IPL ಸೆಣಸಾಟಕ್ಕೆ ಆರ್​ಸಿಬಿ ತಯಾರಿ.. ಬೆಂಗಳೂರಲ್ಲಿ ಕ್ವಾರಂಟೀನ್​ಗೆ ಒಳಗಾದ ಆಟಗಾರರು

IPL ಸೆಣಸಾಟಕ್ಕೆ ಆರ್​ಸಿಬಿ ತಯಾರಿ.. ಬೆಂಗಳೂರಲ್ಲಿ ಕ್ವಾರಂಟೀನ್​ಗೆ ಒಳಗಾದ ಆಟಗಾರರು

14ನೇ ಆವೃತ್ತಿಯ ಐಪಿಎಲ್​​ನ ದ್ವಿತಿಯಾರ್ಧಕ್ಕೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಜ್ಜಾಗುತ್ತಿದೆ. ಯುಎಇನಲ್ಲಿ ಸೆಪ್ಟೆಂಬರ್‌ 19ರಿಂದ ಅಕ್ಟೋಬರ್‌ 15ರವರೆಗೆ ನಡೆಯಲಿರುವ ಐಪಿಎಲ್ 2ನೇ ಹಂತದ ಟೂರ್ನಿಗಾಗಿ ಆರ್‌ಸಿಬಿ ಬೆಂಗಳೂರಿನಲ್ಲಿ ಕ್ವಾರಂಟೀನ್​ಗೆ ಒಳಗಾಗಿದೆ.

ಬೆಂಗಳೂರಿನ ಲೀಲಾ ಪ್ಯಾಲೇಸ್​​ನಲ್ಲಿ ತಂಡ ಕ್ವಾರಂಟೀನ್​ಗೆ ಒಳಗಾಗಿದ್ದು, ಈ ವಿಡಿಯೋವನ್ನ ಆರ್​​ಸಿಬಿ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಪೋಸ್ಟ್​ ಮಾಡಿದೆ. ಈ ವಿಡಿಯೋದಲ್ಲಿ ಆಟಗಾರರು, ಐಪಿಎಲ್ ಮತ್ತೆ ಶುರುವಾಗುವುದರ ಬಗ್ಗೆ ಸಂತಸ ವ್ಯಕ್ತಪಡಿಸಿದ್ದಾರೆ. ವೇಗಿ ನವದೀಪ್ ಸೈನಿ, ಆಲ್​ರೌಂಡರ್ ಹರ್ಷಲ್ ಪಟೇಲ್, ಶಹಬಾಝ್ ಅಹ್ಮದ್ ಇತರರು ಮಾತನಾಡಿದ್ದು, ನಾವು 2ನೇ ಹಂತದ ಪಂದ್ಯಕ್ಕೆ ಸಜ್ಜಾಗುತ್ತಿದ್ದೇವೆ.

ಐಪಿಎಲ್ ಮತ್ತೆ ಬರುತ್ತಿರುವುದು ಖುಷಿ ನೀಡಿದೆ. ಈ ಕ್ಷಣಕ್ಕಾಗಿಯೇ ನಾವು ಕಾಯುತ್ತಿದ್ದೆವು ಎಂದು ತಿಳಿಸಿದ್ದಾರೆ. 14ನೇ ಆವೃತ್ತಿಯ ಐಪಿಎಲ್ ಆರಂಭಿಕ ಹಂತದಲ್ಲಿ ವಿರಾಟ್ ಕೊಹ್ಲಿ ನಾಯಕತ್ವದ ಆರ್‌ಸಿಬಿ ಉತ್ತಮ ಪ್ರದರ್ಶನ ನೀಡಿದೆ. ದ್ವಿತೀಯ ಹಂತದ ಪಂದ್ಯಗಳು ಆರಂಭಕ್ಕೂ ಮುನ್ನ ಆರ್‌ಸಿಬಿ ತಂಡದಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಹೀಗಾಗಿ ಪ್ರದರ್ಶನದ ಬಗ್ಗೆ ಅಭಿಮಾನಿಗಳ ಕುತೂಹಲ ಇನ್ನೂ ಹೆಚ್ಚಾಗಿದೆ.

Source: newsfirstlive.com Source link