ಅಖಂಡ ಶ್ರೀನಿವಾಸ್​​ಗೆ ಹಿನ್ನಡೆ; ಸುಪ್ರೀಂ ಕೋರ್ಟ್​ ಈ ಆದೇಶದಿಂದ ಸಂಪತ್​​​ ರಾಜ್ ನಿರಾಳ

ಅಖಂಡ ಶ್ರೀನಿವಾಸ್​​ಗೆ ಹಿನ್ನಡೆ; ಸುಪ್ರೀಂ ಕೋರ್ಟ್​ ಈ ಆದೇಶದಿಂದ ಸಂಪತ್​​​ ರಾಜ್ ನಿರಾಳ

ಬೆಂಗಳೂರು: ಡಿಜೆ ಹಳ್ಳಿ- ಕೆಜೆ ಹಳ್ಳಿ ಗಲಾಟೆ ವಿಚಾರದಲ್ಲಿ ಬೆಂಗಳೂರಿನ ಮಾಜಿ ಮೇಯರ್ ಸಂಪತ್ ರಾಜ್​​ ಮತ್ತೊಮ್ಮೆ ನಿರಾಳರಾಗಿದ್ದಾರೆ.

ಗಲಾಟೆ ಪ್ರಕರಣದಲ್ಲಿ ಜೈಲು ಸೇರಿದ್ದ ಸಂಪತ್​​ ರಾಜ್​ ಇತ್ತೀಚೆಗೆ ಷರತ್ತುಬದ್ಧ ಜಾಮೀನು ಪಡೆದು ಹೊರ ಬಂದಿದ್ದರು. ಇದನ್ನ ಪ್ರಶ್ನಿಸಿ ಶಾಸಕ ಅಖಂಡ ಶ್ರೀನಿವಾಸನ್ ಮೂರ್ತಿ ಸುಪ್ರೀಂಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಸಂಪತ್ ರಾಜ್​ಗೆ ನೀಡಿರುವ ಜಾಮೀನು ರದ್ದುಗೊಳಿಸಬೇಕು ಎಂದು ಶ್ರೀನಿವಾಸಮೂರ್ತಿ ಸುಪ್ರೀಂ ಕೋರ್ಟ್​ನಲ್ಲಿ ಮನವಿ ಮಾಡಿಕೊಂಡಿದ್ದರು. ನ್ಯಾ.ಸಂಜಯ್ ಕಿಶನ್ ಕೌಲ್ ನೇತೃತ್ವದಲ್ಲಿ ವಿಚಾರಣೆ ನಡೆದಿತ್ತು. ಈ ಹಿಂದೆ ಕರ್ನಾಟಕ ಹೈಕೋರ್ಟ್ ನೀಡಿದ್ದ ಆದೇಶವನ್ನ ಸುಪ್ರೀಂ ಕೋರ್ಟ್ ಇಂದು ಎತ್ತಿ ಹಿಡಿದಿದೆ. ಈ ಮೂಲಕ ಅಖಂಡ ಶ್ರೀನಿವಾಸ್​​ಗೆ ಈ ಪ್ರಕರಣದಲ್ಲಿ ಮತ್ತೊಮ್ಮೆ ಹಿನ್ನಡೆಯಾಗಿದೆ.

Source: newsfirstlive.com Source link