ಬೆಂಗಳೂರಲ್ಲಿ ಬಾಯ್ಲರ್​ ಸ್ಫೋಟ.. ಬಿಹಾರ ಮೂಲದ ಇಬ್ಬರೂ ಸಾವು

ಬೆಂಗಳೂರಲ್ಲಿ ಬಾಯ್ಲರ್​ ಸ್ಫೋಟ.. ಬಿಹಾರ ಮೂಲದ ಇಬ್ಬರೂ ಸಾವು

ಬೆಂಗಳೂರು: ನಗರದ ಮಾಗಡಿ ರಸ್ತೆಯ ರೆಸಿಡೆನ್ಸಿ ಏರಿಯಾದಲ್ಲಿರೋ ಫ್ಯಾಕ್ಟರಿಯೊಂದರಲ್ಲಿ ಬಾಯ್ಲರ್​​ ಸ್ಫೋಟಗೊಂಡು ಬಿಹಾರಿ ಮೂಲದ ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ. ಈ ದುರ್ಘಟನೆಯಲ್ಲಿ ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

blank ವಿಜಯ್ ಮೆಹ್ತಾ ಮತ್ತು ಸಚಿನ್ ಎಂಬುವರಿಗೆ ಈ ಫ್ಯಾಕ್ಟರಿ ಸೇರಿತ್ತು. ಈ ಘಟನೆ, ಮಧ್ಯಹ್ನ 1:30ರ ಸುಮಾರಿಗೆ ನಡೆದಿದ್ದು, ಘಟನೆಯಲ್ಲಿ ಓರ್ವ ಮಾಲೀಕ ಸಚಿನ್ ಕೂಡ ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆಯ ತೀವ್ರತೆಗೆ ಫ್ಯಾಕ್ಟರಿಯ ಮೇಲ್ಛಾವಣಿ ಮೂರು ಕಡೆ ಹಾರಿ ಹೋಗಿದೆ. ಘಟನೆ ನಡೆದಾಗ, ಫ್ಯಾಕ್ಟರಿಯಲ್ಲಿ 5 ಜನ ಕೆಲಸ ಮಾಡಿಕೊಂಡಿದ್ರು.ಅಷ್ಟೇ ಅಲ್ಲ, ಇಂದಿನಿಂದ ಶಾಲೆಗಳು ಓಪನ್​ ಆಗಿದ್ದರಿಂದ, ಸ್ಪೋಟಗೊಂಡ ಕಟ್ಟಡಕ್ಕೆ ಒಂದು ಶಾಲೆ ಹೊಂದಿಕೊಂಡಂತಿದೆ. ಆ ಶಾಲೆಯಲ್ಲಿ ಬೆಳಿಗ್ಗೆ ಮಕ್ಕಳು ಬಂದಿದ್ರು, ಆದ್ರೆ ಘಟನೆ ನಡೆಯೋ ಮೊದಲೇ ಶಾಲಾ ಕಟ್ಟಡದಿಂಧ ಮಕ್ಕಳು ವಾಪಸ್​ ಹೋಗಿದ್ದಾರೆ. ಹೀಗಾಗಿ, ಇದರಿಂದ ದೊಡ್ಡ ಪ್ರಮಾಣದ
ಅನಾಹುತ ತಪ್ಪಿದೆ.

blank

blank

Source: newsfirstlive.com Source link