ರಾಕಿ ಭಾಯ್ ಲುಕ್​ ಕಾಪಿ ಮಾಡಿದ್ರಾ ಸಲ್ಲು ಭಾಯ್​?

ರಾಕಿ ಭಾಯ್ ಲುಕ್​ ಕಾಪಿ ಮಾಡಿದ್ರಾ ಸಲ್ಲು ಭಾಯ್​?

ಬಾಲಿವುಡ್ ನಟ ಸಲ್ಮಾನ್ ಖಾನ್​ ​ರವರ ‘ಟೈಗರ್​-3’ ಚಿತ್ರದ ಸಲ್ಲು ಪಾತ್ರದ ಲುಕ್​ ಲೀಕ್​ ಆಗಿದ್ದು, ಸೋಶಿಯಲ್​ ಮೀಡಿಯಾಲ್ಲಿ ಸಖತ್ ವೈರಲ್​ ಆಗಿದೆ.

ಉದ್ದನೆ ಗಡ್ಡ ಕೆಂಪು ಬಣ್ಣದ ತಲೆಗೂದಲು ಇರುವ ಸಲ್ಲು ಭಾಯ್​ ಹೊಸ ಲುಕ್​ ನೋಡಿದ ಕೆಲ ಅಭಿಮಾನಿಗಳು ಸಲ್ಲು ಗೆಟಪ್​ ನೋಡಿ ಕನ್​ಫ್ಯೂಸ್​ ಆದ್ರೆ, ಇನ್ನು ಕೆಲ ಅಭಿಮಾನಿಗಳು ಸಲ್ಲು ಕೆಜಿಎಫ್​ ಚಿತ್ರದ ರಾಕಿ ಭಾಯ್​ ಪಾತ್ರದ ಲುಕ್​​​ಅನ್ನು ಕಾಪಿ ಮಾಡಿದ್ದಾರಾ ಅಂತಾ ಪ್ರಶ್ನೆ ಮಾಡಿ ಕಮೆಂಟ್​ ಮಾಡಿದ್ದಾರೆ.

blank

ಹೌದು, ರಾಕಿಂಗ್​ ಸ್ಟಾರ್ ಯಶ್​ ‘ಕೆಜಿಎಫ್​ -1’ ರಲ್ಲಿ ಜೋಕೆ ನಾನು ಬಳ್ಳಿಯ ಮಿಂಚು ಹಾಡಿನಲ್ಲಿ ಧರಿಸಿದ ಕೆಂಪು ಮತ್ತು ಬಿಳ್ಳಿ ಬಣ್ಣದ ಕಾಸ್ಟ್ಯೂಮ್​ ಕಲರ್​ಅನ್ನು ಕಾಪಿ ಮಾಡಿದ್ದಾರೆ ಎಂದು ನೆಟ್ಟಿಗರು ಹೇಳುತ್ತಿದ್ದಾರೆ. ಇನ್ನು ಸಲ್ಲು ಭಾಯ್​ ಈ ಹೊಸ ಲುಕ್​ನಲ್ಲಿ ಉದ್ದನೆ ಗಡ್ಡಬಿಟ್ಟಿದು, ಅದು ಕೂಡ ಯಶ್​ರ ಕೆಜಿಎಫ್​ ಲುಕ್​ಗೆ ಹೊಲಿಕೆಯಾಗುತ್ತಿದೆ ಅಂತಾ ನೆಟ್ಟಿಗರು ಪ್ರತಿಕ್ರಿಯೆ ನೀಡುತ್ತಿದ್ದಾರೆ.

blank

ಇದನ್ನು ಓದಿ: ರಷ್ಯಾದಿಂದ ಲೀಕ್​ ಆಯ್ತು ಟೈಗರ್​-3 ಚಿತ್ರದ ಸಲ್ಲು ಹೊಸ ಲುಕ್​​ ಫೋಟೋ ಲೀಕ್​​ 

Source: newsfirstlive.com Source link