‘ಎದೆ ತುಂಬಿ ಹಾಡುವೆನು’ ವೇದಿಕೆಯಲ್ಲಿ ಕಣ್ಣೀರಧಾರೆ.. ಏನು ಕಾರಣ ಗೊತ್ತಾ..?

‘ಎದೆ ತುಂಬಿ ಹಾಡುವೆನು’ ವೇದಿಕೆಯಲ್ಲಿ ಕಣ್ಣೀರಧಾರೆ.. ಏನು ಕಾರಣ ಗೊತ್ತಾ..?

ಎದೆ ತುಂಬಿ ಹಾಡುವೆನು ವೇದಿಕೆಯಲ್ಲೊಂದು ಶಕ್ತಿಯಿದೆ ಅನ್ನೋದು ಪ್ರೂವ್ ಆಗಿದೆ. ಆ ಶಕ್ತಿಯ ತೀವ್ರತೆ ಎಷ್ಟಿತ್ತೂ ಅಂದ್ರೆ ಎಲ್ಲರ ಕಣ್ಣುಗಳು ಒದ್ದೆಯಾಗಿದ್ದವು. ಅದು ಒಂದು ಬಾರಿಯಲ್ಲ ಎರಡು ಬಾರಿ. ಸೂರ್ಯಕಾಂತ್ ಹಾಡಿದಾಗಲೂ ಕಣ್ಣೀರಿಟ್ಟರು. ರಾಜೇಶ್‌ ಕೃಷ್ಣನ್ ಹಾಡಿದಾಗ ಸ್ವತಃ ಅವ್ರೇ ಭಾವುಕರಾದರು.

blank

ಎದೆ ತುಂಬಿ ಹಾಡುವೆನು ಸಿಂಗಿಂಗ್ ಶೋ ಎಸ್​​ಪಿಬಿ ಅವರ ಅನುಪಸ್ಥಿತಿಯಲ್ಲಿ ಅವರು ಹಾಕಿಕೊಟ್ಟ ಅಡಿಪಾಯದಲ್ಲಿ ಯಶಸ್ವಿಯಾಗಿ ಸಾಗುತ್ತಿದ್ದು, ಸಾಕಷ್ಟು ವಿಶೇಷತೆಗಳಿಂದ ಕೂಡಿದೆ. ಸಂಗೀತ ಸಂಯೋಜಕ ವಿ.ಹರಿಕೃಷ್ಣ, ಮೆಲೋಡಿ ಕಿಂಗ್ ರಾಜೇಶ್ ಕೃಷ್ಣ ಹಾಗೂ ಸಂಗೀತ ಸಂಯೋಜಕ ರಘು ದೀಕ್ಷಿತ್ ಅವರು​ ಮಹಾ ಸ್ವರಾನ್ವೇಷಣೆಯಲ್ಲಿ ತೋಡಗಿದ್ದಾರೆ. ಎದೆ ತುಂಬಿ ಹಾಡುವೇನು ವೇದಿಕೆ ವಿಭಿನ್ನ ಶೈಲಿಯ ಗಾಯಕರಿಗೆ ಅವಕಾಶಗಳನ್ನು ನೀಡಿದ್ದು, ಅದ್ರಲ್ಲಿ ಮುಖ್ಯವಾಗಿ ಉತ್ತರ ಕರ್ನಾಟಕ ಪ್ರತಿಭೆ ಸೂರ್ಯಕಾಂತ್​ ಅವರ ಸಂಗೀತ ಕೇಳಿ ಇಡಿ ವೇದಿಕೆ ಭಾವುಕವಾಗಿತ್ತು.

blank

ಸೂರ್ಯಕಾಂತ್​ ಕಲಬುರಗಿ ಜಿಲ್ಲೆಯ ಪುಟ್ಟ ಹಳ್ಳಿ ಗಡಿಲಿಂಗದಹಳ್ಳಿ ಪ್ರತಿಭೆ.. ಇನ್ನೂ ವಿಶೇಷ ಅಂದ್ರೆ ಸೂರ್ಯಕಾಂತ್​ಗೆ ನಾಲಿಗೆ ತೂದಲಿಸುತ್ತದೆ.. ಅಂತಹ ವ್ಯಕ್ತಿ ಇನ್ನೊಬ್ಬರ ಮನಸ್ಸು ಕರಗುವಂತೆ ಹಾಡು ಹೇಳಿ ಎಲ್ಲರ ಮೆಚ್ಚುಗೆ ಪಡೆದು ಎದೆ ತುಂಬಿ ಹಾಡುವೇನು ವೇದಿಕೆಗೆ ಆಯ್ಕೆಯಾಗಿದ್ದು, ಈ ಬಗ್ಗೆ ಸೂರ್ಯಕಾಂತ್​ ಹರ್ಷ ವ್ಯಕ್ತಪಡೆಸಿದ್ದಾರೆ. ಎಸ್​ಪಿಬಿ ಅವರ ಸವಿ ನೆನಪುಗಳನ್ನ ನೆನೆದು ಪ್ರತಿ ಬಾರಿ ವೇದಿಕೆ ಭಾವುಕವಾಗುತ್ತದೆ. ಎಂತಹವರನ್ನು ಒಂದು ಕ್ಷಣ ಮೂಕರನ್ನಾಗಿಸುವ ಅದ್ಭುತ ಶಕ್ತಿ ಎದೆ ತುಂಬಿ ಹಾಡುವೆನು ವೇದಿಕೆಗಿದೆ ಎಂಬುವುದು ಪ್ರೂವ್​ ಆಗುತ್ತಲೇ ಇರುತ್ತೆ. ಎಸ್​ಪಿಬಿ ಅವರ ಮಾನಸ ಪುತ್ರ ಎಂದೇ ಪ್ರಸಿದ್ಧರಾದ ರಾಜೇಶ್​ ಕೃಷ್ಣನ್​ ಅವರು ಕೇಳದೇ ನಿಮಗಿಗ ಗೀತೆಯನ್ನ ಹಾಡಿ ಕಣ್ಣೀರಿಟ್ಟರು.

blank

 

Source: newsfirstlive.com Source link