಡು ತೀರಿಸಿಕೊಳ್ಳುವ ಅವಕಾಶ ಸಿಕ್ಕಿದೆ. ಆಂಗ್ಲರ ನೆಲದಲ್ಲಿ ಐತಿಹಾಸ ಟೆಸ್ಟ್ ಸರಣಿ ಜಯಿಸುವ ಅಪರೂಪದ ಅವಕಾಶ ಟೀಮ್ ಇಂಡಿಯಾ ಮುಂದಿದೆ.

Source: newsfirstlive.com Source link