‘ಇದು ನನ್ನ ಅತ್ಯಂತ ಬೆಸ್ಟ್​ ವರ್ಸ್ಟ್ ಲುಕ್’ -ಪ್ರಶಾಂತ್​ ನೀಲ್​​ಗೆ ಧನ್ಯವಾದ ತಿಳಿಸಿದ ಜಗಪತಿ ಬಾಬು

‘ಇದು ನನ್ನ ಅತ್ಯಂತ ಬೆಸ್ಟ್​ ವರ್ಸ್ಟ್ ಲುಕ್’ -ಪ್ರಶಾಂತ್​ ನೀಲ್​​ಗೆ ಧನ್ಯವಾದ ತಿಳಿಸಿದ ಜಗಪತಿ ಬಾಬು

ಕೆಜಿಎಫ್​ ಚಾಪ್ಟರ್​ 1 ಸಿನಿಮಾದೊಂದಿಗೆ ದೇಶದಾದ್ಯಂತ ಖ್ಯಾತಿ ಪಡೆದುಕೊಂಡಿರುವ ನಿರ್ದೇಶಕ ಪ್ರಶಾಂತ್​ ನೀಲ್​​, ಸದ್ಯ ಸಿಕ್ವೇಲ್​ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಕೆಜಿಎಫ್​ ಮೊದಲ ಚಾಪ್ಟರ್​​​​​ಗಿಂತ ಭಾರೀ ರೆಂಜ್​​ನಲ್ಲಿ ಚಾಪ್ಟರ್​​ 2 ವನ್ನು ತೆರೆಗೆ ತರುತ್ತಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ ಕೆಜಿಎಫ್ ಟೀಸರ್​ 2 ಪ್ರೇಕ್ಷಕರ ನಿರೀಕ್ಷೆಯನ್ನು ಡಬಲ್​ ಮಾಡಿದೆ. ಈ ಸಿನಿಮಾ ಬಳಿಕ ರೆಬಲ್​ ಸ್ಟಾರ್​ ಪ್ರಭಾಸ್​​ರೊಂದಿಗೆ ಸಲಾರ್​ ಸಿನಿಮಾವನ್ನು ಪ್ರಶಾಂತ್ ನೀಲ್​ ತೆರೆಗೆ ತರುತ್ತಿದ್ದಾರೆ.

ಸದ್ಯ ಸಲಾರ್ ಚಿತ್ರತಂಡ ಸಿನಿಮಾದ ಪ್ರಮುಖ ಅಪ್​​ಡೇಟ್​​ವೊಂದನ್ನು ಪ್ರೇಕ್ಷಕರ ಮುಂದಿಟ್ಟಿದ್ದು, ಬಹು ಭಾಷಾ ನಟ ಜಗಪತಿ ಬಾಬು ಅವರ ಫಸ್ಟ್​ಲುಕ್​​ ರಿವೀಲ್​ ಮಾಡಿದೆ. ಸಿನಿಮಾದಲ್ಲಿ ‘ರಾಜಮನಾರ್​’ ಪತ್ರದಲ್ಲಿ ಜಗಪತಿ ಬಾಬು ಕಾಣಿಸಿಕೊಳ್ಳುತ್ತಿದ್ದು, ಫೋಸ್ಟರ್​​ನಲ್ಲಿ ಮೂಗಿಗೆ ರಿಂಗ್​​, ಕೋಪದಿಂದ ಕೂಡಿರುವ ನೋಟದೊಂದಿಗೆ ಭಯಂಕರ ಲುಕ್​​ನಲ್ಲಿ ಜಗಪತಿ ಬಾಬು ದರ್ಶನ ಕೊಟ್ಟಿದ್ದಾರೆ.

blank

ಉಳಿದಂತೆ ಸಲಾರ್ ಸಿನಿಮಾದಲ್ಲಿ ಶೃತಿ ಹಾಸನ್​​ ಹೀರೋಯಿನ್​ ಆಗಿ ನಟಿಸುತ್ತಿದ್ದು, ರವಿ ಬಸರೂರ್ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್​​ ಎರಡು ಎರಡು ಗೆಟಪ್​ಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಟಾಕ್​ ಸಿನಿರಂಗದಲ್ಲಿ ಬಹುದಿನಗಳಿಂದ ಕೇಳಿ ಬರುತ್ತಿದೆ.

ಇತ್ತ ತಮ್ಮ ಸಲಾರ್ ಸಿನಿಮಾದಲ್ಲಿ ತಮ್ಮ ಮೊದಲ ಲುಕ್​ ಬಗ್ಗೆ ಪ್ರತಿಕ್ರಿಯೆ ನೀಡಿರುವ ನಟ ಜಗಪತಿ ಬಾಬು, ಇದು ನನ್ನ ಅತ್ಯಂತ ಬೆಸ್ಟ್​ ವರ್ಸ್ಟ್ ಲುಕ್​​.. ಪ್ರಶಾಂತ್ ನೀಲ್​ ನೆರವಿನಿಂದ ಅತ್ಯುತ್ತಮ ಅತ್ಯುತ್ತಮ ನಟನೆಯನ್ನು ಉತ್ಸುಕನಾಗಿದ್ದೇನೆ, ನನ್ನ ಜೀವನದೊಂದಿಗೆ ನಾನು ಪ್ರೀತಿಗೆ ಬಿದ್ದಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೇ ನಿರ್ದೇಶಕ ಪ್ರಶಾಂತ್ ನೀಲ್​, ಪ್ರಭಾಸ್​ ಹಾಗೂ ಹೊಂಬಾಳೆ ಸಂಸ್ಥೆಗೆ ಧನ್ಯವಾದ ತಿಳಿಸಿದ್ದಾರೆ.

Source: newsfirstlive.com Source link