4 ವರ್ಷ ಸಂಸಾರ ಮಾಡಿ..ಇನ್ನೊಂದು ಮದುವೆಯಾದ ಪತ್ನಿ.. ಹಾಸ್ಯನಟ ಕಂಗಾಲು..!

4 ವರ್ಷ ಸಂಸಾರ ಮಾಡಿ..ಇನ್ನೊಂದು ಮದುವೆಯಾದ ಪತ್ನಿ.. ಹಾಸ್ಯನಟ ಕಂಗಾಲು..!

ಮಂಡ್ಯ: ಕಳೆದರಡು ವರ್ಷಗಳಿಂದ ಮಾಹಾಮಾರಿ ಕೊರೊನಾ ನಮ್ಮ ಜೀವನದಲ್ಲಿ ಆಡಿದ ಆಟ ಅಷ್ಟಿಷ್ಟಲ್ಲ. ಕೆಲವು ಬದುಕುಗಳನ್ನು ಕೊರೊನಾ ಬೀದಿಗೆ ತಂದ್ರೆ, ಇನ್ನು ಕೆಲವರ ಬದುಕಿಗೆ ಲಾಕ್​​ಡೌನ್​ ಎಂಬ ಅಸ್ತ್ರದ ಮೂಲಕ ಮನೆಯಲ್ಲೇ ಇರಿಸಿ ಸಂಬಂಧಗಳ ಮೌಲ್ಯ ಏನೆಂಬುದನ್ನು ತೋರಿಸಿಕೊಟ್ಟಿತು.

blank

ಇದೆಲ್ಲದರ ನಡುವೆ ಕೊರೊನಾ ಹೊಡೆತಕ್ಕ ಎಷ್ಟೋ ಕುಟುಂಬಗಳು ಹೈರಾಣಾಗಿ ಹೋಗಿದ್ದು, ಮಂಡ್ಯದಲ್ಲಿ ಕೊರೊನಾ ಹೊಡೆತಕ್ಕೆ ಕಿರುತೆರೆ ಕಲಾವಿದನ 4 ವರ್ಷದ ಪ್ರೀತಿ ಕೊಚ್ಚಿ ಹೋಗಿದ್ದು, ಕಲಾವಿದ ಕಂಗಾಲಾಗಿದ್ದಾನೆ. ಹೌದು ಕನ್ನಡದ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ, ಹಾಸ್ಯ ಕಾರ್ಯಕ್ರಮವೊಂದರಲ್ಲಿ ನಟಿಸುತ್ತಿದ್ದ ನಟನ ಪತ್ನಿ ಬರೋಬ್ಬರಿ 3 ವರ್ಷ ಸಂಸಾರ ಮಾಡಿ, ಬಳಿಕ ಮತ್ತೊಂದು ಮದುವೆಯಾದ ಘಟನೆ ನಡೆದಿದೆ.

ಇದನ್ನೂ ಓದಿ: ಸಂಭ್ರಮದಿಂದ ರಕ್ಷಾ ಬಂಧನ ಹಬ್ಬ ಆಚರಿಸಿದ ಸನ್ನಿ ಲಿಯೋನ್​

ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕಾಳಸಿದ್ದನಹುಂಡಿಯ ರವಿ ಎಂಬ ಕಲಾವಿದ ಮಜಾಭಾರತ ಎಂಬ ಹಾಸ್ಯ ಕಾರ್ಯಕ್ರಮದಲ್ಲಿ ನಟಿಸುತ್ತಿದ್ದ. ಜೊತೆಗೆ ಸಣ್ಣ-ಪುಟ್ಟ ಸಿರಿಯಲ್‌ಗಳಲ್ಲಿ ನಟಿಸಿರುವ ರವಿ ಮೈಸೂರು ಮೂಲದ ಬೇಬಿ ಎಂಬ ಕಲಾವಿದೆಯ ಜೊತೆ ಪ್ರೇಮಾಂಕುರವಾಗಿದ್ದು, ಇಬ್ಬರ ಮನೆಯವರ ವಿರೋಧದ ನಡುವೆಯೂ, 4 ವರ್ಷದ ಹಿಂದೆ ರಿಜಿಸ್ಟರ್ ಮ್ಯಾರೆಜ್ ಆಗಿದ್ದ..

blank

ಬಳಿಕ ಮೈಸೂರಿನ ಬಾಡಿಗೆ ಮನೆಯಲ್ಲಿ 4 ವರ್ಷದಿಂದ ಸಂಸಾರ ನಡೆಸುತ್ತಿದ್ದ ಈ ಜೋಡಿ, ಖಾಸಗಿ ವಾಹಿನಿಯ ‘ಸೂಪರ್​ ದಂಪತಿ’ ಎಂಬ ಶೋನಲ್ಲೂ ಭಾಗವಹಿಸಿದ್ದರು. ಬಳಿಕ ಕೊರೊನಾ ಮೊದಲ ಅಲೆಯಲ್ಲಿ ಕೆಲಸವಿಲ್ಲದೆ ರವಿ ಸಂಕಷ್ಟಕ್ಕೆ ಸಿಲುಕಿದ್ದ ಎನ್ನಲಾಗಿದೆ. ಈ ವೇಳೆ ಪತ್ನಿ ಮತ್ತೊಬ್ಬನ ಜೊತೆ ಲವ್ವಿ ಡವ್ವಿ ಶುರು ಮಾಡಿದ್ದಳು ಎನ್ನಲಾಗಿದೆ.

ಇದನ್ನೂ ಓದಿ: 27ರ ಹರೆಯದ ಬಾಯ್​​ಫ್ರೆಂಡ್​ ತುಟಿಗೆ ತುಟಿಯೊತ್ತಿ 63ನೇ ಬರ್ತ್​ಡೇ ಆಚರಿಸಿಕೊಂಡ ಪಾಪ್​ ಕ್ವೀನ್ ಮಡೋನಾ..!

blank

ಅಕ್ರಮ ಸಂಬಂಧ ಬಹಿರಂಗವಾಗುತ್ತಿದ್ದಂತೆ ನಿನ್ನ ಬಳಿ ದುಡ್ಡಿಲ್ಲ ಎಂದು, ಕಾರಣವೊಡ್ಡಿದ ಪತ್ನಿ, ನನ್ನನ್ನು ಬಿಟ್ಟು, ಮತ್ತೊಂದು ಮದುವೆಯಾಗಿದ್ದಾಗಿ ಕಲಾವಿದ ರವಿ ಆರೋಪಿಸಿದ್ದು, ಮದುವೆ ತಡೆಯಲು ಹೋದ ತನ್ನ ಮೇಲೆ ಪತ್ನಿ ಎರಡನೇ ಗಂಡ ಹಾಗೂ ಆಕೆ ತಮ್ಮನಿಂದ ಹಲ್ಲೆ ಮಾಡಿರುವುದಾಗಿ ಆರೋಪಿಸಿದ್ದಾನೆ..

ಪತ್ನಿ ಬಿಟ್ಟು ಹೋಗಿರುವುದರಿಂದ ಕಂಗಾಲಾದ ರವಿ, ತನಗಾದ ಮೋಸದಂತೆ ಮತ್ಯಾರಿಗೂ ಆಗಬಾರದು, ಆಕೆಗೆ ಶಿಕ್ಷೆ ಆಗಬೇಕು ಅಂತ ನ್ಯಾಯಕ್ಕಾಗಿ ಕೋರ್ಟ್ ಮೊರೆ ಹೋಗಿದ್ದಾನೆ..

Source: newsfirstlive.com Source link